ಯುವವಾಹಿನಿ ಉಪ್ಪಿನಂಗಡಿ ಘಟಕಕ್ಕೆ 25ರ ಸಂಭ್ರಮ: ಭಜನೆ, ಗುರುಸ್ಮರಣೆ

ಉಪ್ಪಿನಂಗಡಿ :ಯುವವಾಹಿನಿ ಉಪ್ಪಿನಂಗಡಿ ಘಟಕವು 25 ಸಂವತ್ಸರಗಳನ್ನು ಪೊರೈಸಿದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರ ಮನೆ ಭೇಟಿಯ ಭಾಗವಾಗಿ ಭಜನೆ ಮತ್ತು ಗುರುಸ್ಮರಣೆ 14ನೇ ಕಾರ್ಯಕ್ರಮ 2006-2007ರ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಗುಣಾಕರ ಅಗ್ನಾಡಿಡಿವರ ಮನೆಯಲ್ಲಿ ನಡೆಯಿತು.

ಭಜನಾ ಕಾರ್ಯಕ್ರಮ ಮುಗಿದ ಬಳಿಕ ಗುರುಸ್ಮರಣೆ ಕಾರ್ಯಕ್ರಮವನ್ನು ಘಟಕದ ಉಪಾಧ್ಯಕ್ಷ ಮನೋಹರ್ ಆಟಲ್ ನಡೆಸಿಕೊಟ್ಟರು. ಘಟಕವನ್ನು ತಮ್ಮ ಅಧ್ಯಕ್ಷಾವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಗುಣಾಕರ ಅಗ್ನಾಡಿ ವಿನುತಾ ದಂಪತಿ, ಪುತ್ರ ಶ್ರವಣ್ ಮತ್ತು ಸಹೋದರರಾದ ಕರುಣಾಕರ ಸುಜಾತ ದಂಪತಿಯೊಂದಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಗುಣಾಕರ ಅಗ್ನಾಡಿ ರವರು ತಮ್ಮ ಅಧ್ಯಕ್ಷವಧಿಯಲ್ಲಿ ಘಟಕವನ್ನು ಅತ್ಯುತ್ತಮ ಮಟ್ಟದಲ್ಲಿ ನಡೆಸಲು ಸಹಕರಿಸಿದ ಸರ್ವರ ಸಹಕಾರವನ್ನು ನೆನೆಪಿಸಿದರು.

ಶ್ರೀಕೃಷ್ಣ ಭಜನಾ ಮಂಡಳಿ ಕರಾಯ ಇಲ್ಲಿನ ಸಕ್ರಿಯ ಸೇವಕರು ಮತ್ತು ಭಜನಾ ಮಂಡಳಿಯ ಯಶಸ್ಸಿಗೆ ಕಾರಣರಾದ ದೇವರಾಜ್ ಕಲ್ಲಾಪು, ಶ್ರೀರಾಮಾಂಜನೇಯ ಭಜನಾ ಮಂಡಳಿ ಪಿಲಿಗೂಡು ಇಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ ಬಿ.ಕೆ.ರಾಘವ ಪೂಜಾರಿ ಸೇರಿದಂತೆ ಪ್ರಗತಿಪರ ಕೃಷಿಕ, ಸಮಾಜ ಸೇವಕ, ಕೂಸಪ್ಪ ಪೂಜಾರಿ ಮೂಡಬೈಲುರವರನ್ನು ಸನ್ಮಾನಿಸಲಾಯಿತು.
ಗುಣಾಕರ ಅಗ್ನಾಡಿಯವರ ಪುತ್ರ ಶ್ರವಣ್‌ರವರ 10ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಯುವವಾಹಿನಿ ಉಪ್ಪಿನಂಗಡಿ ಘಟಕಕ್ಕೆ 5000 ರೂ. ನೀಡಿದರು. ಯುವವಾಹಿನಿ ಉಪ್ಪಿನಂಗಡಿ ಘಟಕಕ್ಕೆ ನೂತನ ಸದಸ್ಯರಾಗಿ ಆಗಮಿಸಿದ ಪದ್ಮನಾಭ ಪೂಜಾರಿ ಮೂಡಬೈಲುರವರನ್ನು ಗುಲಾಬಿ ಹೂವು ನೀಡಿ ಸ್ವಾಗತಿಸಲಾಯಿತು.
ಘಟಕದ ಗೌರವ ಸಲಹೆಗಾರರಾದ ವರದರಾಜ್, ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ, ಸಮಾಜದ ಮುಖಂಡ ದೇವರಾಜ್ ಕಲ್ಲಾಪು,ಬಿ.ಕೆ.ರಾಘವ ಪೂಜಾರಿ, ಕೂಸಪ್ಪ ಪೂಜಾರಿ, ಘಟಕದ ಮಾಜಿ ಅಧ್ಯಕ್ಷ ರಾಜರಾಮ್ ಕೆ.ಬಿ, ಚಂದ್ರಶೇಖರ್ ಸನೀಲ್, ಜಯವಿಕ್ರಂ ಕಲ್ಲಾಪು, ಅಜಿತ್ ಕುಮಾರ್ ಪಾಲೇರಿ, ಕೃಷ್ಣಪ್ಪ ಪೂಜಾರಿ, ಅಶೋಕ್ ಕುಮಾರ್ ಪಡ್ಪು, ರವೀಂದ್ರ ದಲ್ಕಾಜೆ, ಜಯಾನಂದ ಕಲ್ಲಾಪು, ಜನಾರ್ದನ ನೂಜಿ, ಡೀಕಯ್ಯ ಗೌಂಡತ್ತಿಗೆ, ಘಟಕದ ಹಿರಿಯರಾದ ಬೊಮ್ಮಯ್ಯ ಬಂಗೇರ, ಕರುಣಾಕರ ಅಗ್ನಾಡಿ, ಘಟಕದ ಪ್ರಥಮ ಉಪಾಧ್ಯಕ್ಷ ಮನೋಹರ್ ಆಟಲ್, ಉಪಾಧ್ಯಕ್ಷರಾದ ಮನೋಜ್ ಸಾಲಿಯಾನ್, ಘಟಕದ ಕಾರ್ಯದರ್ಶಿ ಉದಯ್ ಪೂಜಾರಿ, ಜೊತೆ ಕಾರ್ಯದರ್ಶಿ ಅನಿತಾ, ಕೋಶಾಧಿಕಾರಿ ಸುರೇಶ್ ಹಲೇಜಿ, ಪದಾಧಿಕಾರಿಗಳಾದ ನಾಣ್ಯಪ್ಪ ಕೋಟ್ಯಾನ್, ಮಾಧವ್ ಬಿ.ಕೆ, ಅಂಕಿತ್ ಪೂಜಾರಿ, ಸಂದೀಪ್ ಕುಪ್ಪೆಟ್ಟಿ, ಮನೋಹರ್ ಕೆಳಗಿನಮನೆ, ತುಳಸಿದರ್ ಬೆನೆಪ್ಪು, ರಕ್ಷಾ ಎಚ್.ಎಸ್, ಘಟಕದ ಸದಸ್ಯರಾದ ಉಮೇಶ್, ರಮ್ಯಾ ರಾಜರಾಮ್, ಶ್ವೇತಾ ಆಶಿತ್, ಅನಿಲ್ ದಡ್ಡು, ಕಾವ್ಯ ಅನಿಲ್, ಗಂಗಾಧರ್ ಪುರಿಯ, ರವೀಂದ್ರ ಪುರಿಯ, ವರ್ಷಾ, ಮೇಷಾ, ಧೃಣಿತಾ, ಶ್ರೇಯಾ, ಬೇಬಿ ಸಾನಿಧ್ಯ, ಮಾಸ್ಟರ್ ಧ್ರುವ, ಸಂತೋಷ್ ಕೆಳಗಿನಮನೆ, ಚೇತನ್ ಪೊಲ್ಲಕೋಡಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಅನಿತಾ ಸತೀಶ್ ವಂದಿಸಿದರು. ಘಟಕದ ಮಾಜಿ ಕಾರ್ಯದರ್ಶಿ ನಾಣ್ಯಪ್ಪ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.