ಡಿ.31 ರಂದು ಪೆರಾಬೆ ಗ್ರಾಮ ಪರಾರಿಗುತ್ತುವಿನಲ್ಲಿ ಧಾರ್ಮಿಕ ಕಾರ್ಯಕ್ರಮ,ಕುಟುಂಬ ದೈವಗಳ ನೇಮೋತ್ಸವ

0

ಆಲಂಕಾರು: ಪೆರಾಬೆ ಗ್ರಾಮದ ಪರಾರಿಗುತ್ತುವಿನಲ್ಲಿ ಧಾರ್ಮಿಕ ಕಾರ್ಯಕ್ರಮ, ಕುಟುಂಬ ದೈವಗಳ ನೇಮೋತ್ಸವ  ಡಿ.31 ರಂದು ನಡೆಯಲಿದೆ. ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ದೇವರ ಪೂಜೆ, ಹರಿಸೇವೆ, ದೈವಂಕುಲು, ಮಹಿಷಂತ್ತಾಯ, ಕೊಡಮಣಿತ್ತಾಯ, ದೈವಗಳಿಗೆ ಕಲಶಪರ್ವ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಮದ್ಯಾಹ್ನ ನಂತರ ಶಿರಾಡಿ ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ರಾತ್ರಿ ಕುಟುಂಬ ದೈವಗಳ ಭಂಡಾರ ಹಿಡಿದು ನೇಮೋತ್ಸವ ಜರಗಲಿದೆ ಆ ಪ್ರಯುಕ್ತ ತಾವೆಲ್ಲರೂ ಅಗಮಿಸಿ ದೈವ ದೇವರ ಸಿರಿಮುಡಿ,ಗಂಧಪ್ರಸಾದ ಸ್ವೀಕರಿಸುವಂತೆ ಪರಾರಿಗುತ್ತು ಯಾಜಮಾನ ಜನಾರ್ಧನ ರೈ ಮತ್ತು ಕುಟುಂಬಸ್ಥರು ಹಾಗು ವ್ಯವಸ್ಥಾಪಕರಾದ ಸುನಂದ ರೈ ಮತ್ತು ಮಕ್ಕಳು ಹಾಗು ಶ್ರೀಮತಿ ಮತ್ತು ಸದಾಶಿವ ರೈ ಮತ್ತು ಮಕ್ಕಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here