ಕೆದಂಬಾಡಿ ಗ್ರಾಮದಲ್ಲಿ ರೂ.90 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರುರವರಿಂದ ಶಿಲಾನ್ಯಾಸ, ಗುದ್ದಲಿಪೂಜೆ

0

ಪುತ್ತೂರು: ಕೆದಂಬಾಡಿ ಗ್ರಾಮದಲ್ಲಿ ಶಾಸಕರ ಅನುದಾನದಿಂದ ನಡೆಯುವ ೯೦ ಲಕ್ಷ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರುರವರು ನ.೧೮ ರಂದು ಶಿಲಾನ್ಯಾಸ, ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗ್ರಾಮದ ಅಭಿವೃದ್ಧಿಯೇ ಬಿಜೆಪಿ ಸರಕಾರದ ಧ್ಯೇಯವಾಗಿದ್ದು ಎಲ್ಲರಿಗೂ ಸಮಪಾಲು, ಸಮಬಾಳು ಎಂಬಂತೆ ಅನುದಾನಗಳನ್ನು ಒದಗಿಸಲಾಗುತ್ತಿದೆ ಎಂದರು. ಪಟ್ಟಣದಂತೆ ಹಳ್ಳಿಯ ರಸ್ತೆಗಳೂ ಅಭಿವೃದ್ದಿಯಾಗುವುದು ಮಾತ್ರವಲ್ಲದೆ ಪ್ರತೀ ಮನೆ ಮನೆಗೆ ತೆರಳುವ ರಸ್ತೆಯೂ ಕಾಂಕ್ರೀಟ್ ಆಗಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಕಾಂಕ್ರೀಟ್ ರಸ್ತೆ ಆಗಿರಬೇಕು ಎಂಬುದು ಪ್ರತೀಯೊಬ್ಬರ ಆಸೆಯಾಗಿದೆ ಈ ಆಸೆಯನ್ನು ನೆರವೇರಿಸಲು ಶಾಸಕನಾದ ನಾನು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಎಲ್ಲಾ ಗ್ರಾಮಗಳಿಗೂ ಸಮಾನ ಪ್ರಮಾಣದಲ್ಲಿ ಹಂಚಿಕೆ ಮಾಡಿದ್ದೇನೆ. ಹಳೆಯ ಕಾಲದಿಂದಲೇ ಬೇಡಿಕೆ ಇದ್ದ ಕೆಲವು ರಸ್ತೆಗಳು ಕಳೆದ ಬಾರಿ ಸ್ವಲ್ಪ ಮಟ್ಟಿಗೆ ಕಾಂಕ್ರೀಟ್ ಮಾಡಲಾಗಿದೆ. ಉಳಿದ ರಸ್ತೆಗಳಿಗೆ ಕಾಂಕ್ರೀಟ್ ಮಾಡಲು ಈ ಬಾರಿ ಕೆದಂಬಾಡಿ ಗ್ರಾಮಕ್ಕೆ ೯೦ ಲಕ್ಷ ರೂ. ಅನುದಾನವನ್ನು ನೀಡಿದ್ದೇನೆ. ಆಧ್ಯತೆ ಮೇರೆಗೆ ಅನುದಾನವನ್ನು ಇಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಗ್ರಾಮದ ಪ್ರತೀಯೊಂದು ರಸ್ತೆಯನ್ನೂ ಅಭಿವೃದ್ದಿ ಮಾಡುವುದಾಗಿ ಶಾಸಕರು ಭರವಸೆ ನೀಡಿದರು.

ಗ್ರಾಮದಲ್ಲಿ ನಡೆದ ರಸ್ತೆ ಕಾಮಗಾರಿ ಶಿಲಾನ್ಯಾಸ
ಇದ್ಯಪೆ ರಸ್ತೆ ರೂ.೧೦ ಲಕ್ಷ, ಇದ್ಪಾಡಿ ಪರಿಶಿಷ್ಟ ಜಾತಿ ಕಾಲನಿ ರಸ್ತೆ ರೂ.೧೦ ಲಕ್ಷ, ಪಟ್ಲಮೂಲೆ ರಸ್ತೆ ರೂ.೧೦ ಲಕ್ಷ, ತ್ಯಾಗರಾಜನಗರ ಪ,ಜಾತಿ ಕಾಲನಿ ರಸ್ತೆ ರೂ.೧೦ ಲಕ್ಷ , ತ್ಯಾಗರಾಜನಗರ ರಸ್ತೆ ರೂ.೧೦ ಲಕ್ಷ, ದರ್ಬೆ ಮಿತ್ರಂಪಾಡಿ ರಸ್ತೆ ರೂ.೧೦ ಲಕ್ಷ, ಚಾವಡಿ ಕೆದಂಬಾಡಿ ಗುತ್ತು ರಸ್ತೆ ರೂ.೧೦ ಲಕ್ಷ, ಬೋಳೋಡಿ ಪಟ್ಟೆತ್ತಡ್ಕ ರಸ್ತೆ ರೂ.೧೦ ಲಕ್ಷ , ಬಾಲಯ ಮಿತ್ತೋಡಿ ರಸ್ತೆ ರೂ.೧೦ ಲಕ್ಷ ವೆಚ್ಚದಲ್ಲಿ ನಡೆಯುವ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರು ಶಿಲಾನ್ಯಾಸ ನೆರವೇರಿಸಿದರು.



ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರತನ್ ರೈ ಕುಂಬ್ರ, ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ, ತಾ.ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಕಿಲ್ಲೆ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ, ಟಿಎಪಿಸಿಎಂಸಿ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ಕೆದಂಬಾಡಿ ಗ್ರಾಪಂ ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪೆ, ಜಯಲಕ್ಷ್ಮೀ ಬಲ್ಲಾಳ್, ರೇವತಿ ಬೋಳೋಡಿ, ಸುಜಾತ ಮುಳಿಗದ್ದೆ, ನಿತೀಶ್ ,ದಿಶಾ ನಾಮನಿರ್ದೇಶಿತ ಸದಸ್ಯ ರಾಮದಾಸ್ ಹಾರಾಡಿ, ಲೋಕೇಶ್ ಹೆಗ್ಡೆ, ತಾಪಂ ಮಾಜಿ ಸದಸ್ಯ ಹರೀಶ್ ಬಿಜತ್ರೆ, ಅರಿಯಡ್ಕ ಗ್ರಾಪಂ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ, ಸದಸ್ಯ ರಾಜೇಶ್ ಮಣಿಯಾಣಿ, ಅರುಣ್ ಕುಮಾರ್ ಆಳ್ವ, ಪ್ರವೀಣ್ ರೈ ಬೋಳೋಡಿ, ಶಿವರಾಮ ಗೌಡ ಇದ್ಯಪೆ, ಸೂರ್ಯಪ್ರಸನ್ನ ರೈ ಎಂಡೆಸಾಗು, ಗಣೇಶ್ ರೈ ಮಿತ್ರಂಪಾಡಿ, ಜಯರಾಮ ರೈ ಮಿತ್ರಂಪಾಡಿ, ಬಾಲಚಂದ್ರ ರೈ ಚಾವಡಿ, ಚಂದ್ರ ಇದ್ಪಾಡಿ, ಸೀತಾರಾಮ ಗೌಡ, ದಾಮೋದರ ಗೌಡ, ಸೀತಾರಾಮ ಗೌಡ ಇದ್ಯಪೆ,ರಾಘವ ಗೌಡ ಕೆರೆಮೂಲೆ, ವೀಣಾ ಆರ್ ರೈ ,ಕರುಣಾಕರ ರೈ ಅತ್ರೆಜಾಲು, ಕೊರಗಪ್ಪ ಪೂಜಾರಿ ತಿಂಗಳಾಡಿ, ಜಯರಾಮ ರೈ ಬಾಳಯ, ಜಯಲಕ್ಷ್ಮೀ ರೈ ಕೆದಂಬಾಡಿಗುತ್ತು, ಹರೀಶ್ ಮಿತ್ತೋಡಿ, ಸುಭಾಷ್ ಮಿತ್ತೋಡಿ, ಮಹಾಬಲ ರೈ ಕುಕ್ಕುಂಜೋಡು, ವಿಶ್ವನಾಥ ರೈ ಕಕ್ಕುಂಜೋಡು, ಭಾಸ್ಕರ ರೈ ಗುತ್ತು, ಸದಾಶಿವ ರೈ ಪೊಟ್ಟಮೂಲೆ ಸಹಿತ ಹಲವು ಮಂದಿ ಉಪಸ್ಥಿತರಿದ್ದರು.

` ಕೆದಂಬಾಡಿ ಗ್ರಾಮಕ್ಕೆ ಸಮಗ್ರ ಘನತ್ಯಾಜ್ಯ ಘಟಕ (ಎಂಆರ್‌ಎಫ್ ಘಟಕ) ನಿರ್ಮಾಣಕ್ಕೆ ರೂ.೧ ಕೋಟಿ ೯೫ ಲಕ್ಷ ಹಾಗೂ ೯ ರಸ್ತೆಗಳ ಅಭಿವೃದ್ಧಿಗೆ ರೂ.೯೦ ಲಕ್ಷ ಸೇರಿದಂತೆ ಒಟ್ಟು ರೂ.೨ ಕೋಟಿ ೮೫ ಲಕ್ಷ ಅನುದಾನ ಒದಗಿಸಿ ಕೊಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕರಿಸುತ್ತಿರುವ ಶಾಸಕ ಸಂಜೀವ ಮಠಂದೂರುರವರಿಗೆ ಅಭಿನಂದನೆಗಳೊಂದಿಗೆ ಮುಂದೆಯೂ ನಿಮ್ಮ ಸಹಕಾರ, ಪ್ರೋತ್ಸಾಹವನ್ನು ಬಯಸುತ್ತೇವೆ.‘-ರತನ್ ರೈ ಕುಂಬ್ರ, ಅಧ್ಯಕ್ಷರು ಕೆದಂಬಾಡಿ ಗ್ರಾಪಂ

LEAVE A REPLY

Please enter your comment!
Please enter your name here