ಪುತ್ತೂರು: ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಆರ್ಯಾಪು ಗ್ರಾ.ಪಂ ಹಾಗೂ ಕುರಿಯ ಸ.ಉ.ಹಿ.ಪ್ರಾ.ಶಾಲೆಯ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಅಧ್ಯಯನ ಶಿಬಿರ ಕುರಿಯ ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ಯನ್ನು ಆರ್ಯಾಪು ಗ್ರಾ.ಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ ವಹಿಸಿದ್ದರು.
ಕುರಿಯ ಸ.ಉ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಎಂ.ಎಸ್, ಕುರಿಯ ಶಾಲಾ ಶಿಕ್ಷಕಿ ಲೀಲಾವತಿ, ಯುವ ಉದ್ಯಮಿ ಶಿವರಾಮ ಆಳ್ವ ಬಳ್ಳಮಜಲು, ಕುರಿಯ ಶಾಲಾ ಹಿರಿಯ ವಿದ್ಯಾರ್ಥಿಗಳಾದ ವಿದ್ಯಾರ್ಥಿ ಅಶ್ರಫ್ ಕೆ, ಆಸಿಫ್ ಎ.ಆರ್, ಗ್ರಾ.ಪಂ ಮಾಜಿ ಸದಸ್ಯ ಸುಂದರ ಬೊಳಂತಿಮಾರ್, ಧನರಾಜ್ ಅಲೆಕ್ಕಿ, ಅಂಗನವಾಡಿ ಕಾರ್ಯಕರ್ತೆಯರಾದ ಕಮಲಾ, ಶೋಭಾ, ಆಶಾ ಕಾರ್ಯಕರ್ತೆಯರಾದ ಸುಕನ್ಯ, ಯಮುನಾ, ಪ್ರಾಧ್ಯಾಪಕಿ ಬಿಂದು ಕೆ.ಎಸ್, ಸಹಾಯಕ ಪ್ರಾಧ್ಯಾಪಕರಾದ ಅಬ್ದುಲ್ ರಶೀದ್, ಪ್ರಜ್ವಲ್ ಡಿ, ಎಸ್.ಡಿ.ಎಂ.ಸಿ ಸದಸ್ಯ ಇಲ್ಯಾಸ್ ಅಜ್ಜಿಕಟ್ಟೆ, ಜಯರಾಜ್ ಶೆಟ್ಟಿ, ಮೇಘಸಿ, ದೀಪಕ್ ಕೆ.ಬಿ, ರಶ್ಮಿ ಟಿ ಹಾಗೂ ಪೋಷಕರು, ವಿದ್ಯಾರ್ಥಿಗಳು, ಊರವರು ಉಪಸ್ಥಿತರಿದ್ದರು.