ರೋಗಿಗಳ ಸುರಕ್ಷತೆ, ಗುಣಮಟ್ಟದ ಸೇವೆಗಾಗಿ ಚೇತನಾ ಆಸ್ಪತ್ರೆಗೆ ಎನ್.ಎ.ಬಿ.ಹೆಚ್ ಪ್ರಮಾಣ ಪತ್ರ

0

  •  27 ವರ್ಷಗಳ ಸಾರ್ಥಕ ಸೇವೆಗೆ ಸಂದ ಗೌರವ
  •  ಚೇತನಾ-ರೋಗಿಗಳ ಪಾಲಿನ ಆರೋಗ್ಯ ಚೈತನ್ಯ

ಪುತ್ತೂರು: ಆರೋಗ್ಯವೇ ಭಾಗ್ಯ ಎಂಬ ನುಡಿಗಟ್ಟನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ 1996ರ ಜನವರಿ 26ರಂದು ಪುತ್ತೂರಿನಲ್ಲಿ ಪ್ರಾರಂಭಗೊಂಡ ಚೇತನಾ ಆಸ್ಪತ್ರೆಯಲ್ಲಿ ರೋಗಿಗಳ ಸುರಕ್ಷತಾ ಕ್ರಮ ಹಾಗೂ ಗುಣಮಟ್ಟದ ಸೇವೆಗಾಗಿ ಆಸ್ಪತ್ರೆಗೆ ಇದೀಗ ಪ್ರತಿಷ್ಟಿತ ಎನ್.ಎ.ಬಿ.ಎಚ್. ಪ್ರಮಾಣಪತ್ರ ಪತ್ರ ಲಭಿಸಿದೆ.

ಏನಿದು ಎನ್.ಎ.ಬಿ.ಎಚ್. ಪ್ರಮಾಣಪತ್ರ?: ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಆಂಡ್ ಹೆಲ್ತ್ ಕೇರ್ ಪ್ರೊವೈಡರ್ಸ್ (ಎನ್.ಎ.ಬಿ.ಎಚ್) ಆಸ್ಪತ್ರೆಯ ಆರೋಗ್ಯ ಸೇವೆಗಳನ್ನು ಗಮನಿಸಿಕೊಂಡು ನೀಡುವ ಪ್ರಮಾಣಪತ್ರವಾಗಿದೆ. ಪುತ್ತೂರಿನ ಚೇತನಾ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸಾ ಸೇವೆ ಹಾಗೂ ರೋಗಿಗಳ ಸುರಕ್ಷತೆಗೆ ಪೂರಕವಾಗಿ ಬೇಕಾಗಿರುವ ವ್ಯವಸ್ಥೆಗಳು ಇದೆ ಎನ್ನುವುದನ್ನು ಖಾತ್ರಿ ಪಡಿಸಿಕೊಂಡು ಈ ಪ್ರಮಾಣಪತ್ರವನ್ನು ನೀಡಲಾಗಿದೆ.

ಚೇತನಾ ಆಸ್ಪತ್ರೆಗೆ ಇದೀಗ 27ರ ಹರೆಯ. ಇಲ್ಲಿಗೆ ಬರುವ ರೋಗಿಗಳು ಗುಣಮುಖರಾಗಿ ಆರೋಗ್ಯ ಚೇತನವನ್ನು ಪಡೆದುಕೊಂಡು ಹೋಗಬೇಕೆಂಬ ಸದಾಶಯದೊಂದಿಗೆ ಡಾ. ಜೆ.ಸಿ. ಅಡಿಗ ಹಾಗೂ ಡಾ. ಶ್ರೀಕಾಂತ್ ರಾವ್ ಅವರ ಮುಂದಾಳತ್ವದಲ್ಲಿ ಪ್ರಾರಂಭಗೊಂಡ ಚೇತನಾ ಆಸ್ಪತ್ರೆ ಆ ಕಾಲದಲ್ಲೇ ಪುತ್ತೂರಿನ ಪರಿಸರದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿ ಸುತ್ತ ಹತ್ತೂರಿನ ರೋಗಿಗಳ ಪಾಲಿನ ಆಶಾಕಿರಣವಾಗಿ ಇಂದಿಗೂ ಪುತ್ತೂರು ಪರಿಸರದಲ್ಲಿ ಆರೋಗ್ಯ ಸೇವೆಗಳಲ್ಲಿ ಮುಂಚೂಣಿಯನ್ನು ಸಾಽಸಿ ಮುನ್ನಡೆಯುತ್ತಿದೆ. ಎಂದರೂ ತಪ್ಪಗಲಾರದು.

27 ವರ್ಷಗಳ ಹಿಂದೆಯೇ ಪುತ್ತೂರಿನಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಸ್ಥಾಪಿಸಿದ ಹೆಗ್ಗಳಿಕೆ ಚೇತನಾ ಆಸ್ಪತ್ರೆಗೆ ಸಲ್ಲುತ್ತದೆ. 5 ಬೆಡ್‌ಗಳನ್ನು ಹೊಂದಿದ್ದ ಐಸಿಯು ಘಟಕ, 2 ಬೆಡ್‌ಗಳ ಹೊಂದಿದ್ದ ಮಕ್ಕಳ ಐಸಿಯು ಘಟಕ, ನವಜಾತ ಶಿಶುಗಳ ಪಾಲನಾ ಘಟಕ, ಸೆಂಟರ್ ಆಕ್ಸಿಜನ್ ವ್ಯವಸ್ಥೆ, 24 ಗಂಟೆ ಕಾರ್ಯಾಚರಣೆ ಮಾಡುವ ಎಕ್ಸ್-ರೇ ಘಟಕ, ಪ್ರಯೋಗಾಲಯ, ಔಷಧಿ ವಿಭಾಗ, ರೋಗಿಗಳ ತುರ್ತು ಅನುಕೂಲಕ್ಕಾಗಿ ರಾತ್ರಿ ಪಾಳಿ ವೈದ್ಯರ ಸೇವೆ.. ಹೀಗೆ ಚೇತನಾ ಆಸ್ಪತ್ರೆ ಪ್ರಾರಂಭಿಸಿದ ಪ್ರಥಮಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದೀಗ ಎನ್.ಎ.ಬಿ.ಎಚ್. ಪ್ರಮಾಣಪತ್ರ ಪಡೆಯುವ ಮೂಲಕ, ತನ್ನ ಪ್ರಥಮಗಳ ತುರಾಯಿಗೆ ಇನ್ನೊಂದು ಗರಿ ಪೋಣಿಸಿಕೊಂಡಿದೆ.

ಈ ಕಾರಣದಿಂದಾಗಿಯೇ ಪುತ್ತೂರು ಮಾತ್ರವಲ್ಲದೇ ಸುಳ್ಯ, ವಿಟ್ಲ, ಈಶ್ವರಮಂಗಲ, ಕಡಬ, ಉಪ್ಪಿನಂಗಡಿ ಸೇರಿದಂತೆ ಸುತ್ತ ಹತ್ತೂರ ಭಾಗದ ಜನರ ಮನಸ್ಸಿನಲ್ಲಿ ಚೇತನಾ ಆಸ್ಪತ್ರೆಯ ಹೆಸರು ಅಚ್ಚಳಿಯದೇ ಉಳಿದಿದೆ.

ಚೇತನಾ ಅಸ್ಪತ್ರೆಯಲ್ಲಿ ಲಭ್ಯವಿರುವ ವಿಶೇಷ ಸೇವೆಗಳು: ಪುತ್ತೂರಿನ ಮಟ್ಟಿಗೆ ಹೇಳುವುದಾದಲ್ಲಿ, ಕಳೆದ 27 ವರ್ಷಗಳ ಹಿಂದೆ ಪ್ರಾರಂಭಗೊಂಡ ಚೇತನಾ ಆಸ್ಪತ್ರೆಯು ಈ ಭಾಗದ ಸಾರ್ವಜನಿಕರ ಉಪಯೋಗಕ್ಕಾಗಿ ಹಲವಾರು ವಿನೂತನ ಸೌಲಭ್ಯಗಳನ್ನು ಪರಿಚಯಿಸಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಇದರಲ್ಲಿ ಮುಖ್ಯವಾದವುಗಳನ್ನು ಉಲ್ಲೇಖಿಸುವುದಾದರೆ, 24 ಗಂಟೆ ಕಾರ್ಯಾಚರಿಸುವ ವೈದ್ಯಕೀಯ ಸೇವೆಗಳಲ್ಲಿ ಮುಖ್ಯವಾದವುಗಳೆಂದರೆ, ಥೈರೋಕೇರ್ ಡಯಾಗ್ನಾಸ್ಟಿಕ್ನ ಸಹಯೋಗದೊಂದಿಗೆ ಕಂಪ್ಯೂಟರೀಕೃತ ಲ್ಯಾಬೊರೇಟರಿ, ಎಕ್ಸ್-ರೇ 300 ಎಂ.ಎ., ಎಕ್ಸ್-ರೇ ಯುನಿಟ್ ಮತ್ತು ಸಿ ಆರ್ಮ್ ಡಿಜಿಟಲ್ ಎಕ್ಸ್-ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮತ್ತು ಕಲರ್ ಡಾಪ್ಲರ್, ಡಾಪ್ಲರ್ ಸ್ಕ್ಯಾನ್, ಫಾರ್ಮಸಿ ವಿಭಾಗ, ಅನುಭವಿ ತಜ್ಞ ವೈದ್ಯೆಯರ ಲಭ್ಯತೆಯೊಂದಿಗೆ ಸುಸಜ್ಜಿತ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗ, ಇಂಕ್ಯುಬೇಟರ್, ಫೋಟೋಥೆರಪಿ ಮತ್ತು ವೆಂಟಿಲೇಟರ್ ಸೌಲಭ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ತೀವ್ರ ನಿಗಾ ವಿಭಾಗ, ಹೃದಯ ಸ್ಕ್ಯಾನಿಂಗ್ಗೆ ಇಕೋಕಾರ್ಡಿಯಗ್ರಾಫಿ, ಅಸ್ತಮಾ ಚಿಕಿತ್ಸೆಗೆ ಸ್ಪೇರೋಮೀಟರ್, ವಿಡಿಯೋ ಎಂಡೋಸ್ಕೋಪಿ, ಕೋಲೊನೋಸ್ಕೋಪಿ, ಲ್ಯಾಪ್ರೋಸ್ಕೋಪಿಕ್ ಶಸಚಿಕಿತ್ಸೆ, ಮೂತ್ರ ಜನಕಾಂಗದ ಶಸಚಿಕಿತ್ಸೆಗಾಗಿ ಕ್ರಯೋಸರ್ಜರಿ, ಫೇಕೋ ಶಸ್ತ್ರಚಿಕಿತ್ಸೆ ಸೌಲಭ್ಯದೊಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ, ಇವೆಲ್ಲದರ ಜೊತೆಯಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ಆಂಬುಲೆನ್ಸ್ ಸೇವೆ ಹಾಗೂ ಇಲೆಕ್ಟ್ರೋಕನ್ವಲ್ಸಿವ್ ಥೆರಪಿ ಸೌಲಭ್ಯವೂ ಇಲ್ಲಿದೆ. ಇನ್ನು ಮಲ್ಟಿಪ್ಯಾರಾ ಮಾನಿಟರ್ ಸೌಲಭ್ಯದೊಂದಿಗೆ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿ.. ಹೀಗೆ ನಗರದ ಪ್ರಮುಖ ಭಾಗದಲ್ಲಿ ಸ್ಥಾಪನೆಗೊಂಡಿರುವ ಚೇತನಾ, ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು, ನುರಿತ ತಜ್ಞವೈದ್ಯರು, ರೋಗಿಗಳಿಗೆ ಆಪ್ತಪಾಲನೆಯನ್ನು ಒದಗಿಸುವ ಸಿಬ್ಬಂದಿವರ್ಗ, ಇವರೆಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿ ’ಚೇತನಾ’ 25 ಸಂವತ್ಸರಗಳ ಬಳಿಕವೂ ರೋಗಿಗಳ ಪಾಲಿಗೆ ಆಪ್ತಚೇತನಾಗಿ, ಆರೋಗ್ಯ ಚೇತರಿಕೆಯ ಹೆಗ್ಗುರುತಾಗಿ ಇಲ್ಲಿನವರ ಮನದಲ್ಲಿ ನೆಲೆಯಾಗಿದೆ.

ರೋಗಿಗಳಿಗೆ ವಿಮಾ ಸೌಲಭ್ಯಗಳು: ಗ್ರಾಮೀಣ ಭಾಗದ ರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿರುವ ಚೇತನಾ ಆಸ್ಪತ್ರೆಯಲ್ಲಿ ರೋಗಿಗಳ ಅನುಕೂಲಕ್ಕಾಗಿ ಹಲವಾರು ವಿಮಾ ಸೌಲಭ್ಯಗಳನ್ನು ಸ್ವೀಕರಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಯಶಸ್ವಿನಿ ಫಾರ್ಮರ್ ಹೆಲ್ತ್ ಕಾರ್ಡ್, ಸಂಪೂರ್ಣ ಸುರಕ್ಷಾ, ಚೈತನ್ಯ ವಿಮಾ ಯೋಜನೆ, ಟಿಟಿಕೆ ಹೆಲ್ತ್ ಕಾರ್ಡ್, ಮೆಡಿ ಅಸಿಸ್ಟ್, ಸ್ವಸ್ತಿಕ್ ಆಯಕ್ಸಿಡೆಂಟ್ ಕೇರ್, ಐಸಿಐಸಿಐ, ಯುನೈಟೆಡ್ ಹೆಲ್ತ್ ಕೇರ್, ಬಜಾಜ್ ಅಲಯನ್ಸ್, ಎಸ್.ಎಫ್. ಸ್ಟಾರ್ ಹೆಲ್ತ್ ಕಾರ್ಡ್, ಇ.ಎಸ್.ಐ. ಸೌಲಭ್ಯ, ಕೆ.ಎಸ್.ಆರ್.ಟಿ.ಸಿ. ರಾಜ್ಯ ಸರಕಾರಿ ನೌಕರರಿಗೆ ವಿಮಾ ಸೌಲಭ್ಯಗಳು ಶುಲ್ಕ ರಹಿತ ಚಿಕಿತ್ಸಾ ಸೇವೆಗಳಾಗಿ ಸಂಬಂಧಿತ ರೋಗಿಗಳಿಗೆ ಇಲ್ಲಿ ಲಭ್ಯವಿದೆ. ಇಷ್ಟು ಮಾತ್ರವಲ್ಲದೇ, ಕಾರ್ಪೊರೇಷನ್ ಬ್ಯಾಂಕ್ ಉದ್ಯೋಗಿಗಳಿಗೆ, ಐ.ಎನ್.ಜಿ. ವೈಶ್ಯ, ಟಾಟಾ ಎಐಜಿ, ಐಸಿಐಸಿಐ, ಎಎಂಪಿ, ಸಮ್ಮರ್, ಮೆಟ್ ಲೈಫ್, ರಿಲಾಯನ್ಸ್ ಹೆಲ್ತ್ ಕೇರ್, ಹೆಚ್.ಡಿ.ಎಫ್.ಸಿ., ಎನ್.ಆರ್.ಸಿ.ಸಿ.ಐ, ಮೆಸ್ಕಾಂ, ಕೆ.ಎಸ್.ಆರ್.ಟಿ.ಸಿ.ಯ ಉದ್ಯೋಗಿಗಳಿಗೆ ಮಾನ್ಯತೆ ಪಡೆದ ಆಸ್ಪತ್ರೆಯಾಗಿ ಚೇತನಾ ಗುರುತಿಸಿಕೊಂಡಿದೆ.‌

ಚೇತನಾ ಆಸ್ಪತ್ರೆಯಲ್ಲಿ ಸಂದರ್ಶನಕ್ಕೆ ಲಭ್ಯವಿರುವ ತಜ್ಞರು: ಡಾ. ಪೂರ್ಣ ಸಿ. ರಾವ್, (ಸ್ತ್ರೀ ರೋಗ ತಜ್ಞರು), ಡಾ. ಚಂದ್ರಶೇಖರ್ ರಾವ್, (ರೇಡಿಯಾಲಜಿಸ್ಟ್), ಡಾ. ಎ.ಕೆ.ರೈ., (ಸರ್ಜನ್) ಡಾ. ಪ್ರವೀಣ್ ಪಾರೆ (ಕಣ್ಣಿನ ತಜ್ಞರು), ಡಾ. ಗಣೇಶ್ ಪ್ರಸಾದ್, (ಮಾನಸಿಕ ಹಾಗೂ ನರರೋಗ ತಜ್ಞರು), ಡಾ. ಪುರುಷೋತ್ತಮ್ (ಹೃದ್ರೋಗ ತಜ್ಞರು), ಡಾ. ಎಂ.ಎನ್. ಭಟ್ (ಹೃದ್ರೋಗ ತಜ್ಞರು), ಡಾ. ನರಸಿಂಹ ಪೈ (ಹೃದ್ರೋಗ ತಜ್ಞರು), ಡಾ. ಅಜಿತ್ (ಎಲುಬು ತಜ್ಞರು) ಡಾ. ನಿಶ್ಚಿತ್ ಡಿಸೋಜಾ (ಮೂತ್ರಪಿಂಡ ಶಸ್ತ್ರ ಚಿಕಿತ್ಸಾ ತಜ್ಞರು) ಡಾ. ಪ್ರೇಮ್ ಆಳ್ವ (ಮಕ್ಕಳ ಹೃದ್ರೋಗ ತಜ್ಞರು) ಡಾ. ಅಶ್ವಿನ್ ಆಳ್ವ (ಗ್ಯಾಸ್ಟ್ರೋ ಸರ್ಜನ್)

ಚೇತನಾ ಆಸ್ಪತ್ರೆಗೆ ಚೈತನ್ಯ ತುಂಬಿದ ಗಣ್ಯರನ್ನು ಸ್ಮರಿಸಿಕೊಂಡ ಡಾ. ಜೆ.ಸಿ. ಅಡಿಗ: ಸಂಸ್ಥೆಯೊಂದು ಬೆಳೆದು ಹೆಸರು ಗಳಿಸಬೇಕಾದರೆ ಅಲ್ಲಿ ಲಭ್ಯವಿರುವ ಗುಣಮಟ್ಟದ ಸೇವೆಯ ಜೊತೆಜೊತೆಗೆ ಕೆಲವೊಂದು ಮಹನೀಯರು ವಿವಿಧ ಹಂತಗಳಲ್ಲಿ ಮಾಡಿರುವ ಸಹಾಯವೂ ಪ್ರಮುಖವಾಗಿರುತ್ತದೆ. ಈ ನಿಟ್ಟಿನಲ್ಲಿ ಚೇತನಾ ಆಸ್ಪತ್ರೆಯ ಪಾಲಿಗೂ ಸಹ ಹಲವಾರು ಮಹನೀಯರು ವಿವಿಧ ರೂಪಗಳಲ್ಲಿ ಸಹಕಾರವನ್ನು ನೀಡಿದ್ದಾರೆ. ಈ ಆಸ್ಪತ್ರೆ ಪ್ರಾರಂಭಗೊಳ್ಳುವುದಕ್ಕೂ ಮೊದಲು ಪುತ್ತೂರಿನಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ನಡೆಸಲು ಸಹಾಯ ಹಸ್ತ ಚಾಚಿದವರಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥರಾಗಿರುವ ಡಾ. ಯು.ಪಿ. ಶಿವಾನಂದ ಅವರನ್ನು ಡಾ. ಅಡಿಗ ಹಾಗೂ ಡಾ. ಶ್ರೀಕಾಂತ್ ರಾವ್ ಅವರು ಪ್ರಮುಖವಾಗಿ ನೆನಪಿಸಿಕೊಳ್ಳುತ್ತಾರೆ.

ಇದನ್ನು ಹೊರತಾಗಿಸಿ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ, ರಾಮಕೃಷ್ಣ, ದಿ. ನಾರಾಯಣ ರೈ, ದಿ. ಗೋಪಿಕೃಷ್ಣ ಶೆಣೈ,, ಜೋಸೆಫ್ ಡಿಸೋಜಾ, ಹೊಸೂರು ಸೋಮಯ್ಯ, ಚ. ಶಂಕರ್ ಭಟ್, ನಿವೃತ್ತ ಆರ್.ಎಫ್.ಒ. ಆಗಿರುವ ಮಂಜುನಾಥ್ ರೈ, ಸಣಗೋಲು ಅಚ್ಯುತ್ ಭಟ್, ಶ್ರೀನಿವಾಸ ಪಾಂಗಣ್ಣಾಯ, ಮೈಸೂರು ಶ್ರೀನಿವಾಸ ಕಲ್ಲೂರಾಯ ಮತ್ತು ಮಕ್ಕಳು, ಅಬ್ಬಾಸ್ ಪಂಜ, ಡಾ. ಕುಮಾರ್ ಮತ್ತು ಕುಟುಂಬಸ್ಥರು ಈಶ್ವರಮಂಗಲ, ವಿಪ್ರ ವಿಷ್ಣು ಕೇಕುಣ್ಣಾಯ ಕಡಂಬಳಿಕೆ, ಹೀಗೆ ಹತ್ತು ಹಲವಾರು ಜನರು ಚೇತನಾ ಆಸ್ಪತ್ರೆಯ ಸುದೀರ್ಘ ಬೆಳವಣಿಗೆಯಲ್ಲಿ ಸಹಭಾಗಿಗಳಾಗಿದ್ದಾರೆ ಎಂಬುದನ್ನು ಡಾ. ಜೆ.ಸಿ. ಅಡಿಗ ಅವರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.‌

ಚೇತನಾ ಆಸ್ಪತ್ರೆಯ ಮೈಲುಗಲ್ಲುಗಳು:

– ತಾಲೂಕಿನಲ್ಲೇ ಪ್ರಥಮ ಬಾರಿಗೆ ಸರ್ವಸುಸಜ್ಜಿತ ತುರ್ತು ಚಿಕಿತ್ಸಾ ಘಟಕವನ್ನು ಪ್ರಾರಂಭಿಸಿದ ಹೆಮ್ಮೆ
– ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಅಪರೇಷನ್ ಥಿಯೇಟರ್, ಪಿಸಿಯೋಥೆರಪಿ, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ, ಟ್ರೆಡ್ ಮಿಲ್ ಟೆಸ್ಟಿಂಗ್, ಹೃದಯ ಬಡಿತ ನಿಗಾ ಯಂತ್ರ, ಅಸ್ತಮಾ ಸಮಸ್ಯೆ ಪತ್ತೆ ಯಂತ್ರ ಸೈರಾಮೆಟ್ರಿ, ಕೃತಕ ಶ್ವಾಸೋಚ್ವಾಸ ಯಂತ್ರ (ವೆಂಟಿಲೇಟರ್)ಗಳನ್ನು ಪರಿಚಯಿಸಿದ ಹೆಗ್ಗಳಿಕೆ.
– ಹೆಸರಾಂತ ವೈದ್ಯರಾಗಿರುವ ಡಾ. ಸಂಜಯ್ ಪೈ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಕೃತಕ ಮಂಡಿ ಜೋಡಣೆ ಚಿಕಿತ್ಸೆಯನ್ನು ನಡೆಸಿದ ಹೆಗ್ಗಳಿಕೆ
– ಹೆರಿಗೆ ಮತ್ತು ಸೀರೋಗ ತeಯಾಗಿರುವ ಡಾ. ಪೂರ್ಣ ಸಿ. ರಾವ್ ಅವರ ನೇತೃತ್ವದಲ್ಲಿ ವರ್ಷಕ್ಕೆ ಸಾವಿರಕ್ಕೂ ಹೆಚ್ಚು ಹೆರಿಗೆ ನಡೆಸಿಕೊಟ್ಟ ಹೆಗ್ಗಳಿಕೆ ಚೇತನಾ ಆಸ್ಪತ್ರೆಯ ಹೆಗ್ಗಳಿಕೆ. ಪುತ್ತೂರಿನ ತಾಲೂಕು ಆಸ್ಪತ್ರೆಯ ಬಳಿಕ ಅತೀ ಹೆಚ್ಚು ಹೆರಿಗೆಯಾಗುವ ಆಸ್ಪತ್ರೆ ಚೇತನಾ ಆಗಿದೆ ಎಂಬ ಹೆಗ್ಗಳಿಕೆ.

ಇಂದು ಪ್ರಮಾಣಪತ್ರ ಸಮರ್ಪಣೆ

ಜ. 26ರಂದು ಪುತ್ತೂರು ಚೇತನಾ ಆಸ್ಪತ್ರೆಯ ವಾರ್ಷಿಕೋತ್ಸವ. ಅದೇ ದಿನ ಎನ್.ಎ.ಬಿ.ಎಚ್. ಪ್ರಮಾಣಪತ್ರ ಸಮರ್ಪಣೆ ಸಮಾರಂಭವೂ ನಡೆಯಲಿದೆ. ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ ಅವರು ಆಸ್ಪತ್ರೆಯ ಡಾ. ಜೆ.ಸಿ. ಅಡಿಗ ಅವರಿಗೆ ಪ್ರಮಾಣ ಪತ್ರ ಹಸ್ತಾಂತರಿಸಲಿದ್ದಾರೆ. ಈ ಸಮಾರಂಭದ ಮುಖ್ಯಅತಿಥಿಗಳಾಗಿ ಜಿ.ಎಲ್. ಆಚಾರ್ಯ ಜ್ಯುವೆಲ್ಲ್ಸ್‌ನ ಮ್ಹಾಲಕ ಬಲರಾಮ ಆಚಾರ್ಯ, ಸುದ್ದಿ ಸಮೂಹ ಸಂಸ್ಥೆಗ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ಪುತ್ತೂರು ವರ್ತಕರ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ ಉಪಸ್ಥಿತರಿರುವರು. ಇದೇ ಸಂದರ್ಭ ಆಸ್ಪತ್ರೆ ನಿರ್ಮಾಣ ಸಂದರ್ಭ ನೆರವು ನೀಡಿದ ದಾನಿಗಳು ಮತ್ತು ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ಸೇವೆ ನೀಡುತ್ತಿರುವ ಹಿರಿಯ ಸಿಬ್ಬಂದಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here