ಕನ್ಯಾನ‌ ಗ್ರಾಮ ಪಂಚಾಯತ್ ನಲ್ಲಿ ಶಿಶು ಪ್ರದರ್ಶನ, ಪೋಷನ್ ಮಾಸಾಚರಣೆ

0

ವಿಟ್ಲ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಮತ್ತು ಗ್ರಾಮ ಪಂಚಾಯತ್ ಕನ್ಯಾನ ಇದರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯವಂತ ಹೆಣ್ಣು ಶಿಶು ಪ್ರದರ್ಶನ ಮತ್ತು ಪೋಷನ್ ಮಾಸಾಚರಣೆ ಕಾರ್ಯಕ್ರಮವು ಕನ್ಯಾನ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ರವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಕಛೇರಿಯ ಮೇಲ್ವಿಚಾರಕಿ ರೇಣುಕಾ ಮತ್ತು ಕನ್ಯಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮಂಜುಳಾರವರು ಮಕ್ಕಳ ಮತ್ತು ಗರ್ಭಿಣಿಯರ ಆಹಾರ ಮತ್ತು ಆರೈಕೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪರವರು ಸ್ವಚ್ಚತೆಯ ಬಗ್ಗೆ ಪ್ರಮಾಣವಚನ ಬೋಧಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಮಜೀದ್ ಕನ್ಯಾನ ಮನೋಜ್ ಕುಮಾರ್ ಮೊಯಿದಿನ್ ಬೈರಿಕಟ್ಟೆ ನಾರಾಯಣ, ಲಿಲ್ಲಿ ಮೊಂತೇರೊ, ಬುಶ್ರ, ವನಿತಾ, ವೀಣಾ, ನಝರಿನ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here