ಮುಕ್ರಂಪಾಡಿ:ಸ್ಕೂಟರ್, ಬೈಕ್ ಡಿಕ್ಕಿ –  ಸವಾರನಿಗೆ ತೀವ್ರ ಗಾಯ

0

ಪುತ್ತೂರು:ಮುಕ್ರಂಪಾಡಿ ಸಮೀಪ ಸ್ಕೂಟರ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ನ.3ರಂದು ನಡೆದಿದ್ದು ಸ್ಕೂಟರ್ ಸವಾರ ತೀವ್ರ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.

 

ದರ್ಬೆಯಿಂದ ಸಂಪ್ಯ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಮತ್ತು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ದರ್ಬೆ ನಿವಾಸಿ ಕೃಷ್ಣಕುಮಾರ್ ಎಂಬವರು ತೀವ್ರ ಗಾಯಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಬೈಕ್ ಸವಾರ ಒಳತ್ತಡ್ಕ ನಿವಾಸಿ ಅಕ್ಷತ್ ಎಂಬವರಿಗೆ ಕಾಲಿಗೆ ಗಾಯವಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.

LEAVE A REPLY

Please enter your comment!
Please enter your name here