ನೆಲ್ಯಾಡಿ: ಜೆಸಿಐ, ಮಹಿಳಾ ಜೇಸಿ ಹಾಗೂ ಜೂನಿಯರ್ ಜೇಸಿವಿಂಗ್ ನೆಲ್ಯಾಡಿ ಇದರ ಸಹಯೋಗದಲ್ಲಿ ನಡೆದ 39ನೇ ವರ್ಷದ ’ಜೇಸಿ ಸಪ್ತಾಹ, ನಮಸ್ತೆ-2022’ರ 2ನೇ ದಿನವಾದ ಸೆ.10ರಂದು ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಕುಟುಂಬ ದಿನ ನಡೆಯಿತು.
ಕುಟುಂಬ ದಿನದ ಅಂಗವಾಗಿ ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷ ವಿಶ್ವನಾಥ ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಲಹರಿ ಸಂಗೀತ ಕಲಾಕೇಂದ್ರ ಐಐಸಿಟಿ ನೆಲ್ಯಾಡಿ ಇವರಿಂದ ಗಾನಾಮೃತ ಹಾಗೂ ಜೇಸಿ ಕುಟುಂಬ ಸದಸ್ಯರಿಗೆ ವಿವಿಧ ಒಳಾಂಗಣ ಸ್ಪರ್ಧೆಗಳು, ನಿವೃತ್ತ ಜೇಸಿ ಶಿಕ್ಷಕರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು. ಜೆಸಿಐ ಅಧ್ಯಕ್ಷೆ ಜಯಂತಿ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಆಹ್ವಾನಿತರಾಗಿದ್ದ ಜೆಸಿಐ ಪ್ರಕಾಶನ ವಿಭಾಗದ ವಲಯ ನಿರ್ದೇಶಕ ಪ್ರಶಾಂತ್ ಸಿ.ಹೆಚ್., ಮುಖ್ಯ ಅತಿಥಿಗಳಾಗಿದ್ದ ಜೆಸಿಐ ಪೂರ್ವ ರಾಜ್ಯ ಉಪಾಧ್ಯಕ್ಷ ರವೀಂದ್ರ ಟಿ., ವಲಯ ತರಬೇತುದಾರರೂ, ಪೂರ್ವ ವಲಯ ಉಪಾಧ್ಯಕ್ಷರೂ ಆದ ನಾರಾಯಣ ಎನ್.ಬಲ್ಯ, ಪೂರ್ವ ವಲಯಾಧಿಕಾರಿ ಪ್ರಕಾಶ್ ಕೆ.ವೈ.ಶುಭಹಾರೈಸಿದರು.
ಸನ್ಮಾನ:
ನಿವೃತ್ತ ಮುಖ್ಯಶಿಕ್ಷಕರೂ, ನೆಲ್ಯಾಡಿ ಜೆಸಿಐನ ಪೂರ್ವಾಧ್ಯಕ್ಷರೂ ಆದ ಶೀನಪ್ಪ ಎಸ್.,ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪೂರ್ವಾಧ್ಯಕ್ಷ ದಯಾನಂದ ಕೆ.ಆದರ್ಶ ಅವರು ಸನ್ಮಾನಿತರನ್ನು ಪರಿಚಯಿಸಿದರು. ನಿಕಟಪೂರ್ವಾಧ್ಯಕ್ಷ ಗಿರೀಶ್ ಡಿ.,ಜೇಸಿ ಸಪ್ತಾಹ ಯೋಜನಾ ನಿರ್ದೇಶಕರಾದ ಶಿವಪ್ರಸಾದ್, ಸುಚಿತ್ರ ಜೆ.ಬಂಟ್ರಿಯಾಲ್, ಮಹಿಳಾ ಜೇಸಿ ವಿಂಗ್ ಅಧ್ಯಕ್ಷೆ ಜಯಲಕ್ಷ್ಮಿ ಪ್ರಸಾದ್, ಜೆಜೆಸಿ ಅಧ್ಯಕ್ಷ ಅಕ್ಷಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷೆ ಜಯಂತಿ ಬಿ.ಎಂ.ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಪ್ರವೀಣ್ ಎಸ್.ಎಂ.ವಂದಿಸಿದರು. ಜಾಹ್ನವಿಪುರಂದರ ಗೌಡ ಜೇಸಿವಾಣಿ ವಾಚಿಸಿದರು.ಗಣೇಶ್ ಕೆ.ರಶ್ಮಿ ವೇದಿಕೆಗೆ ಆಹ್ವಾನಿಸಿದರು. ಪೂರ್ವಾಧ್ಯಕ್ಷ ಜಯಾನಂದ ಬಂಟ್ರಿಯಾಲ್ ಹಾಗೂ ಇತರೇ ಜೇಸಿ ಸದಸ್ಯರು ಸಹಕರಿಸಿದರು.