ಹಳ್ಳಿಯ ಶಾಲೆಗಳು ಹೇಗಿರಬೇಕೆಂಬುದಕ್ಕೆ, ಪುಣ್ಚಪ್ಪಾಡಿ ಶಾಲೆ ಮಾದರಿ- ಎಸ್.ಅಂಗಾರ
ಪುತ್ತೂರು: ಹಳ್ಳಿ ಶಾಲೆಗಳು ಹೇಗಿರಬೇಕೆಂಬುದಕ್ಕೆ ಪುಣ್ಚಪ್ಫಾಡಿ ಶಾಲೆ ಮಾದರಿಯಾಗಿದೆ ಎಂದು ಮೀನುಗಾರಿಕಾ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಅವರು ದ. 31 ರಂದು ಪುಣ್ಚಪ್ಪಾಡಿ ಶಾಲಾ 95ನೇ ವಾರ್ಷಿಕ ಹಬ್ಬ ಪಂಚನವತಿ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಸಂಚಿಕೆ ಪುಣ್ಚಾಕ್ಷರಿ ಯನ್ನು ಬಿಡುಗಡೆಗೊಳಿಸಿ ಮಾತನಾಡಿ ಕರ್ನಾಟಕ ಸರ್ಕಾರ ಸರ್ಕಾರಿ ಶಾಲೆಗಳಿಗೆ ಬಹಳ ಒತ್ತು ನೀಡುತ್ತಿದೆ ಇದೀಗ ಮೂಲಭೂತ ಸೌಲಭ್ಯಗಳನ್ನು ಹಂಚುವ ಕೆಲಸಗಳಾಗುತ್ತಿದೆ. ಪುಣ್ಚಪ್ಪಾಡಿ ಶಾಲೆ ಹಳ್ಳಿಯಲ್ಲಿದ್ದರೂ ಬಹಳ ಚೊಕ್ಕವಾಗಿ ಶೈಕ್ಷಣಿಕ ಕೆಲಸಗಳು ನಡೆಯುತ್ತಿರುವುದಕ್ಕೆ ಇಲ್ಲಿನ ಚಟುವಟಿಕೆಗಳು ಸಾಕ್ಷಿ ಎಂದರು.
ಒಳ್ಲೆಯ ಶಿಕ್ಷಣ- ರಾಜೀವಿ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಸವಣೂರು ಗ್ರಾ.ಪಂ. ಅಧ್ಯಕ್ಷೆ ರಾಜೀವಿ ಶೆಟ್ಟಿ ಅವರು ಮಾತನಾಡಿ ಪುಣ್ಚಪ್ಪಾಡಿ ಶಾಲೆಯಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತಿದೆ ಎನ್ನುವುದನ್ನು ಇಲ್ಲಿನ ಚಟುವಟಿಕೆಯಿಂದಲೇ ಗಮನಿಸಬಹುದು ಎಂದರು.
ಪ್ರಯತ್ನ ಶ್ಲಾಘನೀಯ- ಸೀತಾರಾಮ ರೈ
ಶಾಲಾ ಧ್ವಜಾರೋಹಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಸವಣೂರು ವಿದ್ಯರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಯವರು ಮಾತನಾಡಿ ಈ ಶಾಲೆಯ ಶಿಕ್ಷಕರ ಪ್ರಯತ್ನ ನಿಜಕ್ಕೂ ಶ್ಲಾಗನೀಯ ಪುಣ್ಚಪ್ಪಾಡಿ ಶಾಲೆ ತನ್ನ ವಿಭಿನ್ನ ಚಟುವಟಿಕೆಗಳಿಂದ ಆಗಾಗ ಸುದ್ದಿ ಮಾಡುತ್ತಾ ಬಂದಿದೆ ಎಂದರು.
ಊರಿನವರ ಶಾಲೆ- ಕೃಷ್ಣಕುಮಾರ್ ರೈ
ಧ್ವಜಾರೋಹಣದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರಾದ ಪಿ ಡಿ ಕೃಷ್ಣ ಕುಮಾರ್ ರೈ ದೇವಸ್ಯರವರು ಊರಿನವರು ಶಾಲೆಯನ್ನು ನಮ್ಮ ಮನೆಯ ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು
ಹೆಚ್ಚಿನ ಕೆಲಸ ಮಾಡಿದೆ- ಸುಂದರ ಗೌಡ
ತಾಲೂಕು ದೈಹಿಕ ಶಿಕ್ಷಣ ಪರೀಕ್ಷಣಾಧಿಕಾರಿಯವರಾದ ಸುಂದರ ಗೌಡ ಮಾತನಾಡಿ ಪುಣ್ಚಪ್ಪಾಡಿ ಶಾಲೆ, ಖಾಸಗಿ ಶಾಲೆಗಿಂತ ಹೆಚ್ಚಿನ ಕೆಲಸವನ್ನು ಮಾಡಿದೆ ಎನ್ನುತ್ತಾ ಊರವರ ಶ್ರಮವನ್ನು ಶ್ಲಾಘಿಸಿದರು.
ಮಕ್ಕಳ ಹಸ್ತಪ್ರತಿ ಪುಣ್ಚಪದವನ್ನು ಸವಣೂರು ಗ್ರಾ.ಪಂ.ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆರವರು ಬಿಡುಗಡೆಗೊಳಿಸಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ರಾಕೇಶ್ ರೈ ಕೆಡೆಂಜಿ, ಗ್ರಾ.ಪಂ, ಸದಸ್ಯರುಗಳಾದ ಗಿರಿಶಂಕರ ಸುಲಾಯ ದೇವಸ್ಯ, ತಾರನಾಥ ಬೊಲಿಯಾಳ, ಭರತ್ ರೈ, ರಫೀಕ್ ಎಂ.ಎ, ಸವಣೂರು ಸಮೂಹ ಸಂಪನ್ಮೂಲ ವ್ಯಕ್ತಿ ಕುಶಾಲಪ್ಪ ಬಿರವರುಗಳು ಸಂದಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಅಧ್ಯಕ್ಷ ದಿನೇಶ್ ಮೆದು, ಸವಣೂರು ಗ್ರಾ.ಪಂ. ಸದಸ್ಯರುಗಳಾದ ಯಶೋದ ನೂಜಾಜೆ, ಜಯಶ್ರೀ ಕುಚ್ಚೆಜಾಲು, ಬಾಬು ಜರಿನಾರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕಟ್ಟತಾರು, ಸವಣೂರು ಗ್ರಾ.ಪಂ, ಅಭಿವೃದ್ಧಿ ಅಧಿಕಾರಿ ಮನ್ಮಥ, ಹಿರಿಯರಾದ ಗಂಗಾಧರ ರೈ ದೇವಸ್ಯ, ಕುಶಲ ಪಿ ರೈ ಪಟ್ಲ, ಜಿಲ್ಲಾ ಯುವ ಜನ ಒಕ್ಕುಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಕೃಷ್ಣ ರೈ ಪುಣ್ಚಪ್ಪಾಡಿ, ಶಾಲಾ ನಾಯಕಿ ಸಿಂಚನ ಮುಂತಾದವರು ಉಪಸ್ಥಿತರಿದ್ದರು.
ಎಸ್ ಡಿ ಎಂ ಸಿ ಅಧ್ಯಕ್ಷೆ ಗಾಯತ್ರಿ ಓಂತಿಮನೆ, ಉಪಾಧ್ಯಕ್ಷ ರಾಧಾಕೃಷ್ಣ ದೇವಸ್ಯ, ಸದಸ್ಯರುಗಳಾದ ಲಕ್ಷ್ಮಿ, ಸರಿತಾ,ಕುಸುಮಾ,ಕಾವೇರಿ,ಪ್ರದೀಪ ನೆಕ್ಕರೆ, ಸೋಮನಾಥ, ಯಮುನಾ, ಹೇಮಾವತಿ,ಪದ್ಮಾವತಿರವರುಗಳು ಅತಿಥಿಗಳನ್ನು ಗೌರವಿಸಿದರು.
ಶಾಲಾ ಮುಖ್ಯ ಶಿಕ್ಷಕಿ ರಶ್ಮಿತಾ ನರಿಮೊಗರುರವರು ಸ್ವಾಗತಿಸಿ ವರದಿವಾಚಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪದವೀಧರ ಶಿಕ್ಷಕಿ ಫ್ಲಾವಿಯ, ಅತಿಥಿ ಶಿಕ್ಷಕಿ ಚಂದ್ರಿಕಾ ಅಂಗನವಾಡಿ ಕಾರ್ಯಕರ್ತೆ ಶೇಸಮ್ಮ, ಗೌರವ ಶಿಕ್ಷಕಿ ತೃಪ್ತಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ನಂತರ ಅಂಗನವಾಡಿ ಪುಟಾಣಿಗಳಿಂದ ಶಾಲಾ ಮಕ್ಕಳಿಂದ ಹಿರಿಯ ವಿದ್ಯಾರ್ಥಿಗಳಿಂದ ಸತತ ನಾಲ್ಕು ಗಂಟೆಗಳ ಕಾಲ ಸಾಂಸ್ಕೃತಿ ಕಾರ್ಯಕ್ರಮನಡೆಯಿತು.
ಸಮಾರಂಭದ ವಿಶೇಷತೆಗಳು
ಸತತ ನಾಲ್ಕು ಗಂಟೆಗಳ ಕಾಲ ಮಕ್ಕಳ ಸಾಂಸ್ಕೃತಿಕ ಲಾಲಿತ್ಯ
ಆಕರ್ಷಕವಾದ ರಂಗಮಂಟಪ ಎಲ್ಲರ ಗಮನ ಸೆಳೆಯಿತು.
ಬೆಲ್ಗೊಡೆ ಹಾಗೂ ಗೂಡು ದೀಪಗಳಿಂದ ಶಾಲಾ ಅಂಗಳವನ್ನು ಅಲಂಕರಿಸಲಾಗಿತ್ತು.
ಶಾಲಾ ಚಟುವಟಿಕೆಗಳ ವಿಶೇಷ ಸಂಚಿಕೆ ಪುಣ್ಚಾಕ್ಷರಿ ಮಕ್ಕಳ ಹಸ್ತ ಪ್ರತಿ ಪುಣ್ಚಪದ ಎಲ್ಲರ ಗಮನ ಸೆಳೆಯಿತು.