ಸರಸ್ವತಿ ಎಸ್ ರೈಯವರ ಬದುಕು ಸಮಾಜಕ್ಕೆ ಆದರ್ಶ- ರಾಧಾಕೃಷ್ಣ ರೈ
ಸರಸ್ವತಿ ರೈಯವರ ಜೀವನ ಯುವ ಪೀಳಿಗೆಗೆ ಮಾದರಿ- ದುರ್ಗಾಪ್ರಸಾದ್ ರೈ
ಪುತ್ತೂರು: ಅ.10ರಂದು ನಿಧನರಾದ ಕುರಿಯ ಗ್ರಾಮದ ಬಳ್ಳಮಜಲುಗುತ್ತು ನಿವಾಸಿ, ಸರಸ್ವತಿ ಎಸ್ ರೈಯವರ ಉತ್ತರಕ್ರಿಯೆ ಅ.22 ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಕ್ಷೇತ್ರದ ನೇತ್ರಾವತಿ ಸಭಾಭವನದಲ್ಲಿ ಜರಗಿತು. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ-ನುಡಿನಮನ ಕಾರ್‍ಯಕ್ರಮ ಜರಗಿತು.
-ಸರಸ್ವತಿ ಎಸ್ ರೈಯವರ ಬದುಕು ನಮ್ಮ ಸಮಾಜಕ್ಕೆ ಆದರ್ಶ- ರಾಧಾಕೃಷ್ಣ ರೈ
ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈಯವರು ಮಾತನಾಡಿ ಸರಸ್ವತಿ ಎಸ್ ರೈಯವರು ತನ್ನ ಕುಟುಂಬದೊಂದಿಗೆ ಸಮಾಜವನ್ನು ಅಕ್ಕರೆಯಿಂದ ಕಾಣುತ್ತಿದ್ದ ಒರ್ವ ಆದರ್ಶ ಮಹಿಳೆಯಾಗಿದ್ದು, ಕುಂಜಾಡಿ ಶ್ರೀನಿವಾಸ್ ರೈಯವರ ಪತ್ನಿಯಾಗಿ ತನ್ನ ಸಂಸಾರವನ್ನು ಪ್ರೀತಿ-ವ್ಯಾತ್ಸಲದಿಂದ ಕಾಣುವುದರ ಜೊತೆಗೆ ಸಮಾಜದ ಪ್ರತಿಯೊಬ್ಬರನ್ನು ಗೌರವದಿಂದ ಕಾಣುತ್ತಿದ್ದರು. ಅವರ ಬದುಕು ನಮ್ಮ ಸಮಾಜಕ್ಕೆ ಆದರ್ಶವಾಗಿದೆ ಎಂದರು.
ಸರಸ್ವತಿ ರೈಯವರ ಜೀವನ ಯುವ ಪೀಳಿಗೆಗೆ ಮಾದರಿ- ದುರ್ಗಾಪ್ರಸಾದ್ ರೈ
ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ಕುಂಜಾಡಿ ಶ್ರೀನಿವಾಸ್ ರೈಯವರ ಪತ್ನಿ ಸರಸ್ವತಿ ಎಸ್ ರೈಯವರು ಸಮಾಜದಲ್ಲಿ ಪ್ರತಿಯೊಬ್ಬರನ್ನು ಗೌರವದಿಂದ ಕಾಣುವ ಜೊತೆಗೆ, ತನ್ನ ಬದುಕಿನಲ್ಲಿ ಆದರ್ಶವಾದ ಮೌಲ್ಯವನ್ನು ಪ್ರತಿಪಾದಿಸಿದ್ದಾರೆ, ಇವರ ಮಕ್ಕಳು ಕೂಡ, ಸಮಾಜದಲ್ಲಿ ಉನ್ನತವಾದ ಗೌರವವನ್ನು ಹೊಂದುವುದರ ಜೊತೆಗೆ ತಂದೆ-ತಾಯಿಯವರ ಆದರ್ಶವನ್ನು ಪಾಲನೆ ಮಾಡುತ್ತಿದ್ದಾರೆ. ಸರಸ್ವತಿ ಎಸ್ ರೈಯವರ ಜೀವನ ನಮ್ಮ ಇಂದಿನ ಯುವಪೀಳಿಗೆಗೆ ಮಾದರಿಯಾಗಿದೆ ಎಂದು ನುಡಿನಮನ ಸಲ್ಲಿಸಿದರು.
ಸರಸ್ವತಿ ಎಸ್ ರೈಯವರ ಮಕ್ಕಳಾದ ರವೀಂದ್ರನಾಥ ರೈ ಬಳ್ಳಮಜಲುಗುತ್ತು, ವಿಜಯಕುಮಾರ್ ರೈ ಬಳ್ಳಮಜಲುಗುತ್ತು, ವಿಲಾಸಿನಿ ವಿ.ರೈ ಬಳ್ಳಮಜಲುಗುತ್ತು, ಜಯಪ್ರಕಾಶ್ ರೈ ಬಳ್ಳಮಜಲುಗುತ್ತು, ವಿನೋದಿನಿ ಎನ್. ರೈ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿಮಕ್ಕಳು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸದಸ್ಯರುಗಳಾದ ಶೇಖರ್ ನಾರವಿ, ಐತ್ತಪ್ಪ ನಾಯ್ಕ್, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ.ಜಯರಾಮ ರೈ, ಪುತ್ತೂರು ತಾ.ಪಂ, ಕಾರ್‍ಯನಿರ್ವವಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಅರಿಯಡ್ಕ ಲಕ್ಷ್ಮಿನಾರಾಯಣ ಶೆಟ್ಟಿ, ಪುತ್ತೂರು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಉದ್ಯಮಿಗಳಾದ ಶಿವರಾಮ ಆಳ್ವ ಬಳ್ಳಮಜಲುಗುತ್ತು, ಉಮೇಶ್ ನಾಡಾಜೆ, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ದೇವಿಪ್ರಸಾದ್ ರೈ ಪಿಂಗಾರ, ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ್ ಶೆಟ್ಟಿ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ್ ಸುವರ್ಣ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಎ.ಬಿ. ಮನೋಹರ್ ರೈ, ಪ್ರಮುಖರಾದ ಜಿಎಸ್‌ಟಿ ಅಧಿಕಾರಿ ಪಿ.ಟಿ. ರೈ, ಡಿವೈಎಸ್‌ಪಿ ಭಾಸ್ಕರ್ ರೈ ಗುಂಡ್ಯಡ್ಕ, ಮುಂಡಾಳಗುತ್ತು ಶಾಂತಾರಾಮ ರೈ, ಜೈರಾಜ್ ಭಂಡಾರಿ ನೊಣಾಲು, ಸುಧಾಕರ್ ರೈ ಕುಂಜಾಡಿ, ಗಣೇಶ್ ಶೆಟ್ಟಿ ಕುಂಜಾಡಿ, ಲಕ್ಷ್ಮೀಶ್ ಶೆಟ್ಟಿ ಕುಂಜಾಡಿ, ರಮೇಶ್ ರೈ ಡಿಂಬ್ರಿ, ಸಂಪತ್ ಕುಮಾರ್ ರೈ ಪಾತಾಜೆ, ಕುಂಬ್ರ ದಯಾಕರ್ ಆಳ್ವ, ಡಾ. ದೀಪಕ್ ರೈ, ಡಾ.ಅಶೋಕ್ ಕುಮಾರ್ ರೈ, ಚಂದ್ರಶೇಖರ್ ರೈ ನಡುಬೈಲು, ಸದಾನಂದ ಶೆಟ್ಟಿ ಕೋರೇಲು, ಚಿಕ್ಕಪ್ಪ ನಾಕ್ ಅರಿಯಡ್ಕ, ಕೃಷ್ಣ ರೈ ಅರಿಯಡ್ಕ, ವಸಂತ್ ರೈ ಪುಣ್ಚಪ್ಪಾಡಿ, ಬಾಲಕೃಷ್ಣ ರೈ ಪುಣ್ಚಪ್ಪಾಡಿ, ಸುರೇಶ್ ರೈ ಪನ್ನೆ, ಎ.ಕೆ.ಜಯರಾಮ ರೈ, ಯತೀಶ್ ಶೆಟ್ಟಿ ಉಪ್ಪಿನಂಗಡಿ, ಇಂಜೀನಿಯರ್ ಸುಧಾಕರ್ ಶೆಟ್ಟಿ, ರಾಮದಾಸ್ ಹಾರಾಡಿ, ಚಿಲ್ಮೆತ್ತಾರು ಜಗಜೀವನ್‌ದಾಸ್ ರೈ, ಡಾ. ಸತ್ಯವತಿ ಆಳ್ವ, ನ್ಯಾಯವಾದಿ ಎನ್, ಜಯಪ್ರಕಾಶ್ ರೈ ಸುಳ್ಯ, ಮೋಹನ್ ರೈ ನರಿಮೊಗರು, ನಾರಾಯಣ ರೈ ನಡುಬೈಲು, ಸತೀಶ್ ರೈ ಮಿಷನ್‌ಮೂಲೆ, ನಾರಾಯಣ ರೈ ಬಾರಿಕೆ, ಮಂಜುನಾಥ ರೈ ಕುಂಜಾಡಿ, ಜಯಸೂರ್‍ಯ ರೈ ಮಾದೋಡಿ, ವಿಜಯ ಬಿ.ಎಸ್, ಲಕ್ಷ್ಮಣ ಬೈಲಾಡಿ, ವಿವೇಕ್ ರಂಜನ್ ಭಂಡಾರಿ ಸಹಿತ ಊರ-ಪರವೂರ ಹಿತೈಷಿಗಳು ಭಾಗವಹಿಸಿದರು.