ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ವಟ್ಲಾ ನಿವಾಸಿ ದೇವರಾಜ್ ಎಂಬವರ ಪುತ್ರಿ ಶಿಲ್ಪಾರವರು ತಲೆಯಲ್ಲಿ ನರದ ಸಮಸ್ಯೆಯ ಕಾಯಿಲೆಯಿಂದ ಬಳಲುತ್ತಿದ್ದು ಇದಕ್ಕೆ ಸುಮಾರು ರೂ.15 ಲಕ್ಷ ಚಿಕಿತ್ಸಾ ವೆಚ್ಚ ಬೇಕಾಗಿದ್ದು ಕಾರ್ಕಳ ಎಸ್‌ಕೆಆರ್‌ಡಿಪಿ ಫ್ರೆಂಡ್ಸ್ ಹಾಗೂ ಮಂಜುಶ್ರೀ ಯುವ ಸೇವಾ ಬಳಗದ ವತಿಯಿಂದ ರೂ. 1,06,118 ಧನ ಸಹಾಯ ಸಂಗ್ರಹಿಸಿ ವಿತರಿಸಲಾಯಿತು.
ಕಾರ್ಕಳ ಎಸ್‌ಕೆಡಿಆರ್‌ಡಿಪಿ ಫ್ರೆಂಡ್ಸ್ ಟೀಮ್‌ನಲ್ಲಿ 126 ಸದಸ್ಯರನ್ನೊಳಗೊಂಡ, ಸೇವೆಯ ಉದ್ದೇಶಕ್ಕಾಗಿ ರಚಿತವಾಗಿರುವ ವಾಟ್ಸಪ್ ಗ್ರೂಪ್ ಆಗಿದ್ದು, ಈ ಗ್ರೂಪ್‌ನ ಮೂಲಕ 72,600 ರೂ. ಸಂಗ್ರಹಿಸಿದ್ದರು. ಮಂಜುಶ್ರೀ ಯುವ ಸೇವಾ ಬಳಗದವರು ಮೂಡಬಿದ್ರೆ ಗಣೇಶ ವಿಸರ್ಜನೆಯ ಸಂದರ್ಭ ಸಂತೋಷ್ ಪಿ ಅಳಿಯೂರು, ಗುಣಕರ್ ನೆಲ್ಯಾಡಿ, ಪಾರ್ಶ್ವನಾಥ್ ಜೈನ್, ಇಂದುಚೇತನ್ ಬೋರುಗುಡ್ಡೆ, ಜಯಕರ್, ಅಶೋಕ್, ವಿನೀತ್ ಆರ್, ಕೋಟ್ಯಾನ್, ಅಶೋಕ್, ಮಹೇಶ್‌ರವರ ಟೀಮ್ ವತಿಯಿಂದ ಯಕ್ಷಗಾನದ ವೇಷ ಹಾಕಿ 33518 ರೂಪಾಯಿಗಳನ್ನು ಸಂಗ್ರಹ ಮಾಡಿದ್ದರು. ಒಟ್ಟು ಸಂಗ್ರಹವಾದ 1,06,118 ರೂ.ಪಾಯಿಯನ್ನು ಶಿಲ್ಪಾ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಮಂಗಳೂರು ತಾಲೂಕು ಯೋಜನಾ ಕಚೇರಿಯ ಯೋಜನಾಧಿಕಾರಿ ಚೆನ್ನಕೇಶವ, ಎಂಐಎಸ್ ಯೋಜನಾಧಿಕಾರಿ ಗೋಪಾಲ್ ಆಚಾರ್ಯ, ಸುರಕ್ಷಾ ವಿಭಾಗದ ಹಿರಿಯ ಸಹಾಯಕ ವಸಂತ, ಆಂತರಿಕ ಲೆಕ್ಕಪರಿಶೋಧಕಿ ವಿದ್ಯಾಲತಾ, ಎರಡು ತಂಡದ ಗುಣಕರ, ಸಂತೋಷ ಪಿ ಅಳಿಯೂರು, ಶಿಲ್ಪಾರವರ ತಂದೆ ದೇವರಾಜ್ ಹಾಗೂ ಸಹೋದರಿ ಉಸ್ಥಿತರಿದ್ದರು.