ಕರೆಮನೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ: ರೂ.84,605 ಲಾಭ,  58 ಪೈಸೆ ಬೋನಸ್

0

ಪುತ್ತೂರು:ನರಿಮೊಗರು ಕರೆಮನೆಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸೆ.20ರಂದು ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಪುಷ್ಪಾರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಂಘವು ವರದಿ ಸಾಲಿನಲ್ಲಿ 69,376 ಲೀ. ಹಾಲನ್ನು ಖರೀದಿಸಿದೆ. 5,326.5೦ಲೀ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲಾಗಿದೆ. ೬೪,೦೪೯.೮೦ ಲೀ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಲವಣ ಮಿಶ್ರಣ ಮಾರಾಟದಿಂದ ರೂ.೧,೪೨೫ ಹಾಗೂ ಹಾಲಿ ವ್ಯವಹಾರದಿಂದ ರೂ.೨,೬೩,೩೬೯.೧೦ ಲಾಭಗಳಿಸಿದೆ. ಸಂಘ ಆಡಳಿತ ವೆಚ್ಚ, ಸಿಬಂದಿ ವೆಚ್ಚ ಕಳೆದ ರೂ.೮೪,೬೦೫ ನಿವ್ವಳ ಲಾಭಗಳಿಸಿದೆ. ಲಾಭಾಂಶದಲ್ಲಿ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ೫೮ ಪೈಸೆ ಬೋನಸ್ ನೀಡಲಾಗುವುದು ಎಂದು ಕಾರ್ಯದರ್ಶಿಯವರು ವರದಿಯಲ್ಲಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪುಷ್ಪಾ ಮಾತನಾಡಿ, ರೈತತು ಉತ್ತಮ ಗುಣಮಟ್ಟದ ಹಾಲನ್ನೇ ಸಂಘಕ್ಕೆ ಪೂರೈಸಿ, ಸಂಘದ ಬೆಳವಣಿಗೆಯಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ಸಹಾಯಧನಕ್ಕೆ ಸರಕಾರಕ್ಕೆ ಮನವಿ:
ನಿರ್ದೇಶಕ ಸುಬ್ರಾಯ ಮಾತನಾಡಿ, ಗೋಬರ್ ಗ್ಯಾಸ್ ಘಟಕ ನಿರ್ಮಾಣ, ಸ್ಲರಿ ಪಂಪ್ ಹಾಗೂ ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ ಸರಕಾರ ನೀಡುತ್ತಿದ್ದ ಸಹಾಯಧನ ಸ್ಥಗಿತಗೊಣಡಿದೆ. ಇದನ್ನು ಮತ್ತೆ ಹೈನುಗಾರರಿಗೆ ಸರಕಾರ ನೀಡಬೇಕು ಎಂದು ಆಗ್ರಹಿಸಿದ್ದು ಈ ಬಗ್ಗೆ ಸರಕಾರಕ್ಕೆ ಮನವಿ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಒಂದು ವರ್ಷದಲ್ಲಿ ನೂತನ ಕಟ್ಟಡ, ೧೦೦೦ ಲೀಟರ್ ಹಾಲಿ ಗುರಿ:
ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಸಂಘದ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶವನ್ನು ದಾನಿಯೊಬ್ಬರು ಕೊಡುಗೆಯಾಗಿ ನೀಡಲಿದ್ದಾರೆ. ಬಳಿಕ ಒಂದು ವರ್ಷದಲ್ಲಿ ನೂತನ ಕಟ್ಟಡ ನಿರ್ಮಿಸಿ, ಮುಂದಿನ ವರ್ಷದ ಮಹಾಸಭೆಯು ಅದೇ ಕಟ್ಟಡಲ್ಲಿ ನಡೆಸಲಾಗುವುದು. ೧೦೦ ಲೀಟರ್ ಹಾಲಿ ಸಂಗ್ರಹಣೆ ಗುರಿಯನ್ನು ಹಾಕಿಕೊಳ್ಳಲಾಗುವುದು ಎಂದರು.

ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ನಾಗೇಶ್ ಮಾತನಾಡಿ, ಹೈನುಗಾರಿಕೆಗೆ ಒಕ್ಕೂಟದಿಂದ ದೊರೆಯುವ ಸೌಲಭ್ಯಗಳು, ರಾಸುಗಳ ಸಾಕಾಣಿಕೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷ ವಿಶ್ವನಾಥ, ಸುದರ್ಶನ್, ಆನಂದ ಸಾಲಿಯಾನ್, ವಸಂತ ಪೂಜಾರಿ, ಸೀತಾರಾಮ ಗೌಡ, ಮಲ್ಲಿಕಾ, ಶಿವಮ್ಮ, ವೇದಾವತಿ, ವಿಜಯಕುಮಾರ್ ಹಾಗೂ ಚೋಮ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅರ್ಪಿತಾ ಸತ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಶ್ವೇತಾ ವರದಿ, ಆಯ-ವ್ಯಯ ಮಂಡಿಸಿ, ವಂದಿಸಿದರು. ಹಾಲು ಪರೀಕ್ಷಕಿ ವೇದಾವತಿ ಸಹಕರಿಸಿದರು.

LEAVE A REPLY

Please enter your comment!
Please enter your name here