ವಿಟ್ಲ: ಟೈಮಿಂಗ್ ವಿಚಾರ ಏಜೆಂಟ್, ಬಸ್ ಚಾಲಕನ ಮಧ್ಯೆ ಹೊಡೆದಾಟ

0

ವಿಟ್ಲ: ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಬಸ್ಸಿನ ಏಜೆಂಟ್ ಹಾಗೂ ಬಸ್ ಚಾಲಕರೋರ್ವರ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಹೊಡೆದಾಟ ನಡೆದ ಘಟನೆ ವಿಟ್ಲದ ಖಾಸಗಿ ಬಸ್ಸು ನಿಲ್ದಾಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಖಾಸಗಿ ಬಸ್ ನ ಎಜೆಂಟ್ ಜಯ ಕೊಟ್ಟಾರಿ ಮತ್ತು ಬಸ್ ಚಾಲಕ ಅಬ್ಬಾಸ್ ಎಂಬವರ ನಡುವೆ ಟೈಮಿಂಗ್ಸ್ ವಿಚಾರದಲ್ಲಿ ವಾಗ್ವಾದ ನಡೆದು, ಅದು ತಾರಕಕ್ಕೇರಿ ಪರಸ್ಪರ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here