ಮಾರ್ಚ್‌ನೊಳಗೆ ಕಾಮಗಾರಿ ಪೂರ್ಣ – ಗುತ್ತಿಗೆದಾರರ ಭರವಸೆ
ಪುತ್ತೂರು: ಎಪಿಎಂಸಿ ರಸ್ತೆಯ ಈಗಿರುವ ರೈಲ್ವೇ ಗೇಟ್‌ನಿಂದ 100 ಮೀಟರ್ ಅಂತರದಲ್ಲಿ ಸೂತ್ರಬೆಟ್ಟು ರಸ್ತೆಯಾಗಿ ರೈಲ್ವೇ ಹಳಿ ಬಳಿ ರೂ. 13.82 ಕೋಟಿ ವೆಚ್ಚದಲ್ಲಿ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಆರಂಭಗೊಂಡಿರುವುದನ್ನು ಅ.21ರಂದು ಶಾಸಕ ಸಂಜೀವ ಮಠಂದೂರು ಅವರು ಕಾಮಗಾರಿ ವೀಕ್ಷಣೆ ಮಾಡಿದರು.
ಅಂಡರ್ ಪಾಸ್ ಕಾಮಗಾರಿ ಕೈಗೆತ್ತಿಗೊಂಡಿರುವ ಗುತ್ತಿಗೆಯ ಇಂಜಿನಿಯರ್ ಅವರೊಂದಿಗೆ ಮಾತನಾಡಿದ ಶಾಸಕರು ಕಾಮಗಾರಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭ ಇಂಜಿನಿಯರ್ ಮಾರ್ಚ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಕುರಿತು ಭರವಸೆ ನೀಡಿದರು.
ಚತುಷ್ಪಥಕ್ಕೂ ಅಂಡರ್ ಪಾಸ್‌ನಲ್ಲಿ ಹೆಚ್ಚುವರಿ ಸೌಲಭ್ಯ :
ರೈಲ್ವೇ ಅಂಡರ್ ಪಾಸ್ ಯೋಜನೆಗೆ ರಚಿಸಿದ ನಕ್ಷೆಯಲ್ಲಿ ಮುಂದಿನ ಅಭಿವೃದ್ಧಿಯ ಚಿಂತನೆಯೊಂದಿಗೆ ಚತುಷ್ಪಥಕ್ಕೂ ಅಂಡರ್ ಪಾಸ್‌ನಲ್ಲಿ ಹೆಚ್ಚುವರಿ ಸೌಲಭ್ಯ ನೀಡಲಾಗಿದೆ. ಪ್ರಸ್ತುತ ಅಂಡರ್ ಪಾಸ್ ಯೋಜನೆ ದ್ವಿಪಥವಾಗಿ ನಿರ್ಮಾಣಗೊಳ್ಳಲಿದ್ದು, ಮುಂದಿನ ದಿನ ರಸ್ತೆ ಅಗಲೀಕರಣ ಸಂದರ್ಭ ಚತುಷ್ಪಥ ರಸ್ತೆಗೂ ಅವಕಾಶ ನೀಡಲಾಗುತ್ತದೆ.ಚತುಷ್ಪಥ ರಸ್ತೆ ನಿರ್ಮಾಣದ ಸಂದರ್ಭ ರೈಲ್ವೇ ಸ್ಥಳವಲ್ಲದೆ ಸ್ಥಳೀಯ ಖಾಸಗಿ ಒಡೆತನದ ಸ್ಥಳವನ್ನೂ ಬಳಸಿಕೊಳ್ಳಬೇಕಾಗುತ್ತದೆ. ಈ ಕುರಿತು ಸರ್ವೆ ಕಾರ್ಯ ನಡೆಯಲಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದರು. ಈ ಸಂದರ್ಭ ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು, ದಿಶಾ ಸದಸ್ಯ ರಾಮದಾಸ್ ಹಾರಾಡಿ, ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ, ನಗರಸಭಾ ಸ್ಥಳೀಯ ಸದಸ್ಯ ಪ್ರೇಮ್ ಕುಮಾರ್, ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಸುದರ್ಶನ್ ಉಪಸ್ಥಿತರಿದ್ದರು.