ಬೆಳಗಾವಿ: ವಿಧಾನ ಪರಿಷತ್ ಸಭಾಪತಿಯಾಗಿ ಹಿರಿಯ ರಾಜಕಾರಣಿ ಹಾಗೂ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೊರಟ್ಟಿಯವರ ಹೆಸರನ್ನು ಪರಿಷತ್ ಸದಸ್ಯರು ಪ್ರಸ್ಥಾಪಿಸಿದ್ದು ಬಳಿಕ ಅನುಮೋದನೆಯ ಮೂಲಕ ಘೋಷಣೆ ಮಾಡಲಾಯಿತು. ಈ ಮೂಲಕ ಹೊರಟ್ಟಿಯವರು 2ನೇ ಬಾರಿಗೆ ಸಭಾಪತಿ ಸ್ಥಾನವನ್ನು ಅಲಂಕರಿಸಿದ್ದಾರೆ.