ಪಳ್ಳತ್ತಾರು – ಕೂಂಕ್ಯ -ಅಮೈ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ

0

ಕಾಣಿಯೂರು: ಬೆಳಂದೂರು ಗ್ರಾಮದ ಪಳ್ಳತ್ತಾರು – ಕೂಂಕ್ಯ -‌ ಅಮೈ ರಸ್ತೆ ಅಭಿವೃದ್ಧಿಗೆ ರೂ.20ಲಕ್ಷ ಅನುದಾನದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಸವಣೂರು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ, ಗ್ರಾ.ಪಂ.ಉಪಾಧ್ಯಕ್ಷರಾದ ತೇಜಾಕ್ಷಿ ಕೊಡಂಗೆ, ಗ್ರಾ.ಪಂ.ಸದಸ್ಯರಾದ ತಾರಾ ಅನ್ಯಾಡಿ, ಗೀತಾ ಕುವೆತ್ತೋಡಿ, ಪ್ರವೀಣ್ ಕೆರೆನಾರು, ಜಯರಾಮ ಬೆಳಂದೂರು. ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ, ಸದಸ್ಯ ಹರೀಶ್ ಮುಂಡಾಲ, ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್ ಸುಲಾಯ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಬೆಳಂದೂರು ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ನಿರ್ಮಲ ಕೇಶವ ಗೌಡ, ಕಾರ್ಯದರ್ಶಿ ರಕ್ಷಿತ್ ಕೂಂಕ್ಯ, ಅನಿಲ್ ಕಂಡಿಗ , ಆನಂದ ಕೂಂಕ್ಯ, ಶ್ರೀಧರ್ ಕೊಯಕ್ಕುಡೆ, ಅಶೋಕ್ ಕೆಡೆಂಜಿ, ಸತೀಶ್ ಹೊಸೋಕ್ಲು, ಲೋಕೇಶ್ ಬಿ.ಎನ್, ಗ್ರಾ. ಪಂ. ಮಾಜಿ ಅಧ್ಯಕ್ಷ ನಝೀರ್ ದೇವಸ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here