ಬಾಲವನದಲ್ಲಿ ಬಾಲರು ಸಂಭ್ರಮದ ಮಕ್ಕಳ ದಿನಾಚರಣೆ

0

ಮಕ್ಕಳ ಕಲರವದಲ್ಲಿ ತುಂಬಿ ತುಳುಕಿದ ಬಾಲವನ

ಪುತ್ತೂರು; ಮಕ್ಕಳ ದಿನಾಚರಣೆಯ ಅಂಗವಾಗಿ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಬಾಲರು ಸಂಭ್ರಮದ ಮಕ್ಕಳ ದಿನಾಚರಣೆಯ ಸಾವಿರಾರು ಪುಟಾಣಿ ಮಕ್ಕಳ ಸಂಭ್ರಮದ ಸಮ್ಮಿಳನ, ಏಕಕಾಲದಲ್ಲಿ 11 ವೇದಿಕೆಗಳಲ್ಲಿ ಸಾಹಿತ್ಯ, ಚಿತ್ರ, ಕರಕುಶಲ, ಹಾಡು, ನಾಟಕ, ಭಾಷಣ ಮೊದಲಾದ ತರಬೇತಿ, ಸತತ ಐದು ಗಂಟೆಗಳ ಸಾಂಸ್ಕೃತಿಕ ಸಂತಸದ ಕಾರ್ಯಕ್ರಮಗಳೊಂದಿಗೆ ವಿಶಿಷ್ಠ ರೀತಿಯಲ್ಲಿ ಸಂಪನ್ನಗೊಂಡಿತು. ಮಕ್ಕಳ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಾಲವನವು ಸಂಪೂರ್ಣ ಮಕ್ಕಳ ಕಲರವಗಳಿಂದ ತುಂಬಿ ತುಲುಕಿತ್ತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಬಾಲವನ ಸಮಿತಿ, ಸಹಾಯಕ ಆಯುಕ್ತರ ಕಾರ್ಯಾಲಯ ಇವುಗಳ ಜಂಟಿ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಇವರ ಸಂಯೋಜನೆಯಲ್ಲಿ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ, ಭಾರತ ಸೇವಾದಳ ಪುತ್ತೂರು ತಾಲೂಕು ಸಮಿತಿಯ ಆಯೋಜನೆಯಲ್ಲಿ ಬಾಲವನದಲ್ಲಿ ಬಾಲರು ಎಂಬ ಸಂಭ್ರಮದ ಮಕ್ಕಳ ದಿನಾಚರಣೆ ನೆರವೇರಿತು. ತಾಲೂಕಿನ 20 ಕ್ಲಸ್ಟರ್‌ಗಳಿಂದ ತಲಾ 50 ವಿದ್ಯಾರ್ಥಿಗಳಂತೆ ಬಾಲವನದಲ್ಲಿ ಬಾಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ, ಕ್ರೀಡೆ, ಸಾಹಿತ್ಯ, ಚಿತ್ರಕಲೆ ಮೊದಲಾದ ಕಲಾಪ್ರದರ್ಶನಗಳು ನಡೆದವು.
ಮಕ್ಕಳ ಚಿತ್ರಕಲೆ, ಕ್ರಾಫ್ಟ್, ಕಸದಿಂದ ರಸ, ಇತ್ಯಾದಿಗಳ ಪ್ರದರ್ಶನ, ವಿವಿಧ ಮನೋರಂಜನಾ ಆಟಗಳು, ಆಹಾರ ಮೇಳಗಳು, ವಿವಿಧ ಇಲಾಖೆಗಳ ಮಾಹಿತಿ ಮೇಳ, ಅಗ್ನಿಶಾಮಕ ಇಲಾಖೆಯಿಂದ ಪ್ರಾತ್ಯಕ್ಷಿಕೆ, ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸಾ ಸೌಲಭ್ಯಗಳು ಕಾರ್ಯಕ್ರಮದಲ್ಲಿ ಪ್ರಮುಖವಾಗಿತ್ತು. ಮುಖ್ಯ ವೇದಿಕೆಯಲ್ಲಿ 20 ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ವೈವಿದ್ಯ ಕಾರ್ಯಕ್ರಮಗಳು ನಡೆಯಿತು.


11 ವೇದಿಕೆಯಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ:
ಮುಖ್ಯ ವೇದಿಕೆ ಸೇರಿದಂತೆ ಒಟ್ಟು 11 ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆದಿದೆ. ಪ್ರಮುಖ ವೇದಿಕೆ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಆದರ್ಶ ಶಿಕ್ಷಕ ದಿ. ಶೀಂಟೂರು ನಾರಾಯಣ ರೈಯವರ ನೆನಪಿನಲ್ಲಿ ತಾಲೂಕಿನ ಆಯ್ದ 20 ತಂಡಗಳಿಂದ `ಸಾಂಸ್ಕೃತಿಕ ಸಂತಸ’ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮ, ಬಾಲರಂಗ ಎರಡನೇ ವೇದಿಕೆಯಲ್ಲಿ ಅಕ್ಷಯ ಕಾಲೇಜು ಸಂಪ್ಯ ಇವರ ಪ್ರಾಯೋಜಕತ್ವದಲ್ಲಿ ಹಾಡುಗಾರ ದಿ. ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮರವರ ನೆನಪಿನಲ್ಲಿ ಗಾನಸಿರಿ ಕಲಾ ಕೇಂದ್ರದವರಿಂದ `ಗಾಯನ ಗಂಧ’ ಹಾಡುಗಳ ಗಾಯನ ಮತ್ತು ತರಬೇತಿ, ಬಾಲರಂಗ ಮೂರನೇ ವೇದಿಕೆಯಲ್ಲಿ ಸಾಹಿತಿ ದಿ. ಗಂಗಾಧರ ಬೆಳ್ಳಾರೆಯವರ ನೆನಪಲ್ಲ ನ್ಯಾಯವಾದಿ ಭಾಸ್ಕರ ಕೋಡಿಂಬಾಳರವರ ಪ್ರಾಯೋಜಕತ್ವದಲ್ಲಿ `ಬರೆಹದ ಬೆರಗು’ ಸಾಹಿತ್ಯ ವೇದಿಕೆ ಮಕ್ಕಳ ಸೃಜನಶೀಲ ಬರಹಗಳ ತರಬೇತಿ, ವೇದಿಕೆ 4 ರಲ್ಲಿ ಹರ್ಷ ಕುಮಾರ್ ರೈ ಮಾಡಾವು ಪ್ರಾಯೋಜಕತ್ವದಲ್ಲಿ ಭೌತಶಾಸ್ತ್ರ ಉಪನ್ಯಾಸಕ ದಿ.ಪ್ರೋ| ಬಿ.ಜೆ ಸುವರ್ಣರವರ ನೆನಪಲ್ಲಿ `ವಿಜ್ಞಾನ ವಿಸ್ಮಯ’ ವಿಜ್ಞಾನ ಕುತೂಹಲಕಾರಿ ಸಂಗತಿಗಳ ಪರಿಚಯ, 5ನೇ ವೇದಿಕೆಯಲ್ಲಿ ವಾಲಿಬಾಲ್ ಆಟಗಾರ ದಿ| ಸುನೀಲ್ ಮಸ್ಕರೇನಸ್ ಸಾಮೆತ್ತಡ್ಕ ನೆನಪಲ್ಲ ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ `ಆಟದ ಅಂಗಣ’ ಗ್ರಾಮೀಣ ಆಟಗಳ ಸೊಬಗು, 6ನೇ ವೇದಿಕೆಯಲ್ಲಿ ಚಿತ್ರ ಕಲಾವಿದ ದಿ ಬಾಬು ಮಾಸ್ತರ್ ನೆನಪಲ್ಲಿ ಜೇಸಿಐ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ `ಚಿತ್ರ ಚಿಂತನ’ ನೂರಾರು ಮಕ್ಕಳಿಂದ ಕ್ಯಾನ್‌ವಾಸ್ ಚಿತ್ರ ರಚನೆ, 7 ನೇ ವೇದಿಕೆಯಲ್ಲಿ ಗೆರಟೆ ಕಲಾವಿದ ದಿ ನಾರಾಯಣ ಜೋಯಿಷ ಶಾಸ್ತಾವನ ಕೊಡಿಪ್ಪಾಡಿಯವರ ಸ್ಮರಣಾರ್ಥ `ಕರಕುಶಲ ಕೌತುಕ’ ಮುಖವಾಡ, ಒರಿಗಾಮಿ, ಕಸದಿಂದ ರಸ, ೮ನೇ ವೇದಿಕೆಯಲ್ಲಿ ಕಲಾವಿದ ದಿ ಮೋಹನ್ ಸೋನ ಸ್ಮರಣಾರ್ಥ ರೋಟರಿ ಕ್ಲಬ್ ಪುತ್ತೂರು ಯುವದ ಪ್ರಾಯೋಜಕತ್ವದಲ್ಲಿ `ರಂಗ ರಚನೆ’ ರಂಗಗೀತೆ, ರಂಗಸಂಗತಿ, ರಂಗದಾಟಗಳು, 9ನೇ ವೇದಿಕೆಯಲ್ಲಿ ಸಾಂಸ್ಕೃತಿಕ ಹರಿಕಾರ ದಿ ಚಿದಾನಂದ ಕಾಮತ್ ಕಾಸರಗೋಡು ನೆನಪಲ್ಲಿ ಪ್ರೇರಣಾ ವಿದ್ಯಾಸಂಸ್ಥೆ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ `ಮಾತಿನ ಮನೆ’ ಪರಿಣಾಮಕಾರಿ ಭಾಷಣ ಕಲೆ, 10ನೇ ವೇದಿಕೆಯಲ್ಲಿ ಮಕ್ಕಳ ಸಾಹಿತಿ ದಿ. ಸಿ.ಎಚ್ ಲಕ್ಷ್ಮೀರವರ ನೆನಪಲ್ಲಿ `ಪ್ರತಿಭಾ ಪ್ರತಿಬಿಂಬ’ ಮಕ್ಕಳ ಕಲಾಕೃತಿ ಪ್ರದರ್ಶನ ಮತ್ತು ಚಲನಚಿತ್ರ ಪ್ರದರ್ಶನ, 11ನೇ ವೇದಿಕೆಯಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ` ಓದಿನ ಓಟ’ ಮಕ್ಕಳ ಓದು ಬಹುಮಾನ ಪಡೆ ಎಂಬ ವಿನೂತನ ಕಾರ್ಯಕ್ರಮಗಳು ಸಂಪನ್ನಗೊಂಡಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಮುಖ ಧ್ವಾರದ ಬಳಿಯಿಂದ ಅತಿಥಿಗಳನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ಶೀಂಟೂರು ನಾರಾಯಣ ರೈ ಮುಖ್ಯ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯೋಗಪಟು ಪ್ರಣಮ್ಯ ಅಗಳಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಿಗೆ ಇಂದು ಸಾಕಷ್ಟು ವೇದಿಕೆಗಳು ಲಭ್ಯವಾಗುತ್ತದೆ. ಉತ್ತಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಉತ್ತಮ ವೇದಿಕೆ ದೊರೆಯುತ್ತದೆ. ಸಾಧಿಸುವ ಛಲವಿದ್ದರೆ ಉತ್ತಮ ಪ್ರತಿಫಲ ದೊರೆಯಲು ಸಾಧ್ಯ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಕ್ಕಳ ಹೆಸರಿನಲ್ಲಿ ಪುತ್ತೂರಿನ ಜನತೆ ಒಂದಾಗುವ ಅವಕಾಶ ದೊರೆತಿದ್ದು ಪುತ್ತೂರಿಗೆ ಭವಿಷ್ಯದೆ ಎಂದರು. ನ.14ರಂದು ಮಕ್ಕಳ ದಿನಾಚರಣೆಯ ಜೊತೆಗೆ ದೇಶದಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತಿದೆ. ಮಕ್ಕಳ ದಿನಾಚರಣೆಯ ಮೂಲಕ ಭವಿಷ್ಯದಲ್ಲಿ ಭಾರತ ಹೇಗಿರಬೇಕು ಎಂದು ಸಂದೇಶ ನೀಡಲಾಗುತ್ತಿದೆ. ಭಾರತದ ಭವ್ಯ ಪರಂಪರೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಮಕ್ಕಳ ದಿನಾಚರಣೆಯನ್ನು ಐತಿಹಾಸಿಕ ಹಿನ್ನೆಲೆಯಿರುವ ಶಿವರಾಮ ಕಾರಂತ ಬಾಲವನದಲ್ಲಿ ಆಚರಿಸಲಾಗುತ್ತಿದೆ. ಇಲ್ಲಿರುವ ವಿದ್ಯಾರ್ಥಿಗಳೇ ಮುಂದಿನ ವಿಜ್ಞಾನಿಗಳು,ಪ್ರಧಾನ ಮಂತ್ರಿ, ರಾಷ್ಷ್ರಪತಿಯಾಗುವವರಾಗಿದ್ದು ಅವರಿಗೆ ಪ್ರೇರಣೆ ನೀಡುವ ಕಾರ್ಯಕ್ರವಾಗಿದೆ ಎಂದರು.
ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ತಾಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ನಡೆಸಿರುವ ಕಾರ್ಯಕ್ರಮ ಬಾಲವನದಲ್ಲಿ ನಿರಂತರ ಕಾರ್ಯಕ್ರಮಗಳಿಗೆ ಪೂರಕವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಮಕ್ಕಳ ಬಗ್ಗೆ ಸಾಕಷ್ಟು ಕನಸು ಕಂಡವರು. ಸಾಧಿಸುವ ಛಲವಿದ್ದರೆ ಏನನ್ನೂ ಸಾಧಿಸಬಹುದು ಎಂದರು.
ನಗರ ಸಭಾ ಸದಸ್ಯೆ ದೀಕ್ಷಾ ಪೈ, ತಹಶೀಲ್ದಾರ್ ನಿಸರ್ಗ ಪ್ರಿಯ ಜೆ., ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪೌರಾಯುಕ್ತ ಮಧು ಮನೋಹರ್, ಅಕ್ಷಯ ಕಾಲೇಜಿನ ಚೆಯರ್ ಮೆನ್ ಜಯಂತ ನಡುಬೈಲು, ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಪಿ.ವಿ ಗೋಕುಲ್‌ನಾಥ್, ಮಾತೃಛಾಯ ಸಭಾಂಗಣದ ಮ್ಹಾಲಕ ಅವಿನಾಶ್ ಭಂಡಾರ ಕಾರ್ಸ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಶಿವಪ್ರಕಾಶ್, ಪ್ರಾಥಮಿಕ ಶಾಲಾಶಮ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಕುಮಾರ್ ರೈ, ಕನ್ನಡ ಸಾಹಿತ್ಯ ಪರಿಷತ್ ಕೋಶಾಧಿಕಾರಿ ಹರ್ಷ ಕುಮಾರ್ ರೈ ಮಾಡಾವು, ರೋಟರಿ ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ, ರೋಟರಿ ಕ್ಲಬ್ ಪುತ್ತೂರು ಸ್ವರ್ಣದ ಅಧ್ಯಕ್ಷ ವೆಂಕಟ್ರಮಣ ಕಳುವಾಜೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ಜೇಸಿಐ ಅಧ್ಯಕ್ಷ ಶಶಿರಾಜ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಉಳಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಬಾಲವನದ ಕಾರ್ಯಕ್ರಮ ಸಂಯೋಜಕ ಜಗನ್ನಾಥ ಅರಿಯಡ್ಕ ವಂದಿಸಿದರು.

LEAVE A REPLY

Please enter your comment!
Please enter your name here