ಪುತ್ತೂರು: ಕಬಕದ ಒಂದೇ ಮನೆಯ ಇಬ್ಬರು ಮಕ್ಕಳ ಅನಾರೋಗ್ಯದ ಹಿನ್ನೆಲೆಯಲ್ಲಿ ಪುತ್ತೂರು ಸಹಾಯಹಸ್ತ ಲೋಕಸೇವಾ ಟ್ರಸ್ಟ್ ವತಿಯಿಂದ ಕಿಲ್ಲೆ ಮೈದಾನದ ಗಣೇಶೋತ್ಸವ ವಿಸರ್ಜನೆ ದಿನದಂದು ಪುತ್ತೂರು ಪೇಟೆ, ಕೋರ್ಟ್ ರಸ್ತೆ ಮೊದಲಾದೆಡೆ ಗರುಡನ ವೇಷ ಹಾಕಿ ಸಂಗ್ರಹಿಸಿದ ಹಣವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಪುತ್ತೂರು ನಗರ ಠಾಣೆಯ ಎಎಸ್‌ಐ ಲೋಕಾನಾಥ್ ಅವರು ಹಣ ಹಸ್ತಾಂತರಿಸಿ ಮಾತನಾಡಿ, ಸಹಾಯ ಹಸ್ತ ಲೋಕಸೇವಾ ಟ್ರಸ್ಟ್ ನೊಂದವರ ಬಾಳಿನಲ್ಲಿ ಬೆಳಕಾಗುತ್ತಿದೆ. ಇನ್ನೊಬ್ಬರ ಮುಖದಲ್ಲಿ ನಗುವರಳುವಂತೆ ಮಾಡುವ ಟ್ರಸ್ಟ್‌ನ ಕಾರ್ಯ, ಬಹಳ ದೊಡ್ಡ ಕೆಲಸ. ಮಕ್ಕಳ ಔಷಧಿಯ ಖರ್ಚಿಗಾಗಿ ಗರುಡನ ವೇಷ ತೊಟ್ಟು, ಅದರಲ್ಲಿ ಸಂಗ್ರಹಿಸಿದ ಹಣವನ್ನು ಆ ಕುಟುಂಬಕ್ಕೆ ಹಸ್ತಾಂತರಿಸುತ್ತಿದ್ದಾರೆ. ಹಣ ಪಡೆದುಕೊಂಡ ಮಕ್ಕಳಿಗೆ ದೇವರು ಆರೋಗ್ಯ ಕರುಣಿಸಲಿ. ಆ ಕುಟುಂಬ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಹಾರೈಸಿದರು.
ಟ್ರಸ್ಟ್‌ನ ಅಧ್ಯಕ್ಷ ಡಿ.ಎಸ್. ಒಡ್ಯಾ, ಪ್ರಧಾನ ಸಲಹೆಗಾರ ಉದಯ ಉಪಸ್ಥಿತರಿದ್ದರು. ಕಾರ್ಯದರ್ಶಿ ಮನೋಹರ್ ಕಾರ್ಯಕ್ರಮ ನಿರೂಪಿಸಿದರು.
ಫೊಟೋ: ಸಂಗ್ರಹವಾದ ಹಣವನ್ನು ಫಲಾನುಭವಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.