





ಪುತ್ತೂರು: ಬೆಳಂದೂರು ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸವಣೂರು ಮೊಗರು ಸ.ಹಿ.ಪ್ರಾ.ಶಾಲೆಯು ಹಿರಿಯರ ವಿಭಾಗದಲ್ಲಿ ಸಮಗ್ರ ದ್ವಿತೀಯ ಚಾಂಪಿಯನ್‌ನ್ನು ತನ್ನದಾಗಿಸಿಕೊಂಡಿದೆ ಹಿರಿಯರ ವಿಭಾಗದ ಭಕ್ತಿಗೀತೆಯಲ್ಲಿ ಅಝ್ಮಿಯಾ ಪ್ರಥಮ ಸ್ಥಾನ ಪಡೆದಿದ್ದು ಭಾಷಣದಲ್ಲಿ ನಿಶ್ಮಾ ಹಾಗೂ ಹಾಸ್ಯದಲ್ಲಿ ನಿಶಾನ್ ಪ್ರಥಮ ಸ್ಥಾನ ಪಡೆದಿದ್ದಾರೆ.


ಛದ್ಮವೇಷ ಸ್ಪರ್ಧೆಯಲ್ಲಿ ನಿಶಾನ್ ದ್ವಿತೀಯ ಸ್ಥಾನ ಪಡೆದಿದ್ದು ಕಥೆ ಹೇಳುವುದರಲ್ಲಿ ಸಮೀದಾ, ಚಿತ್ರಕಲೆಯಲ್ಲಿ ಸೈಮ ಹಾಗೂ ಆಶುಭಾಷಣದಲ್ಲಿ ನಿಶ್ಮಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.





ಕನ್ನಡ ಕಂಠಪಾಠದಲ್ಲಿ ಸೈಮ ತೃತೀಯ ಸ್ಥಾನ ಪಡೆದಿದ್ದು ಧಾರ್ಮಿಕ ಪಠಣದಲ್ಲಿ ಅಝ್ಮಿಯಾ, ಕ್ಲೇ ಮಾಡಲಿಂಗ್‌ನಲ್ಲಿ ಮುಸ್ಪಿರಾ ಕೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಿರಿಯರ ವಿಭಾಗದಲ್ಲಿ ನಫೀಸ ನೌಫ ಅವರು ಕನ್ನಡ ಕಂಠಪಾಠದಲ್ಲಿ ಪ್ರಥಮ ಹಾಗೂ ಆಶು ಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೀಷ್ ಕಂಠಪಾಠದಲ್ಲಿ ಫಾತಿಮತ್ ಅಲ್ಫಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.




