ಬನ್ನೂರು ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷರಾಗಿ ತೋಮಸ್ ಫೆರ್ನಾಂಡೀಸ್ ಪುನಾರಾಯ್ಕೆ, ಕಾರ್ಯದರ್ಶಿಯಾಗಿ ಜೋಯ್ಸ್ ಡಿ’ಸೋಜ

0

ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್‌ನ ಪಾಲನಾ ಸಮಿತಿಗೆ ಮುಂದಿನ ಮೂರು ವರ್ಷಗಳ ಅವಧಿಗೆ ಆಯ್ಕೆ ಪ್ರಕ್ರಿಯೆಯು ಚರ್ಚ್ ಪ್ರಧಾನ ಧರ್ಮಗುರು ಹಾಗೂ ಚರ್ಚ್ ಪಾಲನಾ ಸಮಿತಿಯ ಅಧ್ಯಕ್ಷ  ವಂ|ಪ್ರಶಾಂತ್ ಫೆರ್ನಾಂಡೀಸ್‌ರವರ ನೇತೃತ್ವದಲ್ಲಿ ಜರಗಿತು. ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ|ಪೀಟರ್ ಪಾವ್ಲ್ ಸಲ್ದಾನ್ಹಾರವರು ಚರ್ಚ್‌ನ ನೂತನ ಪಾಲನಾ ಸಮಿತಿಯನ್ನು ಅನುಮೋದನೆ ಮಾಡಿರುತ್ತಾರೆ.

ಉಪಾಧ್ಯಕ್ಷರಾಗಿ ತೋಮಸ್ ಫೆರ್ನಾಂಡೀಸ್‌ರವರು ದ್ವಿತೀಯ ಅವಧಿಗೆ ಪುನಾರಾಯ್ಕೆಗೊಂಡಿದ್ದು, ಕಾರ್ಯದರ್ಶಿಯಾಗಿ ಜೋಯ್ಸ್ ಡಿ’ಸೋಜರವರು ಆಯ್ಕೆಯಾಗಿದ್ದಾರೆ. 21 ಆಯೋಗಗಳ ಸಂಚಾಲಕರಾಗಿ ಜೆರೋಮ್ ಪ್ರಕಾಶ್ ಪಾಯಿಸ್, ಚರ್ಚ್ ಆರ್ಥಿಕ ಸಮಿತಿಗೆ ಧರ್ಮಗುರು ಪ್ರಶಾಂತ್ ಫೆರ್ನಾಂಡೀಸ್, ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ ಅಲ್ಲದೆ ಸುದೀಪ್ ಕ್ಲೀಟಸ್ ವಾಸ್, ನೋಯಲ್ ಸೆರಾವೋರವರು ಆಯ್ಕೆಗೊಂಡಿರುತ್ತಾರೆ.

ಚರ್ಚ್ ಪಾಲನಾ ಸಮಿತಿಯಲ್ಲಿ ವಲಯ ಪ್ರತಿನಿಧಿಯಾಗಿ ಜೋನ್ ಪಾಯಿಸ್, ಸೈಂಟ್ ವಿನ್ಸೆಂಟ್ ದೇ ಪಾವ್ಲ್ ಸಭಾದ ಅಧ್ಯಕ್ಷ ವಾಲ್ಟರ್ ಪ್ರಶಾಂತ್ ರೆಬೆಲ್ಲೋ, ಐಸಿವೈಎಂ ಸಚೇತಕ ಅಂತೋನಿ ಮಸ್ಕರೇನ್ಹಸ್, ವೈಸಿಎಂ ಸಚೇತಕಿ ವೀಡಾ ಮರೀನಾ ಪಿಂಟೋ, ವಾಳೆ ಗುರಿಕಾರರಾದ ಪೆರ‍್ನೆ ವಾಳೆಯ ಗುರಿಕಾರರಾಗಿ ಹೆನ್ರಿ ವೇಗಸ್, ವಾಳೆ ಪ್ರತಿನಿಧಿಯಾಗಿ ಒಲಿವಿಯಾ ಫೆರ್ನಾಂಡೀಸ್, ಬನ್ನೂರು ವಾಳೆಯ ಗುರಿಕಾರರಾಗಿ ಮಾರ್ಗರೆಟ್ ಜೆಸಿಂತಾ ಡಿ’ಸೋಜ, ಪ್ರತಿನಿಧಿಯಾಗಿ ಜಾಸ್ಮಿನ್ ರೂಪ ಡಿ’ಸೋಜ ಹಾಗೂ ತೋಮಸ್ ಗೊನ್ಸಾಲ್ವಿಸ್, ನೆಲಪ್ಪಾಲ್ ವಾಳೆಯ ಗುರಿಕಾರರಾಗಿ ಜೋನ್ ನೊರೋನ್ಹಾ, ಪ್ರತಿನಿಧಿಯಾಗಿ ಸಜನಿ ಮಾರ್ಟಿಸ್, ಉರಮಾಲ್ ವಾಳೆಯ ಗುರಿಕಾರರಾಗಿ ಜೋನ್ ಪಾಯಿಸ್, ಪ್ರತಿನಿಧಿಯಾಗಿ ಗಿಲ್ಬರ್ಟ್ ಗೊನ್ಸಾಲ್ವಿಸ್ ಹಾಗೂ ಹೆಲೆನ್ ಫೆರ್ನಾಂಡೀಸ್, ಕೆಮ್ಮಾಯಿ ವಾಳೆಯ ಗುರಿಕಾರರಾಗಿ ಜ್ಯುಲಿಯಾನಾ ಕ್ಸೀಟಾ ಗೋವಿಯಸ್, ಪ್ರತಿನಿಧಿಗಳಾಗಿ ಲವೀನಾ ಫೆರ್ನಾಂಡೀಸ್ ಹಾಗೂ ತೋಮಸ್ ಫೆರ್ನಾಂಡೀಸ್, ಸೇಡಿಯಾಪು ವಾಳೆಯ ಗುರಿಕಾರರಾಗಿ ಲೂಯಿಸ್ ಡಿ’ಸೋಜ, ಪ್ರತಿನಿಧಿಯಾಗಿ ಗೀತಾ ಲೋಬೊ ಹಾಗೂ ರೊನಾಲ್ಡ್ ಮಸ್ಕರೇನ್ಹಸ್, ಬಾಲ ಯೇಸು ವಾಳೆ(ಬನ್ನೂರು)ಯ ಗುರಿಕಾರರಾಗಿ ವಿಲಿಯಂ ರಾಜೇಶ್ ಡಿ’ಸೋಜ, ಪ್ರತಿನಿಧಿಗಳಾಗಿ ಸಿಂತಿಯಾ ಡಿ’ಸೋಜ ಹಾಗೂ ನೋಯಲ್ ಸೆರಾವೋ, ಪಡೀಲು ವಾಳೆಯ ಗುರಿಕಾರರಾಗಿ ವೀಣಾ ಎಂ.ಮಸ್ಕರೇನ್ಹಸ್, ಪ್ರತಿನಿಧಿಯಾಗಿ ಲಿಲ್ಲಿ ಡಿ’ಸೋಜ ಹಾಗೂ ಸುದೀಪ್ ಕ್ಲೀಟಸ್ ವಾಸ್, ನಾಮ ನಿರ್ದೇಶಿತ ಸದಸ್ಯರಾಗಿ ಜೆರೋಮ್ ಪ್ರಕಾಶ್ ಪಾಯಿಸ್ ಹಾಗೂ ಜೋಯ್ಸ್ ಡಿ’ಸೋಜ, ಗೌರವ ಸದಸ್ಯರಾಗಿ ಪೆರ‍್ನೆ ಪಂಚಾಯತ್ ಅಧ್ಯಕ್ಷ ಸುನಿಲ್ ಪಿಂಟೋರವರು ಒಳಗೊಂಡಿದ್ದಾರೆ.

LEAVE A REPLY

Please enter your comment!
Please enter your name here