ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ ಶಾಸಕ ಮಠಂದೂರು

0

 

ಪುತ್ತೂರು: ಕಲ್ಲೇಗ ಟೈಗರ್ಸ್‌ವತಿಯಿಂದ ನಡೆದ ೫ ನೇ ವರ್ಷದ ಪಿಲಿಗೊಬ್ಬು ಅ.೧ರಂದು ಸಂಜೆ ತಾಲೂಕು ಆಡಳಿತ ಸೌಧದ ಬಳಿಗೆ ಆಗಮಿಸಿದ್ದು ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು ಹುಲಿ ವೇಷದ ಕುಣಿತಗಾರರೊಂದಿಗೆ ಹೆಜ್ಜೆಹಾಕಿದರು.
ಪಿಲಿಗೊಬ್ಬುವಿನ ವೇಷಧಾರಿಗಳು ಆಡಳಿತ ಸೌಧದ ಬಳಿ ಆಗಮಿಸಿದಾಗ ಶಾಸಕ ಸಂಜೀವ ಮಠಂದೂರು ಹಾಗೂ ಸಹಾಯಕ ಆಯುಕ್ತ ಗಿರೀಶ್ ನಂದನ್ ಹೂ ಹಾರ ಹಾಕಿ ಸ್ವಾಗತಿಸಿದರು. ಬಳಿಕ ಹುಲಿ ಕುಣಿತಗಾರರೊಂದಿಗೆ ತಾನು ಕುಣಿದು ಸಂಭ್ರಮಿಸಿದರು. ಶಾಸಕರು ಹುಲಿ ವೇಷಧಾರಿಗಳೊಂದಿಗೆ ಕುಣಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

LEAVE A REPLY

Please enter your comment!
Please enter your name here