ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಬ್ಯಾಂಕಿಂಗ್, ಸಹಕಾರಿ ಸಂಘಗಳು,ಪೋಲೀಸ್ ನೇಮಕಾತ,ಸೇನಾ ನೇಮಕಾತಿ ಸೇರಿದಂತೆ ಐ ಎ ಎಸ್ ವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಾಥಮಿಕ ಮಾಹಿತಿ ನೀಡುವ ಶಿಬಿರವು ಅ.16ರಂದು ನಡೆಯಿತು.
ಮಾಹಿತಿ ಕಾರ್ಯಗಾರವನ್ನು ಬ್ಯಾಂಕ್ ಆಫ್ ಬರೋಡ ನಿವೃತ್ತ ಮ್ಯಾನೇಜರ್ ನಾರಾಯಣ ರೈ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಾಗಾರ ಬ್ಯಾಂಕಿಂಗ್ ನಿಂದ ಹಿಡಿದು ಐ ಎ ಎಸ್ ವರೆಗಿನ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ವಿದ್ಯಾಮಾತಾ ಅಕಾಡೆಮಿಯ ಗೌರವ ತರಬೇತುದಾರರಾದ ಅರವಿಂದ್ ಚೊಕ್ಕಾಡಿಯವರು ಮಾಹಿತಿಯನ್ನು ನೀಡಿದರು. ಪೋಲೀಸ್ ನೇಮಕಾತಿಯ ಬಗ್ಗೆ ಮಾಹಿತಿಯನ್ನು ಪುತ್ತೂರು ನಗರ ಠಾಣಾ ಸಬ್ ಇನ್ಸ್ಪೆಕ್ಟರ್ ಶ್ರೀಕಾಂತ್ ರಾಥೋಡ್ ರವರು ನೀಡಿದರು. ಭೋಜನ ವಿರಾಮದ ನಂತರ ನಿವೃತ್ತ ಸೇನಾಧಿಕಾರಿ ಮತ್ತು ನಿವೃತ್ತ ಪ್ರಾಂಶುಪಾಲರಾದ ಟಿ. ಜಿ. ಮ್ಯಾಥ್ಯೂ ರವರು ಸೇನಾ ನೇಮಕಾತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ತರಬೇತುದಾರರಾದ ವೇಣುಗೋಪಾಲ್ ರವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗಿರುವ ಇಂಗ್ಲಿಷ್ ಕೌಶಲ್ಯತೆಯನ್ನು ವಿವರಿಸಿ ಹೇಳಿದರು. ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ತರಬೇತುದಾರರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು ಈ ಕಾರ್ಯಾಗಾರದಲ್ಲಿ 77 ವಿದ್ಯಾರ್ಥಿಗಳು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು ಕಾರ್ಯಕ್ರಮದಲ್ಲಿ ಚಂದ್ರಕಾಂತ್ , ದೀಕ್ಷಿತಾ.ರೈ, ಮಿಲನ,ಸಂಹಿತಾ, ಹರ್ಷಿತಾ ಪಾಲ್ಗೊಂಡಿದ್ದರು.