ಪುತ್ತೂರು: ಕರ್ನಾಟಕ ಸರ್ಕಾರಿ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಬೆಂಗಳೂರಿನ ಬಸವನಗುಡಿ ಆಕ್ವಾಟಿಕ್ ಸೆಂಟರ್ನಲ್ಲಿ ಅಕ್ಟೋಬರ್ 12 ಮತ್ತು 13 ರಂದು ನಡೆದ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿಪ್ರೌಢಶಾಲಾ ವಿಭಾಗ ದಕ್ಷಿಣ ಕನ್ನಡ ಜಿಲ್ಲೆಯನ್ನುಪ್ರತಿನಿಧಿಸಿದ ಬೆಥನಿ ಹೈಸ್ಕೂಲ್ 9ನೇ ತರಗತಿ ವಿದ್ಯಾರ್ಥಿನಿಯರಾದ ಪ್ರಾಧಿ ಕ್ಲಾರಾ ಪಿಂಟೋ (ಜೋಸೆಫ್ ಲಿಯೋನೆಲ್ ಪಿಂಟೊ ಮತ್ತು ವಾಯ್ಲೆಟ್ ನತಾಲಿಯಾ ಪಿಂಟೊ ದಂಪತಿಗಳ ಪುತ್ರಿ) 50 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ, 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಕಂಚಿನ ಪದಕ ಮತ್ತು ಪ್ರತೀಕ್ಷಾ ಎನ್ ಶೆಣೈ(ಎಂ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮಿ ಶೆಣೈ ದಂಪತಿಗಳ ಪುತ್ರಿ) 50 ಮೀ ̧ 100 ಮೀ ̧ 200 ಮೀ ಬ್ರೆಸ್ಟ್ಸ್ಟ್ರೋಕ್ ನಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ .
ದಕ್ಷಿಣ ಕನ್ನಡ ಜಿಲ್ಲಾ ರಿಲೇ ತಂಡ ವನ್ನು ಪ್ರತಿನಿಧಿಸಿದ ಇವರು 4*100 ಮೆಡ್ಲಿ ರಿಲೇ ನಲ್ಲಿ ಬೆಳ್ಳಿ ಪದಕ ಮತ್ತು 4*100 ಫ್ರೀಸ್ಟೈಲ್ ರಿಲೇ ಕಂಚಿನ ಪದಕ ಪಡೆದಿರುತ್ತಾರೆ. ಇವರು ಪುತ್ತೂರು ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಪುತ್ತೂರು ಆಕ್ವಾಟಿಕ್ ಕ್ಲಬ್ ನಲ್ಲಿ ಪಾರ್ಥ ವಾರಣಾಶಿ ̧ ದೀಕ್ಷಿತ್ ̧ ರೋಹಿತ್ ಮತ್ತು ನಿರೂಪ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.