ಫೋಟೋಗ್ರಾಫರ್‍ಸ್ ಎಸೋಸಿಯೇಶನ್‌ನಿಂದ ಗಾಂಧೀ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ

0

ಕೊಯಿಲ ಎಂಡೋಪಾಲನ ಕೇಂದ್ರಕ್ಕೆ ವಿವಿಧ ಕೊಡುಗೆ, ನಿವೃತ್ತ ಯೋಧರಿಗೆ ಸನ್ಮಾನ

ಪುತ್ತೂರು:ಸೌತ್ ಕೆನರಾ ಫೋಟೋಗ್ರಾಫರ್‍ಸ್ ಎಸೋಸಿಯೇಶನ್‌ನ ಪುತ್ತೂರು ವಲಯದಿಂದ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿಯನ್ನು ಅ.2ರಂದು ಆಚರಿಸಿದರು.

ಇದೇ ಸಂದರ್ಭದಲ್ಲಿ ಕೊಯಿಲದ ಎಂಡೋಪಾಲನಾ ಕೇಂದ್ರದ ಮಕ್ಕಳಿಗೆ ಟಿಫಾಯ್, ಹೊರಾಂಗಣ ಹಾಗೂ ಒಳಾಂಗದಲ್ಲಿ ಆಟಕ್ಕೆ ಆವಶ್ಯಕವಾದ ಪರಿಕರಗಳನ್ನು ಕೊಡುಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಪಾಲನಾ ಕೇಂದ್ರದ ಶಿಕ್ಷಕರು ಹಾಗೂ ವ್ಯವಸ್ಥಾಪಕರನ್ನು ಸನ್ಮಾನಿಸಿ, ಗೌರವಿಸಿ ಪಾಲನಾ ಕೇಂದ್ರದ ಮಕ್ಕಳೊಂದಿಗೆ ಭೋಜನ ಸವಿದರು.

ದೇಶದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯ ಅಂಗವಾಗಿ ಕೊಯಿಲದ ನಿವೃತ್ತ ಯೋಧ ಮೋಹನ್ ಪೆರ್ಲ, ಬೆಳ್ಳಿಪ್ಪಾಡಿಯ ಪುಷ್ಪರಾಜ ಗೌಡ ಬಾರ್ತಿಕುಮೇರುರವರ ನಿವಾಸಕ್ಕೆ ತೆರಳಿ ಸನ್ಮಾನಿಸಿದರು.

ಎಸೋಸಿಯೇಶನ್‌ನ ಜಿಲ್ಲಾ ಕೋಶಾಧಿಕಾರಿ ನವೀನ್ ರೈ ಪಂಜಳ, ಪುತ್ತೂರು ವಲಯದ ಅಧ್ಯಕ್ಷ ನಾಗೇಶ್ ಟಿ.ಎಸ್. ಕೆಮ್ಮಾಯಿ, ಪ್ರಧಾನ ಕಾರ್ಯದರ್ಶಿ ಪ್ರಮೋದ್ ಸಾಲ್ಯಾನ್, ಗೌರವಾಧ್ಯಕ್ಷ ಹರೀಶ್ ಪುಣಚ, ಕೋಶಾಧಿಕಾರಿ ಗಿರಿಧರ್ ಭಟ್, ಪದಾಧಿಕಾರಿಗಳಾದ ಚಂದ್ರಶೇಖರ ಶೆಟ್ಟಿ ಉಪ್ಪಿನಂಗಡಿ, ಗಣೇಶ್ ಕಟ್ಟಪುಣಿ, ವಸಂತ ನಾಯ್ಕ, ರಘು ಶೆಟ್ಟಿ, ವಸಂತ ಕಾಣಿಯೂರು, ಜಯಂತ ಗೌಡ ಕರ್ಕುಂಜ, ವಿನಯ ರೈ ಪಂಜಳ, ಗಿರೀಶ್ ಕಲ್ಲೇರಿ, ರಾಜೇಶ್ ರಾಮಕುಂಜ, ಸುಶ್ರುತ್ ರೈ ಉಪ್ಪಿನಂಗಡಿ, ಚಂದ್ರ ಕಲ್ಲೇರಿ, ರವಿ ಪೂಜಾರಿ ಉಪ್ಪಿನಂಗಡಿ, ಅರುಣ್ ರೈ ತಿಂಗಳಾಡಿ, ಸಂತೋಷ್ ಗೌಡ ಬನ್ನೂರು, ಗುಣಕರ ಪೂಜಾರಿ, ಮುರಳಿ ರಾಯರಮನೆ, ರವಿ ನಾಯಕ್ ರಾಮಕುಂಜ, ಸುಭಾಷ್ ರವಿ, ಜಗದೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here