ಸೆ.21: ಬಡಗನ್ನೂರು ಗ್ರಾ. ಪಂ. ವಿಶೇಷ ಗ್ರಾಮ ಸಭೆ

0

ಬಡಗನ್ನೂರು: ಬಡಗನ್ನೂರು ಗ್ರಾ. ಪಂ.ನ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2022 23ನೇ ಸಾಲಿನ  ಪ್ರಥಮ ಹಂತದ ಮತ್ತು 2021-22ನೇ ಸಾಲಿನ ಕೇಂದ್ರ 14ನೇ ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆಯು ಸೆ.21ರಂದು  ಪೂರ್ವಾಹ್ನ ಗಂಟೆ 10.30ಕ್ಕೆ ಬಡಗನ್ನೂರು ಗ್ರಾ. ಪಂ  ಸಭಾಂಗಣದಲ್ಲಿ ನಡೆಯಲಿದೆ.
ಸಭೆಯು ಪುತ್ತೂರು ಪಶುಸಂಗೋಪನಾ ಇಲಾಖಾ ವೈದ್ಯಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಭೆಯಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾ.ಗ್ರಾ.ಉ.ಖಾ.ಯೋಜನೆ ಸೌಲಭ್ಯಗಳ ಸೂಕ್ತ ಮಾಹಿತಿ ಪಡೆದು ಕೊಳ್ಳುವಂತೆ ಅಧ್ಯಕ್ಷೆ ಶ್ರೀಮತಿ ಕೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here