ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ: ಅರಿಯಡ್ಕ ಶಾಲಾ ಬಾಲಕಿಯರ ವಿಭಾಗ ರನ್ನರ್ಸ್

0

ಅರಿಯಡ್ಕ ಸರಕಾರಿ ಪ್ರೌಢಶಾಲೆ ಪಾಪೆಮಜಲು ಇಲ್ಲಿಯ ಕ್ರೀಡಾಪಟುಗಳು ಸೆ.1 ರಂದು ಸಂತ ಥೋಮಸ್ ಪ್ರೌಢ ಶಾಲೆ ಮೂಡಬಿದ್ರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ರನ್ನರ್ಸ್ ಚಾಂಪಿಯನ್ ತನ್ನದಾಗಿಸಿಕೊಂಡಿದ್ದಾರೆ. ತಂಡದ ನಾಯಕಿ ದೀಕ್ಷಿತಾ ಬಿ ಸರ್ವಾಂಗೀಣ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ತಂಡದ ಆಟಗಾರ್ತಿಯರಾದ ದೀಕ್ಷಿತಾ ಬಿ, ಪ್ರೀತಿಕಾ, ಶ್ರಾವ್ಯ,ನಯನ ಶ್ರೀ, ಮತ್ತು ಭವ್ಯಶ್ರೀ,ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕೆ ಪ್ರವೀಣ ರೈ ಕ್ರೀಡಾ ಪಟುಗಳಿಗೆ ತರಬೇತಿ ನೀಡಿರುತ್ತಾರೆ.‌

LEAVE A REPLY

Please enter your comment!
Please enter your name here