ಸೆ.18ರಂದು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಪುತ್ತೂರು : ಪುತ್ತೂರು ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲ್ಹಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ಸುರೇಶ್ರೈ ಸೂಡಿಮುಳ್ಳು, ಅಧ್ಯಕ್ಷರಾಗಿ ಶ್ಯಾಮ್ ಮಂಜುನಾಥ ಪ್ರಸಾದ್, ಉಪಾಧ್ಯಕ್ಷರಾಗಿ ದಾವೂದ್, ಕಾರ್ಯದರ್ಶಿಯಾಗಿ ಪ್ರಕಾಶ್ ಡಿ.ಸೋಜ, ಸಹ ಕಾರ್ಯದರ್ಶಿಯಾಗಿ ಯೋಗೀಶ್ ಕಾವು, ಕೋಶಾಽಕಾರಿಯಾಗಿ ಪ್ರದೀಪ್ ಕೆ., ಸಂಘಟನಾ ಕಾರ್ಯದರ್ಶಿಯಾಗಿ ಮನೋಹರ ಶೆಟ್ಟಿ, ಗೌರವ ಸಲಹೆಗಾರರಾಗಿ ಹೆನ್ಸರಿ ಡಿ’ಸೋಜ, ಸಿಪ್ರಿಯನ್ ಡಿ’ಸೋಜಾ ಅವರು ಆಯ್ಕೆಯಾಗಿದ್ದಾರೆ.
ಸೆ.18ರಂದು ಪದಗ್ರಹಣ ಸಮಾರಂಭ: ಪುತ್ತೂರು ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲ್ಹಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ.18ರಂದು ಪಡೀಲು ಎಂ.ಡಿ.ಎಸ್. ಸಭಾಂಗಣದಲ್ಲಿ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು ಅವರು ಸಮಾರಂಭವನ್ನು ಉದ್ಘಾಟಿಸುವರು, ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷರಾದ ಬಾಬು ಕೆ.ಟ್ಲ ವಸುವರು. ದ.ಕ. ಜಿಲ್ಲಾಧ್ವನಿ ವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸುವರು.
ಮುಖ್ಯ ಅತಿಥಿಗಳಾಗಿ ಪುತ್ತೂರು ಎಪಿಎಂಸಿಯ ಮಾಜಿ ಅಧ್ಯಕ್ಷ ದಿನೇಶ್ ಮೆದು, ಮಂಗಳೂರು ಪೂಣ್ಯಟೆಂಟ್ ಮತ್ತು ಕ್ಲೋ ಇದರ ಮಾಲಕ ರಾಜೇಶ್ ಕುಮಾರ್, ದ.ಕ.ಜಿಲ್ಲಾ ಶಾಯಾನ ಮ್ಹಾಲಕರ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ ಮಿಜಾರು, ಗೌರವ ಉಪಸ್ಥಿತಿಯಾಗಿ ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲ್ಹಕರ ಸಂಘದ ಅಧ್ಯಕ್ಷರಾಗಿ ರಿಧರ ಸ್ಕಂದ, ಬೆಳ್ತಂಗಡಿ ಧ್ವನಿ ವರ್ಧಕ ಮತ್ತು ದೀಪಾಲಂಕಾರ ಮಾಲ್ಹಕರ ಸಂಘ ಅಧ್ಯಕ್ಷ ಚಂದ್ರಶೇಖರ ಎಂ., ಬಂಟ್ವಾಳ ತಾಲೂಕು ಧ್ವನಿ ಬೆಳಕು ಸಂಯೋಜಕರ ಒಕ್ಕೂಟದ ಅಧ್ಯಕ್ಷ ಧನರಾಜ್ ಶೆಟ್ಟಿ ಫರಂಗಿಪೇಟೆ, ಮಂಗಳೂರು ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷ ಕ್ಲೇವರ್ ಡಿ’ಸೋಜ, ಬಂಟ್ವಾಳ ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷ ಪಿಯುಸ್ ಮ್ಯಾಕ್ಸಿಮ್ ಸಿಕ್ವೇರಾ, ಮೂಡಬಿದಿರೆ ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷ ಗಣೇಶ್ ಕಾಮತ್, ಬೆಳ್ತಂಗಡಿ ತಾಲೂಕು ಶಾಮಿಯಾನ ಮ್ಹಾಲಕರ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ಪದಾಽಕಾರಿಗಳು ತಿಳಿಸಿದ್ದಾರೆ.