ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ವಾರ್ಷಿಕ ನೇಮೋತ್ಸವ ಯಶಸ್ವಿ ಸಂಪನ್ನ

0

ಚಿತ್ರ: ನವೀನ್ ರೈ ಪಂಜಳ

ಪುತ್ತೂರು: ಸರಿಸುಮಾರು 382 ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.25ರಂದು ಮಣ್ಣಾಪು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆದಿದ್ದು, ಸಾವಿರಾರು ಭಕ್ತರ ಆಗಮಿಸುವಿಕೆಯಿಂದ ನೇಮೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ನೇಮೋತ್ಸವದ ದಿನದಂದು ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತಮಾನದವರೆಗೆ ಅರ್ಧ ಏಕಾಹ ಭಜನೆ, ರಾತ್ರಿ ಕೊರಗಜ್ಜ ದೈವದ ಭಂಡಾರ ತೆಗೆಯುವುದು ಹಾಗೂ ಶ್ರೀ ಕೊರಗಜ್ಜ ದೈವಕ್ಕೆ ಎಣ್ಣೆ ಕೊಡುವುದು, ಶ್ರೀ ಕೊರಗಜ್ಜ ದೈವದ ನೇಮೋತ್ಸವ ಶ್ರದ್ಧಾಭಕ್ತಿಯಿಂದ ವಿಜ್ರಂಭಣೆಯಿಂದ ನಡೆಯಿತು.

ಜ.23 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ಜ.24 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದೇವರ ಅರ್ಚಕರ ನೇತೃತ್ವದಲ್ಲಿ ಜರಗಿತು. ಶ್ರೀ ಕೊರಗಜ್ಜ ಭಕ್ತರಿಂದ ಮಣ್ಣಾಪು ಅಜ್ಜನಿಗೆ ಬೆಳ್ಳಿ ಮುಟ್ಟಾಳೆ ಸಮರ್ಪಣೆಯೂ ಈ ಸಂದರ್ಭದಲ್ಲಿ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆದಿದ್ದು ಸುಮಾರು 3 ಸಾವಿರಕ್ಕೂ ಮಿಕ್ಕಿ ಭಕ್ತರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು.

ಭಾಗವಹಿಸಿದ ಭಜನಾ ಮಂಡಳಿಗಳು:

ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ, ಮೊಟ್ಟೆತ್ತಡ್ಕ ಮಿಷನ್‌ಮೂಲೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಭಜನಾ ಮಂಡಳಿ, ಮರಾಠಿ ಯುವ ವೇದಿಕೆ ಭಜನಾ ತಂಡ, ಶ್ರೀ ವಜ್ರಮಾತಾ ಮಹಿಳಾ ಭಜನಾ ಮಂಡಳಿ, ಕರಿಕ್ಕಳ ತೋಟಮಜಲು ಸ್ವಾಮಿ ಕೊರಗಜ್ಜ ಭಕ್ತ ವೃಂದ ಭಜನಾ ಮಂಡಳಿ, ಮೊಗರು ಮಹಾವಿಷ್ಣು ಭಜನಾ ಮಂಡಳಿ, ದೇವಸ್ಯ ಶ್ರೀಹರಿ ಭಜನಾ ಮಂಡಳಿ, ಬಳ್ಪ ಧರ್ಮಶಾಸ್ತಾವು ಕುಣಿತ ಭಜನಾ ತಂಡದ ಸದಸ್ಯರಿಂದ ಭಜನೆ ಕಾರ್ಯಕ್ರಮ ಹಾಗೂ ಕುಣಿತ ಭಜನೆ ಭಕ್ತರ ಮನಸೂರೈಗೈದಿತು.

ಸನ್ಮಾನ/ಅಭಿನಂದನೆ:

ಕಾರ್ಯಕ್ರಮದಲ್ಲಿ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ದೈವ ನರ್ತಕರಾದ ಹರೀಶ್ ಕೇಪು ವಿಟ್ಲ, ಸಾಹಿತಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಹಿರಿಯ ನ್ಯಾಯವಾದಿ ರತ್ನಾಕರ್ ರೈ ಮೋರ್ಲ ಮುಂಬಯಿ, ಶ್ರೀ ಕ್ಷೇತ್ರಕ್ಕೆ ಶಾಶ್ವತ ದ್ವಾರ ನಿರ್ಮಾಣ ಮಾಡಿಕೊಟ್ಟ ಪಂಜಳ ಜೈ ಶ್ರೀ ರಾಮ್ ಗೆಳೆಯರ ಬಳಗದ ಪರವಾಗಿ ತಂಡದ ಹಿರಿಯರಾದ ಚೆನ್ನಪ್ಪ ಗೌಡ, ಮಣ್ಣಾಪುದ ಮಣ್ಣಸಿರಿ ಧ್ವನಿಸುರುಳಿ ತಂಡದ ಪೈಕಿ ಹಾಡನ್ನು ಹಾಡಿದ ಲಾವಣ್ಯ, ಸಾಹಿತ್ಯ ರಚಿಸಿದ ಪ್ರಶಾಂತ್, ಛಾಯಾಗ್ರಾಹಣ ಮಾಡಿದ ಗೌತಮ್‌ರವರುಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರಕ್ಕೆ ಲೈಟಿಂಗ್ಸ್ ಒದಗಿಸಿಕೊಟ್ಟ ಸಹ್ಯಾದ್ರಿ ಲೈಟಿಂಗ್ಸ್ ಆಂಡ್ ಸೌಂಡ್ಸ್ ಇದರ ಮಾಲಕ ಭವಿತ್ ಶಿಬರ, ಕಾರ್ಯಕ್ರಮ ನಿರೂಪಣೆ ಮಾಡಿದ ಪುರುಷೋತ್ತಮ್ ಬೆಳ್ಳಾರೆರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಕುಂಡ ಮಣ್ಣಾಪು, ಅರ್ಚಕರಾದ ಅಣ್ಣು ಮಣ್ಣಾಪು, ರವಿ ಕೆ.ಮಣ್ಣಾಪು, ಮಧ್ಯಸ್ಥ ಗಣೇಶ್ ಪೂಜಾರಿ ಕೆಮ್ಮಿಂಜೆ, ಅಧ್ಯಕ್ಷ ವಿಶ್ವನಾಥ ಮಣ್ಣಾಪು, ಕಾರ್ಯದರ್ಶಿ ದಿನೇಶ್ ಕೆಮ್ಮಿಂಜೆ, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ, ಕೋಶಾಧಿಕಾರಿ ಗುರುವ ಮಣ್ಣಾಪು, ಗೌರವ ಸಲಹೆಗಾರರಾದ ಗಂಗಾಧರ ಮಣ್ಣಾಪು ಹಾಗೂ ವಿಶ್ವನಾಥ ನಾಯ್ಕ್ ಅಮ್ಮುಂಜ, ಸದಸ್ಯರುಗಳಾದ ಸತೀಶ ಕೆ.ಮಣ್ಣಾಪು, ಯಶವಂತ ಪೆರಾಜೆ, ಪ್ರವೀಣ ಎಸ್.ಮಣ್ಣಾಪು, ಸುಶೀಲ ಮಣ್ಣಾಪು, ದೇವಕಿ ಮಣ್ಣಾಪು, ಯಮುನಾ ಮಣ್ಣಾಪು, ಬಾಬು ಮಣ್ಣಾಪು, ಲಕ್ಷ್ಮೀ ಮಣ್ಣಾಪು, ನಾರಾಯಣ ಮಣ್ಣಾಪು, ಚಣ್ಣು ಮಣ್ಣಾಪು, ಜಾನಕಿ ಮಣ್ಣಾಪುರವರು ವಿವಿಧ ರೀತಿಯಲ್ಲಿ ಸಹಕರಿಸಿದರು.

ದೈವಸಂಕಲ್ಪದೊಂದಿಗೆ ಕಾರ್ಯಗಳು ಯಶಸ್ವಿ…

ಮಣ್ಣಾಪು ಶ್ರೀ ಕ್ಷೇತ್ರಕ್ಕೆ 382 ವರ್ಷಗಳ ಸುದೀರ್ಘ ಇತಿಹಾಸವಿದೆ. ಈ ಕ್ಷೇತ್ರದ ಮೂಲ ಕುತ್ತಾರ್‌ಪದವು ಆಗಿದ್ದು, ಸಂಪ್ರದಾಯ ಪ್ರಕಾರ ಕೊರಗಜ್ಜನ ಕಟ್ಟೆಯನ್ನು ಸಿಮೆಂಟ್ ಬಳಸದೆ ಕೆಂಪು ಕಲ್ಲು ಮತ್ತು ಲಾವಾ ಮರದ ತೊಗಟೆ ರಸಮಿಶ್ರಿತ ಮಣ್ಣು ಹಾಗೂ ಬೆಲ್ಲ ಸೇರಿಸಿ ನಿರ್ಮಾಣ ಮಾಡಲಾಗಿದೆ. ಈ ಭಾಗದಲ್ಲಿ ನಡೆಯುವ ನೇಮೋತ್ಸವ, ಸಂಕ್ರಮಣ ಅಗೇಲು ಸೇವೆ ಇತ್ಯಾದಿ ಧಾರ್ಮಿಕ ಕಾರ್ಯಗಳು ದೈವಸಂಕಲ್ಪದೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ. ವರ್ಷಕ್ಕಿಂತ ವರ್ಷ ಶ್ರೀ ಕ್ಷೇತ್ರಕ್ಕೆ ಹರಿದು ಬರುವ ಭಕ್ತಸಾಗರದ ಸಂಖ್ಯೆ ಹೆಚ್ಚುತ್ತಲೇ ಇದೆ. ಶ್ರೀ ಕ್ಷೇತ್ರದಲ್ಲಿ ವರ್ಷಕ್ಕೆ ಒಂದೇ ನೇಮ ಆಗುತ್ತಿದ್ದು, ಹರಕೆಯ ನೇಮಗಳು ನಡೆಯುತ್ತಿರುತ್ತದೆ. ಪ್ರಸ್ತುತ ವಿದ್ಯಾಮಾನದಲ್ಲಿ ಕೊರಗಜ್ಜನ ಹೆಸರಿನಲ್ಲಿ ಅಲ್ಲಲ್ಲಿ ವ್ಯಾಪಾರೀಕರಣ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ. ಸಣ್ಣ ಸಣ್ಣ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಯುವ ಸಮೂಹದಿಂದ ಜೈ ಶ್ರೀರಾಂ ಗೆಳೆಯರ ಬಳಗವು ಶ್ರೀ ಕ್ಷೇತ್ರಕ್ಕೆ ಶಾಶ್ವತ ದ್ವಾರ ನಿರ್ಮಿಸುವ ಮೂಲಕ ಅವರಲ್ಲಿನ ಹೃದಯವಂತಿಕೆಯನ್ನು ಶ್ಲಾಘಿಸಬೇಕಾದ್ದೇ.

-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಶ್ರೀ ಕ್ಷೇತ್ರ ಮಣ್ಣಾಪು

ಶಾಶ್ವತ ದ್ವಾರ ಲೋಕಾರ್ಪಣೆ…

ಪಂಜಳ ಜೈ ಶ್ರೀರಾಮ್ ಗೆಳೆಯರ ಬಳಗದಿಂದ ಶ್ರೀ ಕ್ಷೇತ್ರದಲ್ಲಿ ಶಾಶ್ವತ ದ್ವಾರವನ್ನು ನಿರ್ಮಾಣ ಮಾಡಲಾಗಿದ್ದು, ಇದರ ಲೋಕಾರ್ಪಣೆಯನ್ನು ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ತೆಂಗಿನಕಾಯಿ ಒಡೆಯುವ ಮೂಲಕ ಹಾಗೂ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಲೋಕಾರ್ಪಣೆಗೈಯ್ದರು. ಈ ಸಂದರ್ಭದಲ್ಲಿ ಪಂಜಳ ಜೈ ಶ್ರೀರಾಂ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಮಣ್ಣಪುದ ಮಣ್ಣಸಿರಿ ಬಿಡುಗಡೆ..

ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಬಗ್ಗೆ ಮೂರನೇ ಧ್ವನಿಸುರುಳಿ ‘ಮಣ್ಣಾಪುದ ಮಣ್ಣಸಿರಿ’ ಎಂಬ ಆಲ್ಬಂ ಅನ್ನು ಶ್ರೀ ಕ್ಷೇತ್ರ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಬಿಡುಗಡೆಗೊಳಿಸಿದರು. ತುಳುನಾಡ ಕ್ರಿಯೇಷನ್ಸ್‌ನಲ್ಲಿ ಮೂಡಿಬಂದ ಈ ಧ್ವನಿಸುರುಳಿಯಲ್ಲಿ ಪ್ರಶಾಂತ್ ಪುತ್ತೂರು ಸಾಹಿತ್ಯ, ರವಿಚಂದ್ರ ನಾಯಕ್ ಉದಯಗಿರಿ ಹಾಗೂ ಜಯರಾಂ ಗೌಡ ಬೊಳ್ಳಗುಡ್ಡೆ ನಿರ್ಮಾಣ, ಲಾವಣ್ಯ ಕುಲಾಲ್‌ರವರ ಕಂಠಸಿರಿ, ಗೌತಮ್‌ರವರ ಛಾಯಾಗ್ರಾಹಣ, ಲಿಖಿತ್ ಪುತ್ತೂರು ಸಂಕಲನವನ್ನು ಮಾಡಿರುತ್ತಾರೆ.

LEAVE A REPLY

Please enter your comment!
Please enter your name here