ಹಾರಾಟದ ವೇಳೆ ವಿಮಾನದೊಳಗೆ ಹೊಡೆದಾಟ

0

ಥಾಯಿ ಸ್ಮೈಲ್‌ ಏರ್‌ವೇಸ್‌ನ ವಿಮಾನ ಬ್ಯಾಂಕಾಕ್‌ನಿಂದ ಕಲ್ಕತ್ತಾಗೆ ಹಾರಾಟ ನಡೆಸುತ್ತಿದ್ದ ವೇಳೆ ಪ್ರಯಾಣಿಕರಿಬ್ಬರ ನಡುವೆ ಹೊಡೆದಾಟ ನಡೆದ ಘಟನೆ ನಡೆದಿದೆ. ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದ ನಡೆದು ಬಳಿಕ ಕೈಕೈ ಮಿಲಾಯಿಸಿದ್ದು ವಿಮಾನ ಸಿಬ್ಬಂದಿ ಸಮಾಧಾನ ಪಡಿಸಲು ಯತ್ನಸಿದ್ದಾರೆ. ಹಾರಾಟದ ವೇಳೆ ವಿಮಾನದಲ್ಲಿ ನಡೆದ ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅಂದಹಾಗೆ ವಿಮಾನದಲ್ಲಿ ಹೊಡಿಬಡಿ ಮಾಡಿದ ಈ ಇಬ್ಬರು ಭಾರತೀಯರು. 

LEAVE A REPLY

Please enter your comment!
Please enter your name here