ಪುತ್ತೂರು: ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಕಾಲೇಜು ಚೇರ್ ಮ್ಯಾನ್ ಜಯಂತ್ ನಡುಬೈಲುರವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಅಂತಿಮ ಬಿಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೋರೇಶನ್ಸ್ ನ ಗಗನ್ ದೀಪ್ ಎ.ಬಿ, ಕಾರ್ಯದರ್ಶಿಯಾಗಿ ಅಂತಿಮ ಬಿಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೋರೇಶನ್ಸ್ ನ ಲಿಖಿತ್ ಎ.ವಿ, ಕೋಶಾಧಿಕಾರಿಯಾಗಿ ದ್ವಿತೀಯ ವರ್ಷದ ಫ್ಯಾಶನ್ ಡಿಸೈನ್ ನ ಸೃಷ್ಟಿ ಎಚ್.ಜಿ, ಉಪಾಧ್ಯಕ್ಷರಾಗಿ ದ್ವಿತೀಯ ಇಂಟೀರಿಯರ್ ಡಿಸೈನ್ ನ ವಿನೋದ್ ಕೆ.ಸಿ, ಜೊತೆ ಕಾರ್ಯದರ್ಶಿಯಾಗಿ ದ್ವಿತೀಯ ಬಿಕಾಂನ ಮಿಥುನ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದ್ವಿತೀಯ ಫ್ಯಾಶನ್ ಡಿಸೈನ್ ನ ದಕ್ಷಿತಾ ಎಂ.ಕೆ, ಕ್ರೀಡಾ ಕಾರ್ಯದರ್ಶಿಯಾಗಿ ದ್ವಿತೀಯ ಬಿಎಸ್ಸಿ ಇಂಟೀರಿಯರ್ ಡಿಸೈನ್ ಮತ್ತು ಡೆಕೋರೇಶನ್ಸ್ ನ ನವೀನ್, ಮೀಡಿಯಾ ಕಾರ್ಯದರ್ಶಿಯಾಗಿ ದ್ವಿತೀಯ ಬಿಕಾಂನ ಮುಹಮದ್ ಮುಸ್ತಾಫ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿಯಾಗಿ ಪ್ರಥಮ ಬಿಎಸ್ಸಿ ಫ್ಯಾಶನ್ ಡಿಸೈನ್ ನ ಶ್ರದ್ಧಾ ಹಾಗೂ ಪ್ರಥಮ ಡಿಪ್ಲೋಮಾ ಇಂಟೀರಿಯರ್ ಡಿಸೈನ್ ನ ಸಚಿನ್ ಟಿ. ಕೆ, ಜೊತೆ ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರಥಮ ಬಿಕಾಂನ ಮಹೇಶ್ ಪಿ ಹಾಗೂ ಪ್ರಥಮ ಡಿಪ್ಲೋಮಾ ಇಂಟೀರಿಯರ್ ಡಿಸೈನ್ ನ ಪ್ರಶಾಂತ್ ಎಸ್, ಮೀಡಿಯಾ ಜೊತೆ ಕಾರ್ಯದರ್ಶಿಗಳಾಗಿ ಪ್ರಥಮ ಬಿಕಾಂನ ಚಿಂತನ್ ಹಾಗೂ ಪ್ರಥಮ ಡಿಪ್ಲೋಮಾ ಇಂಟೀರಿಯರ್ ಡಿಸೈನ್ ನ ಮನಸ್ವಿ ಎಚ್.ಸಿರವರು ಆಯ್ಕೆಯಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.16: ಪದ ಪ್ರದಾನ..
ನ.16 ರಂದು ನೂತನ ವಿದ್ಯಾರ್ಥಿ ಸಂಘದ ಪದ ಪ್ರದಾನ ಕಾರ್ಯಕ್ರಮ ಅಕ್ಷಯ ಕಾಲೇಜು ಆಡಿಟೋರಿಯಂನಲ್ಲಿ ನೆರವೇರಲಿದ್ದು, ಅಕ್ಷಯ ಕಾಲೇಜು ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಸಹಾಯಕ ಪ್ರಾಧ್ಯಾಪಕ ಡಾ|ನರೇಂದ್ರ ರೈ ದೇರ್ಲರವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉದ್ಯಮಿ ಉಮೇಶ್ ನಾಡಾಜೆ, ಗೌರವ ಅತಿಥಿಯಾಗಿ ಎ.ಟಿ.ಎಸ್ ಗ್ರೂಪ್ ನ ವ್ಯವಸ್ಥಾಪಕ ನಿರ್ದೇಶಕ ಡಾ|ರವಿ ಶೆಟ್ಟಿ ಮೂಡಂಬೈಲುರವರು ಭಾಗವಹಿಸಲಿದ್ದಾರೆ.