ಪುತ್ತೂರಿನಲ್ಲಿ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78 ನೇ ಜಯಂತ್ಯೋತ್ಸವ:  ಕುಂಬ್ರದಲ್ಲಿ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ

0

  • ಪ್ರತಿ ಮನೆಯಿಂದಲೂ ಕಾರ್ಯಕ್ರಮಕ್ಕೆ ಜನ ಆಗಮಿಸಬೇಕು : ಶ್ರೀ ಧರ್ಮಪಾಲನಾಥ ಸ್ವಾಮೀಜಿ
  • ಇದು ಗೌಡ ಸಮಾವೇಶವಲ್ಲ, ಸ್ವಾಮೀಜಿಯ ಜಯಂತ್ಯೋತ್ಸವ- ಸಂಜೀವ ಮಠಂದೂರು 

ಪುತ್ತೂರು: ಆದಿಚುಂಚನಗಿರಿಯ ಭೈರವೈಕ್ಯ ಜಗದ್ಗುರು ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 78 ನೇ ಜಯಂತ್ಯೋತ್ಸವ ಸಂಸ್ಮರಣಾ ಕಾರ್ಯಕ್ರಮ ಹಾಗೂ ಮಂಗಳೂರು ಶಾಖಾಮಠದ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂಡಿಸಿರುವ ಮಹಾಪ್ರಬಂಧ `ಸಂಸ್ಕೃತ ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕೊಡುಗೆ’ ಒಂದು ಅಧ್ಯಯನ ಗ್ರಂಥವನನ್ನು ಲೋಕಾರ್ಪಣೆ ಕಾರ್ಯಕ್ರಮ ಜ.೨೨ ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗದ್ದೆಯಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ದ.೧೦ ರಂದು ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸಭಾ ಭವನದಲ್ಲಿ ನಡೆಯಿತು. ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಾ, ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರು ಒಂದು ವಿಶ್ವಕೋಶ, ವಿಶ್ವವಿದ್ಯಾನಿಲಯ ಇದ್ದಂತೆ ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಠದಿಂದ ಆಗುತ್ತಿದ್ದು ಸುಮಾರು ೧ ಲಕ್ಷ ೭೦ ಸಾವಿರದಷ್ಟು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಕೊಡುವ ಕೆಲಸ ನಡೆಯುತ್ತಿದೆ ಎಂದರು. ಸ್ವಾಮೀಜಿಯವರ ೭೮ ನೇ ಜಯಂತ್ಯೋತ್ಸವವನ್ನು ಪುತ್ತೂರಿನಲ್ಲಿ ಆಚರಿಸಬೇಕು ಎಂಬುದು ಸರ್ವಸದ್ಭಕ್ತರ ಆಶಯವಾಗಿದೆ. ಆದ್ದರಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾದರೆ ಪ್ರತಿಮನೆಯಿಂದಲೂ ಕಾರ್ಯಕ್ರಮಕ್ಕೆ ಜನ ಬರಬೇಕು ಸುಮಾರು ೧ ಲಕ್ಷ ಜನರು ಕಾರ್ಯಕ್ರಮಕ್ಕೆ ಸೇರುವಂತಾಗಬೇಕು ಈ ನಿಟ್ಟಿನಲ್ಲಿ ತಾವೆಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.


ಇದು ಗೌಡ ಸಮಾವೇಶವಲ್ಲ, ಸ್ವಾಮೀಜಿಯ ಜಯಂತ್ಯೋತ್ಸವ- ಸಂಜೀವ ಮಠಂದೂರು
ಅನ್ನ, ಅಕ್ಷರ, ಆರೋಗ್ಯಕ್ಕೆ ಪೀಠ ನೀಡಿದ ಕೊಡುಗೆ ಅಪಾರ. ಮಠದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕಾಗಿದೆ. ಆಧುನಿಕತೆಯ ಕಾಲಘಟ್ಟದಲ್ಲಿ ಹಿಂದಿನ ಪರಂಪರೆಗಳನ್ನು ಮರೆಯಲಾಗುತ್ತಿದೆ ಇದು ಸರಿಯಲ್ಲ, ಯುವ ಪೀಳಿಗೆ ಹಾಗೂ ಹಿರಿಯರು ಸೇರಿಕೊಂಡು ಸ್ವಾಮೀಜಿಯವರ ೭೮ ನೇ ಜಯಂತ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಜಯಂತ್ಯೋತ್ಸವ ಯಶಸ್ವಿಯಾಗಬೇಕು, ಸುಮಾರು ೧ ಲಕ್ಷದಷ್ಟು ಜನರು ಸೇರಬೇಕು, ಪ್ರತಿ ಮನೆಯಿಂದ ಜನ ಬರಬೇಕು, ಕೇವಲ ಗೌಡ ಸಮುದಾಯದವರು ಮಾತ್ರವಲ್ಲ ಎಲ್ಲರೂ ಈ ಜಯಂತ್ಯೋತ್ಸವದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದ ಶಾಸಕರು ಇದು ಗೌಡ ಸಮಾವೇಶವಲ್ಲ ಇದು ಮಹಾಸ್ವಾಮೀಜಿಯವರ ೭೮ ನೇ ಜಯಂತ್ಯೋತ್ಸವ ಆದ್ದರಿಂದ ಸಮಾಜದ ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು ಈ ನಿಟ್ಟಿನಲ್ಲಿ ಸಮಿತಿಯವರು ಕೆಲಸ ಮಾಡಬೇಕು, ಪ್ರತಿ ಗ್ರಾಮದಲ್ಲೂ ಕಾರ್ಯಕ್ರಮದ ಬಗ್ಗೆ ಬ್ಯಾನರ್ ಅಳವಡಿಸಬೇಕು , ಸಾಮಾಜಿಕ ಜಾಲತಾಣದ ಮೂಲಕ ಗ್ರೂಪ್ ಮಾಡಿಕೊಂಡು ಪ್ರಚಾರ ಮಾಡಬೇಕು ಎಂಬ ಬಗ್ಗೆಯೂ ಶಾಸಕರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಗತ ಸಮಿತಿಯ ಉಪಾಧ್ಯಕ್ಷ, ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡರವರು, ಸಮಾಜ, ಸಂಸ್ಕೃತಿ, ಸಂಸ್ಕಾರವನ್ನು ಎತ್ತಿ ಹಿಡಿದು ಜನಜಾಗೃತಿ ಮೂಡಿಸಿದ ಧರ್ಮಗುರುಗಳು, ಸಮುದಾಯದ ಏಳಿಗೆಗೆ ಶ್ರಮಿಸಿದವರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು. ಸ್ವಾಮೀಜಿಯವರ ೭೮ ನೇ ಜಯಂತ್ಯೋತ್ಸವ ಪುತ್ತೂರಿನಲ್ಲಿ ನಡೆಯುತ್ತಿರುವುದು ನಮಗೆಲ್ಲರಿಗೂ ಸಂಭ್ರಮ, ಸಂತಸದ ಸಂಗತಿಯಾಗಿದೆ. ಕಾರ್ಯಕ್ರಮವನ್ನು ಯಶಸ್ವಿ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮವಾರು ಸಮಿತಿಗಳನ್ನು ರಚಿಸಿ ಮುಂದಿನ ನಡಾವಳಿಗಳನ್ನು ತಯಾರಿಸಲಾಗುವುದು ಎಂದರು. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಹಾಗೂ ಕೆಂಪೇಗೌಡರವರ ಪ್ರತಿಮೆ ಅನಾವರಣ ಆಗಿರುವುದು ಸಮುದಾಯದ ಹಿರಿಮೆ ಆಗಿದೆ. ಇದು ಸ್ವಾತಂತ್ರ್ಯ ದೊರೆತು ೭೫ ವರ್ಷಗಳ ಬಳಿಕ ಆಗಿದೆ ಎಂಬುದು ಬೇರೆ ವಿಚಾರವಾದರೂ ನಾವೆಲ್ಲರೂ ಖುಷಿ ಪಡಬೇಕಾದ ಸಂಗತಿಯಾಗಿದೆ ಎಂದು ವಿಶ್ವನಾಥ ಗೌಡರವರು ಹೇಳಿದರು. ಸ್ವಾಗತ ಸಮಿತಿಯ ಕಾರ್ಯದರ್ಶಿ ನಾಗೇಶ್ ಕೆಡೆಂಜಿ ಪುತ್ತೂರು ಮಾತನಾಡಿ, ಸಮುದಾತದವರು ಒಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕು, ಸುಮಾರು ೧ ಲಕ್ಷದಷ್ಟು ಜನರು ಭಾಗವಹಿಸುವಂತಾಗಬೇಕು, ಪ್ರತಿ ಮನೆಯಿಂದಲೂ ಜನರು ಕಾರ್ಯಕ್ರಮಕ್ಕೆ ಬರಬೇಕು ಈ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದರು. ಸ್ವಾಗತ ಸಮಿತಿಯ ಸಂಚಾಲಕ ಕಿರಣ್ ಬುಡ್ಲೆಗುತ್ತು ಮಂಗಳೂರು ಮಾತನಾಡಿ, ಸ್ವಾಮೀಜಿಯವರ ೭೮ ನೇ ಜಯಂತ್ಯೋತ್ಸವ ಒಂದು ಒಕ್ಕಲಿಗ ಸಮ್ಮೇಳನದಂತೆ ಆಗಬೇಕು ಈ ನಿಟ್ಟಿನಲ್ಲಿ ಎಲ್ಲರೂ ಶ್ರಮ ವಹಿಸಬೇಕು ಎಂದರು. ಕಾರ್ಯಕ್ರಮ ನಿರೂಪಣೆ ಮಾಡಿದ ಶಿಕ್ಷಕ ವಿಶ್ವನಾಥ ಗೌಡರವರು ಈ ಸಂದರ್ಭದಲ್ಲಿ ಮಾತನಾಡಿ, ಇತಿಹಾಸ, ಪಠ್ಯಪುಸ್ತಕದಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಉಲ್ಲೇಖ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಯತ್ನಿಸಬೇಕು, ಕೆದಂಬಾಡಿ ರಾಮಯ್ಯ ಗೌಡರ ಬಗ್ಗೆ ನಮ್ಮ ಮುಂದಿನ ಜನಾಂಗಕ್ಕೆ ತಿಳಿಸುವ ಕೆಲಸ ಪಠ್ಯ ಪುಸ್ತಕದಿಂದ ಆಗಬೇಕು ಎಂದ ಅವರು ಇತಿಹಾಸದಲ್ಲಿರುವುದು ಬಹುತೇಕ ಸುಳ್ಳೇ ಆಗಿದೆ ಎನ್ನುವ ಮಾತನ್ನು ಕೂಡ ಈ ಸಂದರ್ಭದಲ್ಲಿ ಹೇಳಿದರು. ಸ್ವಾಮೀಜಿಯವರ ೭೮ ನೇ ಜಯಂತ್ಯೋತ್ಸವದ ನಿವೇದನಾ ನಿಮಂತ್ರಣ ಪತ್ರವನ್ನು ಈ ಸಂದರ್ಭದಲ್ಲಿ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ವೇದಿಕೆಯಲ್ಲಿ ೭೮ ನೇ ಜಯಂತ್ಯೋತ್ಸವದ ಕುಂಬ್ರ ವಲಯ ಉಸ್ತುವಾರಿ ಸತೀಶ್ ಪಾಂಬಾರು ಉಪಸ್ಥಿತರಿದ್ದರು. ಒಕ್ಕಲಿಗ ಗೌಡ ಒಳಮೊಗ್ರು ಗ್ರಾಮ ಸಮಿತಿ ಮಹಿಳಾ ಅಧ್ಯಕ್ಷೆ ಉಷಾ ನಾರಾಯಣ್ ಪ್ರಾರ್ಥಿಸಿದರು. ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮ ಗೌಡ ಇದ್ಯಪೆ ಸ್ವಾಗತಿಸಿದರು. ನಿವೃತ್ತ ಫಾರೆಸ್ಟರ್ ರಾಮಣ್ಣ ಗೌಡ ಬೊಳ್ಳಾಡಿ, ಒಳಮೊಗ್ರು ಗ್ರಾಮ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ನೀರ್ಪಾಡಿ, ಕಾರ್ಯದರ್ಶಿ ಶಿವರಾಮ ಗೌಡ ಬೊಳ್ಳಾಡಿ ಸಹಕರಿಸಿದ್ದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ನಾಗಪ್ಪ ಮಾಸ್ಟರ್ ಬೊಮ್ಮೆಟ್ಟಿ, ಸ್ವಾಗತ ಸಮಿತಿ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ರಾಮಣ್ಣ ಗೌಡ ಜ್ಯೋತಿನಿಲಯ, ಮೋಹನ್ ಕುಮಾರ್ ಬೊಳ್ಳಾಡಿ, ಯುವ ಒಕ್ಕಲಿಗ ಗೌಡ ಕುಂಬ್ರ ವಲಯ ಕಾರ್ಯದರ್ಶಿ ಸುಬ್ರಾಯ ಗೌಡ, ಕುಂಬ್ರ ವಲಯ ಒಕ್ಕೂಟದ ಅಧ್ಯಕ್ಷ ಲೋಕೇಶ್ ಚಾಕೋಟೆ, ಕುಂಬ್ರ ಸಿಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ರಾಮಯ್ಯ ಗೌಡ ಬೊಳ್ಳಾಡಿ, ರಾಘವ ಗೌಡ ಕೆರೆಮೂಲೆ, ಕೆದಂಬಾಡಿ ಗ್ರಾಪಂ ಸದಸ್ಯ ಕೃಷ್ಣ ಕುಮಾರ್ ಇದ್ಯಪೆ ಸಹಿತಿ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here