ಕೆಮ್ಮಾರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಶಿಕ್ಷಕರೊಂದಿಗಿನ ಬಾಂಧವ್ಯ ಅಕ್ಷರದ ಜೊತೆಗೆ ಜೀವನದ ಪಾಠ ಕಲಿಸುತ್ತದೆ; ವಿದ್ಯಾರ್ಥಿ ನಾಯಕ ಮೊಹಮ್ಮದ್ ಫಝಲ್

ಕೆಮ್ಮಾರ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನದ ಪ್ರಯುಕ್ತ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ವಿದ್ಯಾರ್ಥಿ ನಾಯಕ ಮೊಹಮ್ಮದ್ ಫಝಲ್, ನಮಗೆ ನಮ್ಮ ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಬಿತ್ತುವ ಅಕ್ಷರ ಜ್ಞಾನ ಮತ್ತು ನಮ್ಮೊಂದಿಗಿನ ಬಾಂಧವ್ಯ, ತಿದ್ದಿ ತೀಡುವುದು, ಇವೆಲ್ಲವೂ ನಮ್ಮ ಭವಿಷ್ಯದ ಬದುಕಿಗೆ ನೀಡುವ ದಾರಿದೀಪವಾಗಿದೆ. ನಮ್ಮ ಶಿಕ್ಷಕರ ಪರಿಶ್ರಮಕ್ಕೆ ಅಭಿನಂದನೆ ಸಲ್ಲಿಸಿ ಶಿಕ್ಷಕರ ದಿನಾಚರಣೆಯ ಶುಭಾಶಯ ಹೇಳಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ಶಿಕ್ಷಕರಿಗೊಸ್ಕರ ವಿವಿಧ ಕಲಾ ಮತ್ತು ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಕ್ಕಳು ತಮ್ಮ ನೆಚ್ಚಿನ ಶಿಕ್ಷಕರಿಗೆ ವಿವಿಧ ಉಡುಗೋರೆ ಹಾಗೂ ತಿಂಡಿಗಳನ್ನು ನೀಡಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಮ್ಮಾರ ಶಾಲಾ ಮುಖ್ಯೋಪಾಧ್ಯಾಯರಾದ ಜಯಶ್ರೀ ಎಮ್.,ರವರು ಮಕ್ಕಳೆಲ್ಲರೂ ಒಟ್ಟು ಸೇರಿ ಇಂತಹ ಒಂದು ಅಚ್ಚುಕಟ್ಟಾದ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ. ಇದರಿಂದ ಅವರ ಕಲಿಕಾ ಮತ್ತು ಶೈಕ್ಷಣಿಕ ಪ್ರಗತಿ ಎದ್ದು ಕಾಣುತ್ತಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿಯಾಗಿದೆ. ಅದನ್ನು ಮಕ್ಕಳು ತಮ್ಮ ವಿಶಿಷ್ಟ ರೀತಿಯ ಕ್ರಿಯಾತ್ಮಕವಾಗಿ ನಡೆಸಿಕೊಂಡು ಬರುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ, ಉಪಾಧ್ಯಕ್ಷೆ ಸುಮಯ್ಯ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ವಾಮನ ಬರಮೇಲು, ಸೆಲಿಕತ್, ಪದ್ಮನಾಭ ಶೆಟ್ಟಿ ಬಡಿಲ, ಅಬ್ಬಾಸ್, ರಶೀದ ಮತ್ತು ಶಾಲಾ ಶಿಕ್ಷಕರಾದ ವೆಂಕಟ್ರಮಣ ಭಟ್, ಜುನೈದ್, ಶ್ರೀಮತಿ ಮೋಹನಾಂಗಿ, ಶ್ರೀಮತಿ ಸುಮನಾ, ಶ್ರೀಮತಿ ಮೆಹನಾಝ್, ಶಹನಾಝ್, ರೈಹಾನ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಮೊಹಮ್ಮದ್ ಅನಸ್ ಸ್ವಾಗತಿಸಿದರು. ಫಾತಿಮತ್ ಮಿಸ್ರೀಯ ಕಾರ್ಯಕ್ರಮ ನಿರೂಪಿಸಿ, ಮಹಮ್ಮದ್ ಔಫ್ ವಂದಿಸಿದರು.

LEAVE A REPLY

Please enter your comment!
Please enter your name here