ಕುಂಬ್ರದ ಅತಿಥಿ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್‌ನಲ್ಲಿ ದೀಪಾವಳಿ ಬಂಪರ್ ಸೇಲ್

0

ಪ್ರತಿ ಖರೀದಿಗೂ ಆಕರ್ಷಕ ಉಡುಗೊರೆ, ಬಹುಮಾನಗಳ ಸುರಿಮಳೆ-ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಪುತ್ತೂರು: ಗ್ರಾಮೀಣ ಭಾಗದ ಜನರ ಮನೆ, ಮನ ಮೆಚ್ಚಿದ ಭರವಸೆಯ ಏಕೈಕ ಶೋರೂಮ್ ಆಗಿರುವ ಕುಂಬ್ರದ ಅಕ್ಷಯ ಆರ್ಕೇಡ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ‍್ಸ್ ಶೋರೂಮ್‌ನಲ್ಲಿ ಈ ವರ್ಷದ ದೀಪಾವಳಿ ಹಬ್ಬದ ಬಿಗ್ ಆಫರ್ ಸೇಲ್ ಆರಂಭಗೊಂಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಫರ್ನಿಚರ‍್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮೇಲೆ ಹಿಂದೆಂದೂ ಕಂಡಿರದ ಬಿಗ್ ಡಿಸ್ಕೌಂಟ್, ಪ್ರತಿ ಖರೀದಿಯ ಮೇಲೂ ಖಚಿತ ಉಡುಗೊರೆಗಳು, ಸ್ಕ್ರ್ಯಾಚ್ ಕಾರ್ಡ್ ಮೂಲಕ ಅದೃಷ್ಟವಂತರಿಗೆ ಡಿಯೋ ಸ್ಕೂಟರ್, 1 ಗ್ರಾಂ ಚಿನ್ನದ ನಾಣ್ಯ, 10 ಗ್ರಾಂ ಬೆಳ್ಳಿಯ ನಾಣ್ಯ ಹಾಗೂ ಟಿವಿ, ಫ್ರಿಡ್ಜ್, ಸೀಲಿಂಗ್ ಫ್ಯಾನ್, ಕುಕ್ಕರ್ ಸಹಿತ ನೂರಾರು ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ. ಬೆಟರ್‌ಲಕ್ ನೆಕ್ಸ್ಟ್‌ಟೈಂ ಎನ್ನುವ ವಿಷಯವೇ ಇಲ್ಲದೆ ಬಹುಮಾನಗಳ ಸುರಿಮಳೆ ಸುರಿಯಲಿದೆ. ಎಲ್ಲಿಯೂ ದೊರೆಯದ ವಿಶೇಷ ರಿಯಾಯಿತಿ, ಎಕ್ಸ್‌ಚೇಂಜ್, ಕಾಂಭೀ ಆಫರ್, ಕ್ಯಾಶ್‌ಬ್ಯಾಕ್, ಸುಲಭ ಕಂತುಗಳು ಎಲ್ಲವೂ ಸಿಗಲಿದೆ. ಹಾಗಾದರೆ ತಡ ಯಾಕೆ ಇಂದೇ ಕುಂಬ್ರದ ಅತಿಥಿ ಶೋರೂಮ್‌ಗೆ ಬನ್ನಿ ನಿಮ್ಮಿಷ್ಟದ ಅತಿಥಿಯೊಂದಿಗೆ ನಿಮ್ಮ ಮನೆ, ಮನ ತುಂಬಿಸಿಕೊಳ್ಳಿ, ಈ ವರ್ಷದ ದೀಪಾವಳಿಯನ್ನು ಸಂಭ್ರಮಿಸಿ. ಎಲೆಕ್ಟ್ರಾನಿಕ್ಸ್ ಐಟಂಗಳಾಗಿರಬಹುದು ಅಥವಾ ಫರ್ನಿಚರ‍್ಸ್ ವಸ್ತುಗಳೇ ಆಗಿರಬಹುದು ತಾವು ಖರೀದಿಸುವ ವಸ್ತುಗಳೊಂದಿಗೆ ಅತಿಥಿ ಸ್ಕ್ರ್ಯಾಚ್ ಕಾರ್ಡ್ ಸಿಗಲಿದ್ದು ಈ ಕಾರ್ಡ್ ಉಜ್ಜುವ ಮೂಲಕ ವಿಶೇಷ ಬಹುಮಾನಗಳನ್ನು ಪಡೆದು ಅದೃಷ್ಟವಂತರಾಗಬಹುದಾಗಿದೆ. ವಿಡಿಯಮ್ ಕಂಪೆನಿಯ ಐಟಮ್‌ಗಳ ಖರೀದಿಯ ಜೊತೆ ಒಂದು ಸ್ಕ್ರ್ಯಾಚ್ ಕಾರ್ಡ್ ದೊರೆಯಲಿದ್ದು ಇದರಲ್ಲಿ ಅದೃಷ್ಟವಂತರಿಗೆ 1 ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿಯ ನಾಣ್ಯಗಳನ್ನು ಗೆಲ್ಲುವ ಅವಕಾಶ ಇದೆ.

ಟಿವಿ, ರೆಫ್ರಿಜರೇಟರ್,ವಾಷಿಂಗ್ ಮೆಷಿನ್, ಎಸಿ, ಇನ್‌ವರ್ಟರ್‌ಗಳಿಗೆ ಹಾಗೂ 10 ಸಾವಿರಕ್ಕಿಂತ ಮೇಲ್ಪಟ್ಟ ಫರ್ನಿಚರ‍್ಸ್ ಐಟಮ್‌ಗಳಿಗೆ ಸ್ಕ್ರ್ಯಾಚ್ ಕಾರ್ಡ್ ದೊರೆಯಲಿದೆ. ಬಹುಮಾನವಾಗಿ 3 ಟಿವಿ, 3 ಸಿಂಗಲ್ ಡೋರ್ ರೆಫ್ರಿಜರೇಟರ್, 100 ಸೀಲಿಂಗ್ ಫ್ಯಾನ್, 100 ಕುಕ್ಕರ್,100 ತವಾ ಮತ್ತು 100 ಇಸ್ತ್ರಿ ಪೆಟ್ಟಿಗೆಗಳು ಇರಲಿವೆ. ಬೆಟರ್‌ಲಕ್ ನೆಕ್ಸ್ಟ್‌ಟೈಮ್ ಎಂಬ ಪದವೇ ಇಲ್ಲದಾಗಿದ್ದು ಪ್ರತಿ ಕಾರ್ಡ್‌ನಲ್ಲೂ ಯಾವುದಾದರೂ ಒಂದು ಬಹುಮಾನ ಖಚಿತವಾಗಿರುತ್ತದೆ. ರೂ.2 ಸಾವಿರಕ್ಕಿಂತ ಮೇಲ್ಪಟ್ಟ ಖರೀದಿಗೆ ಕೂಪನ್ ದೊರೆಯಲಿದ್ದು ಇದರಲ್ಲಿ ಅದೃಷ್ಟವಂತರು ಡಿಯೋ ಸ್ಕೂಟರ್ ಅನ್ನು ಗೆಲ್ಲಬಹುದಾಗಿದೆ. ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಗ್ರೈಂಡರ್, ಮಿಕ್ಸಿಗಳನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳುವ ಅವಕಾಶ ಇದೆ. ವಿವೋ, ನೊಕಿಯೋ, ಓಪ್ಪೋ, ಸ್ಯಾಮ್‌ಸಂಗ್ ಸೇರಿದಂತೆ ಎಲ್ಲಾ ಬ್ರ್ಯಾಡೆಂಡ್ ಕಂಪೆನಿಯ ಮೊಬೈಲ್ ಫೋನ್‌ಗಳು ಸುಲಭ ಕಂತುಗಳಲ್ಲೂ ಲಭ್ಯವಿದ್ದು ರೂ.2 ಸಾವಿರದಿಂದ 6 ಸಾವಿರದವರೇಗೆ ವಿಶೇಷ ಆಪರ್ ಪಡೆಯಬಹುದಾಗಿದೆ. ಪ್ರತಿ ಮೊಬೈಲ್ ಖರೀದಿಯ ಜೊತೆ ಮೊಬೈಲ್ ಗ್ಲಾಸ್, ಚಾರ್ಜಿಂಗ್ ಸ್ಕ್ಯಾಂಡ್ ಉಚಿತವಾಗಿ ಸಿಗಲಿದೆ ಅಲ್ಲದೆ ರೂ.299 ಕ್ಕೆ ಬ್ಲೂಟೂತ್ ನೆಕ್‌ಬ್ಯಾಂಡ್ ಲಭ್ಯವಿದೆ. ಕೇವಲ ರೂ.8999 ಕ್ಕೆ 32 ಇಂಚಿನ ಸ್ಮಾರ್ಟ್ ಟಿವಿ ತಮ್ಮದಾಗಿಸಿಕೊಳ್ಳಬಹುದಾಗಿದೆ. ಇದಲ್ಲದೆ ಸ್ಮಾರ್ಟ್ ವಾಚ್‌ಗಳ ಮೇಲೆ ರೂ.40 ಶೇ.ದವರೇಗೆ ರಿಯಾಯಿತಿ ನೀಡಲಾಗಿದೆ.

ಬಜಾಜ್, ಟಿವಿಎಸ್ ಸೇರಿದಂತೆ ಹಲವು ಫೈನಾನ್ಸ್ ಕಂಪೆನಿಗಳ ಮೂಲಕ ಸುಲಭ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಆಕರ್ಷಕ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು. 1 ಇಎಂಐ ಆಫ್ ಸೌಲಭ್ಯವೂ ದೊರೆಯಲಿದೆ. ಕಡಿಮೆ ದಾಖಲೆಗಳ ಮೂಲಕ ಗ್ರಾಹಕರಿಗೆ ಶೋರೂಮ್‌ನಲ್ಲೇ ಫೈನಾನ್ಸ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಅತಿಥಿಯಲ್ಲಿ ಗುಣಮಟ್ಟಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ಇಲ್ಲಿರುವ ಫರ್ನಿಚರ‍್ಸ್ ಐಟಂಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡು ಬರಲಾಗಿದೆ. ಮನೆಗೆ ಬೇಕಾದ ಎಲ್ಲಾ ಬಗೆಯ ಫರ್ನಿಚರ‍್ಸ್‌ಗಳು ಒಂದೇ ಸೂರಿನಡಿ ಲಭ್ಯವಿದ್ದು ರೂ.10 ಸಾವಿರಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಕೂಪನ್‌ಗಳನ್ನು ನೀಡಲಾಗುತ್ತಿದ್ದು ಟಿವಿ, ರೆಫ್ರಿಜರೇಟರ್, ಕುಕ್ಕರ್, ಸೀಲಿಂಗ್ ಫ್ಯಾನ್ ಸಹಿತ ನೂರಾರು ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ. ಗುಣಮಟ್ಟವೇ ಅತಿಥಿಯ ಧ್ಯೇಯವಾಗಿರುವುದರಿಂದ ಇಲ್ಲಿ ಖರೀದಿಸುವ ಪ್ರತಿಯೊಂದು ಐಟಮ್‌ಗಳಲ್ಲೂ ಒಂದು ಆರಾಮದಾಯಕ ಅನುಭವವನ್ನು ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊ: 9481934111, 9590550111 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here