ಮಂಗಳೂರು: ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ವೀಣಾ ಪಿ ಭಟ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಪೊಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಫೇಸ್‌ಬುಕ್‌ನಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ವ್ಯಕ್ತಿಯ ಕುರಿತು ವೀಣಾ ಪಿ ಭಟ್ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಭಾಸ್ಕರ ಮಣಿಯಾಣಿ ಎಂಬವರು ವೀಣಾ ಪಿ ಭಟ್‌ರವರ ಬಗ್ಗೆ ಆಕ್ಷೇಪಾರ್ಹ ಅಶ್ಲೀಲ ಮತ್ತು ಮಾನಹಾನಿಕರ ಕಮೆಂಟ್ ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಈ ಬಗ್ಗೆ ಪೊಲಿಸರಿಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಫೇಸ್‌ಬುಕ್‌ನಲ್ಲಿ ಹಾಕಿರುವ ಕಮೆಂಟ್‌ನ್ನು ಅಳಿಸಿ ಹಾಕಿಸಿದ್ದಾರೆ. ಬಳಿಕ ಆರೋಪಿ ಮತ್ತು ದೂರುದಾರ ವೀಣಾ ಪಿ ಭಟ್‌ರವರ ಸಮಕ್ಷಮ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದು ಆರೋಪಿ ಕ್ಷಮೆ ಕೇಳಿದ ಬಳಿಕ ಪ್ರಕಣವನ್ನು ಇತ್ಯರ್ಥಪಡಿಸಲಾಗಿದೆ ಎಂದು ವೀಣಾ ಪಿ ಭಟ್ ತಿಳಿಸಿದ್ದಾರೆ.