





ಪುತ್ತೂರು: ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆವರ್ತ-ಗಣಿತ ಸಂಘದ ವತಿಯಿಂದ ಏರ್ಪಡಿಸಲಾದ ಗಣಿತ-ಪ್ರಯೋಗಾತ್ಮಕ ಬೋಧನೆ ಎಂಬ ವಿಷಯದಲ್ಲಿ ಗಣಿತ ವಿಷಯ ಬೋಧಕ ಶಿಕ್ಷಕರಿಗೆ ಶಾಲಾ ಆಡಳಿತ ಮಂಡಳಿ ಸದಸ್ಯ, ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಕೆದಿಲ ಇವರು ಗಣಿತ ಕಲಿಕೋಪಕರಣ ತಯಾರಿ ಬಗ್ಗೆ ಅವಧಿ ನಡೆಸಿಕೊಟ್ಟರು.








ಶಾಲೆಯಲ್ಲಿ ಗಣಿತ ಪ್ರಯೋಗಾಲಯ ಮಾಡುವ ಯೋಜನೆಯಂತೆ ವಿಭಿನ್ನ ಚಟುವಟಿಕೆಗಳು ನಡೆಯುತ್ತಿದ್ದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಗಣಿತ ಕಲಿಕೋಪಕರಣ ತಯಾರಿಯಲ್ಲಿ ತೊಡಗಿರುತ್ತಾರೆ.






