ಉಪ್ಪಿನಂಗಡಿ ಶ್ರೀರಾಮ ಶಾಲೆಯಲ್ಲಿ ನವಾನ್ನ ಭೋಜನ, ಕದಿರು ಕಟ್ಟುವ ಕಾರ್ಯಕ್ರಮ

0

ಪುತ್ತೂರು: ಉಪ್ಪಿನಂಗಡಿಯ ವೇದಶಂಕರ ಶ್ರೀರಾಮ ಶಾಲೆಯಲ್ಲಿ ನವಾನ್ನ ಭೋಜನ ಮತ್ತು ಕದಿರು ಕಟ್ಟುವ ಕಾರ್ಯಕ್ರಮ ನಡೆಯಿತು. ಫಲವಸ್ತುಗಳನ್ನು ಮೆರವಣಿಗೆಯ ಮೂಲಕ ತಂದು, ತುಳಸಿ ಕಟ್ಟೆಯ ಬಳಿ ಇಟ್ಟು, ಪೂಜಾ ವಿಧಾನವನ್ನು ಶಾಲಾ ವಾಹನದ ಸಾರಥಿ ಚಿದಾನಂದ ಸಾಲಿಯಾನ್ ನೆರವೇರಿಸಿದರು.

ಶಾಲಾ ಶಿಕ್ಷಕವೃಂದ ಹಾಗೂ ಬೋಧಕೇತರ ಸಿಬ್ಬಂದಿಗಳು, ಮತ್ತು ಪೋಷಕರು ಸಹಕರಿಸಿದರು. ನಂತರ ಶ್ರೀರಾಮ ಶಾಲೆಯ ಉರಿಮಜಲು ರಾಮಭಟ್ ಸಭಾಂಗಣದಲ್ಲಿ ನವಾನ್ನ ಭೋಜನ ಮತ್ತು ಕದಿರು ಕಟ್ಟುವುದರ ಅರ್ಥ ಮತ್ತು ಮಹತ್ವದ ಬಗ್ಗೆ ಶ್ರೀರಾಮ ಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಅನುರಾಧ ಆರ್. ಶೆಟ್ಟಿ ಮಾರ್ಗದರ್ಶನ‌ ನೀಡಿದರು. ನಂತರ ನವಾನ್ನದ ಪುಷ್ಕಳ ಭೋಜನ(ಪುದ್ವರ್ ಉಣಸ್) ವನ್ನು ಸವಿಯಲಾಯಿತು. ಈ ದಿನದ ಊಟದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ಅತ್ರಮಜಲು, ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸುನಿಲ್ ಕುಮಾರ್ ಅಣವು, ಶಾಲಾ ಸಂಚಾಲಕ ಯು.ಜಿ ರಾಧಾ, ಕೋಶಾಧಿಕಾರಿ ಸುಧೀರ್ ಟಿ.ಎಸ್, ಸಹಸಂಸ್ಥೆ ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿಯ ಕೋಶಾಧಿಕಾರಿ ಸುರೇಶ್.ಜಿ, ಮುಖ್ಯಗುರು ವೀಣಾ ಪ್ರಸಾದ್, ಸಿಬ್ಬಂದಿಗಳು ಹಾಗೂ ಮಾಧವ ಶಿಶುಮಂದಿರದ ಪುಟಾಣಿಗಳು ಭಾಗವಹಿಸಿದ್ದರು. ಶ್ರೀರಾಮ ಶಾಲೆಯ ಪ್ರೌಢವಿಭಾಗದ ಮುಖ್ಯಗುರು ರಘುರಾಮ ಭಟ್ ಸ್ವಾಗತಿಸಿ, ದಯಾನಂದ ಕಾರ್ಯಕ್ರಮ ನಿರೂಪಿಸಿ, ಪವಿತ್ರಾ ವಂದಿಸಿದರು.‌

LEAVE A REPLY

Please enter your comment!
Please enter your name here