ಅ.20ಕ್ಕೆ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಪುತ್ತೂರು ನಗರ ಸಹಿತ ಹಲವು ಕಡೆ ವಿದ್ಯುತ್ ನಿಲುಗಡೆ

0

ಪುತ್ತೂರು: ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಆವರಣದಲ್ಲಿ ತುರ್ತು ಕಾಮಗಾರಿ ನಿಮಿತ್ತ ಅ.20ರಂದು ಬೆಳಿಗ್ಗೆ ಗಂಟೆ 10 ರಿಂದ ಮಧ್ಯಾಹ್ನ ಗಂಟೆ 2ರ ತನಕ ಉಪ್ಪಿನಂಗಡಿ ಓಲ್ಡ್, ರಾಮಕುಂಜ, ವಾಟರ್‌ಸ್ಪ್ಲೈ, ಇಂಡಸ್ಟ್ರೀಯಲ್, ದರ್ಬೆ ಮತ್ತು ಪುತ್ತೂರು ಟೌನ್ ಫೀಡರ್‌ಗಳ ವಿದ್ಯುತ್ ನಿಲುಗಡೆಯಾಗಲಿದೆ.
110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ಪುತ್ತೂರು ನಗರ, ದರ್ಬೆ, ಮೊಟ್ಟೆತ್ತಡ್ಕ, ಬೊಳುವಾರು, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಚಿಕ್ಕಮುಡ್ನೂರು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here