ಪುತ್ತೂರು ತುಳು ಕೂಟದ ಸುವರ್ಣ ಸಂಭ್ರಮದ ಉದ್ಘಾಟನೆ, ತಾಲೂಕು ತುಳುವೆರೆ ಮೇಳೋ

0

 

ಪುತ್ತೂರು: ತುಳು ಕೂಟ ಪುತ್ತೂರು ಇದರ ಸುವರ್ಣ ಸಂಭ್ರಮದ ಉದ್ಘಾಟನೆ ಹಾಗೂ ತುಳುವೆರೆ ಮೇಳೋ-೨೦೨೩ ಕಾರ್ಯಕ್ರಮಗಳು ಜ.೭ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.


ಶಾಸಕ ಸಂಜೀವ ಮಠಂದೂರುರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಕಳಸೆಗೆ ಭತ್ತ ತುಂಬುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ತುಳುನಾಡಿನ ಆಚಾರ ವಿಚಾರಗಳನ್ನು ಪರಿಚಯಿಸುವ ತುಳು ಭಾಷೆಗೆ ತನ್ನದೇ ಆದ ಮಹತ್ವವನ್ನು ಹೊಂದಿದ್ದು, ತುಳು ಭಾಷೆಯನ್ನು ಸಂವಿಂಧಾನದ ೮ನೇ ಪರಿಚ್ಛೇದಲ್ಲಿ ಸೇರಿಸುವ ಎಲ್ಲಾ ಪ್ರಯತ್ನಗಳು ಮುಂದಿನ ದಿನಗಳಲ್ಲಿ ನಡೆಯಲಿವೆ ಎಂದು ಹೇಳಿದರು. ಒಂದು ಭಾಷೆ ಸಮಾಜದ ಜನಾಂಗ, ಸಂಸ್ಕೃತಿಯನ್ನು ಬೆಸುಗೆ ಮಾಡುವ ಮಹತ್ವವನ್ನು ಪಡೆದಿದೆ. ಈ ಪೈಕಿ ತುಳುವಿನ ಕುರಿತು ಇರುವ ಗುರುತಿಸುವಿಕೆ ಇಂದು ಬದಲಾವಣೆ ಆಗುವ ಸಂಗತಿ ಆಗಿದೆ. ತುಳು ಭಾಷೆಯ ಕುರಿತು ಜಗತ್ತಿಗೆ ತಿಳಿಸಲು ಇಂತಹಾ ಕಾರ್ಯಕ್ರಮ ಸಹಕಾರಿಯಾಗಿದೆ. ಈ ಮೂಲಕ ಇತರ ಭಾಷೆಯೊಂದಿಗೆ ತುಳು ಭಾಷೆಯನ್ನು ಪರಿಚಯಿಸುವ, ಉಳಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಶಾಸಕರು ಹೇಳಿದರು.

ತುಳು ಪುರಾತನ ಸಾಮಾಗ್ರಿಗಳ ಪ್ರದರ್ಶನ ಮಳಿಗೆಯನ್ನು ಉದ್ಘಾಟಿಸಿದ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ತುಳುನಾಡಿನ ಸೃಷ್ಟಿ ತುಳುಭಾಷೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ. ತುಳುನಾಡಿದ ಆಚರಣೆಗಳಾದ ನಾಗಾರಾಧನೆ, ಭೂತಾರಾಧನೆ, ಕಂಬಳ ಮುಂತಾದ ಕ್ರೀಡೆಗಳು ತುಳು ಸಂಸ್ಕೃತಿಯ ಒಂದು ಛಾಯೆಯಾಗಿ ಮೆಚ್ಚುಗೆಗೆ ಪಾತ್ರವಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆಯಬೇಕು ಎಂದರು.

ನಗರ ಸಭಾ ಸದಸ್ಯ ಪಿ.ಜಿ ಜಗನ್ನಿವಾಸ ರಾವ್ ಮಾತನಾಡಿ, ತುಳು ಭಾಷೆಯ ಬೇರೆ ಬೇರೆ ಸಮುದಾಯಗಳಲ್ಲಿ ವಿಭಿನ್ನತೆಯನ್ನು ಜೊಂದಿದೆ. ತುಳು ನಮ್ಮ ಭಾಷೆ. ಅದನ್ನು ಉಳಿಸಲು ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು ಎಂದರು.

ಕೋಟೆಕ್ಕಲ್ ಆರ್ಯವೈದ್ಯ ಶಾಲಾ ಆಯುರ್ವೇದ ತಜ್ಞ ಡಾ ಪ್ರದೀಪ್ ಕುಮಾರ್ ಮಾತನಾಡಿ, ತುಳುವರ ಆಚರಗಳಿಗೂ ಕೇರಳ ಇಲ್ಲಿಯ ಆಚರಣೆ ವ್ಯತ್ಯಾಸಗಳಲ್ಲಿ. ತುಳು ಭಾಷೆಯ ಉತ್ತಮ ರೀತಿಯ ಮುನ್ನೆಡೆಯಲಿ ಎಂದರು.

ತುಳುವೆರೆ ಮೇಳೋದ ಅಧ್ಯಕ್ಷರು, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಪುತ್ತೂರಿನಲ್ಲಿ ತುಳುಕೂಟದಂತಹ ಕಾರ್ಯಕ್ರಮದ ಮೂಲಕ ಸಂಘಟನೆ ಮಾಡಲಾಗಿದೆ. ತುಳು ಭಾಷೆಯಿಂದ ಎಲ್ಲರೂ ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಿ ಬಾಳುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ತುಳವೆರೆ ಮೇಳೊ ಸಮಿತಿ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಪ್ರತಿಯೊಂದು ಭಾಷೆಗೆ ಅದರದ್ದೇ ಆದ ಸಂಸ್ಕೃತಿ, ಸಂಸ್ಕಾರಗಳಿವೆ. ತುಳು ಭಾಷೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಇಂತಹಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತುಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರತಿಯೊಬ್ಬರೂ ಪ್ರಯತ್ನಿಸೋಣ ಎಂದರು.

ಸಂಪ್ಯ ಅಕ್ಷಯ ಕಾಲೇಜು ನಿರ್ದೇಶಕ ಜಯಂತ ನಡುಬೈಲು ಮಾತನಾಡಿ, ತುಳು ಭಾಷೆ ನಮ್ಮ ಹೆಮ್ಮೆಯ ಭಾಷೆ. ಉಳಿಸಲು ಎಲ್ಲರೂ ಒಟ್ಟಾಗಿ ಪ್ರಯತ್ನಿಸೋಣ ಎಂದರು.

ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಪ್ರೇಮಲತಾ ರಾವ್ ಮಾತನಾಡಿ, ತುಳು ಭಾಷೆಯನ್ನು ಪರಿಚ್ಚೇದಕ್ಕೆ ಹೋರಾಟ ನಡೆಸಲಾಗುತ್ತಿದೆ. ತುಳು ಭಾಷೆ ದ.ಕ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯ, ರಾಷ್ಟ್ರಮಟ್ಟದಲಿದ್ದು ೮ನೇ ಪರಿಚ್ಚೇದಕ್ಕೆ ಸೇರಿಸಬೇಕು.
ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ತುಳುವೆರೆ ಮೇಳೊ ಸಮಿತಿ ಕೋಶಾಧಿಕಾರಿ ರವಿಪ್ರಸಾದ್ ಬಿ.ವಿ., ಉಪಾಧ್ಯಕ್ಷೆ ಹೀರಾ ಉದಯ್, ಸಹಕಾರ್ಯದರ್ಶಿ ಉಲ್ಲಾಸ್ ಪೈ, ಸಂತೋಷ್ ಶೆಟ್ಟಿ, ನಯನಾ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ:
ಸಹಕರಿ ರತ್ನ ಪ್ರಶಸ್ತಿ ಪುರಸ್ಕೃತ ಸದಾಶಿವ ರೈ ದಂಬೆಕ್ಕಾನರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಮಿತಿ ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತುಳುವೆರೆ ಮೇಳೊ ಸಮಿತಿ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳು ನಡೆದವು.

LEAVE A REPLY

Please enter your comment!
Please enter your name here