ತನ್ನ ಬದ್ಧತೆಯನ್ನು ಪಕ್ಷಕ್ಕೆ ತೋರಿಸಿದಾಗ ಸಂಘಟನೆ ನಿಮ್ಮನ್ನು ಬೆಳೆಸುತ್ತದೆ- ಬಿಜೆಪಿ ವಿವಿಧ ಪ್ರಕೋಷ್ಠಗಳ ಕಾರ್ಯಾಗಾರದಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಸರಕಾರದಿಂದ ಸಿಗುವ ಸವಲತ್ತು, ವ್ಯವಸ್ಥೆಗಳ ಕುರಿತು ಜನರಿಗೆ ಸಹಾಯ ಮಾಡಲು ಪ್ರಕೋಷ್ಠ ಆರಂಭವಾಯಿತು. ಇಂತಹ ಸಂದರ್ಭದಲ್ಲಿ ತನ್ನ ಬದ್ಧತೆಯನ್ನು ಪಕ್ಷಕ್ಕೆ ತೋರಿಸಿದಾಗ ಆ ಸಂಘಟನೆ ನಿಮ್ಮನ್ನು ಬೆಳೆಸುತ್ತದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.


ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮಾ.5ರಂದು ನಡೆದ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ವಿವಿಧ ಪ್ರಕೋಷ್ಠಗಳ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ರಕೋಷ್ಠಗಳ ಜವಾಬ್ದಾರಿಯುತ ಸ್ಥಾನ ಮಾನಕ್ಕೆ ಪೂರಕವಾಗಿ ಬಹಳಷ್ಟು ಮಂದಿ ಮತದಾರರು ಇದ್ದಾರೆ. ಅವರಿಗೆ ಸರಕಾರಿ ಸೌಲಭ್ಯದ ಮಾಹಿತಿ ನೀಡುವ ಮೂಲಕ ಪ್ರಕೋಷ್ಠಕ್ಕೆ ನ್ಯಾಯ ಸಿಗಬಹುದು. ಅದರ ಜೊತೆಗೆ ನೀವು ಕೂಡಾ ಬೆಳೆಯಬಹುದು. ಯಾರ್‍ಯಾರು ಪ್ರಕೋಷ್ಟದ ಸಂಚಾಲಕ, ಸಹಸಂಚಾಲಕರಾಗಿದ್ದಿರೋ ಅವರೆಲ್ಲ ತಮ್ಮ ಜವಾಬ್ದಾರಿಗೆ ಚ್ಯುತಿ ಬಾರದಂತೆ ಕೆಲಸ ಮಾಡಿ ಎಂದರು. ಪ್ರಕೋಷ್ಠಕ್ಕೆ ಬಂದ ಮೇಲೆ ಪಕ್ಷದ ಎಲ್ಲಾ ವಿಚಾರ ತಿಳಿದು ಕೊಳ್ಳಬೇಕು. ಆಗ ಒಳ್ಳೆಯ ಸ್ವಯಂ ಸೇವಕ, ಪಕ್ಷದ ನಾಯಕ ಆಗಲು ಸಾಧ್ಯ ಎಂದರು.

ಕಾರ್ಯಾಗಾರವನ್ನು ಉದ್ಘಾಟಿಸಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಪ್ರಕೋಷ್ಠದ ಜವಾಬ್ದಾರಿ ವಹಿಸಿಕೊಂಡವರು ಕೇವಲ ಸಭೆಗೆ ಮಾತ್ರ ಸೀಮಿತವಾಗದೆ ಪಕ್ಷದ ಮಾಹಿತಿಯನ್ನು ತಿಳಿಸುವ ಕೆಲಸ ಆಗಬೇಕು. ಎಲ್ಲರು ಉತ್ತಮ ಸೇವಕರಾಗಿ ಮುಂದೆ ನಾಯಕರಾಗಬೇಕೆಂದು ಹೇಳಿದರು.

ಸರಕಾರಿ ಯೋಜನೆ ಮಾಹಿತಿ ತಳಮಟ್ಟಕ್ಕೆ ಸಿಗುವಂತೆ ಮಾಡಿ:
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ ಅವರು ಮಾತನಾಡಿ ಸಂಘಟನೆ ಬಲಿಷ್ಠವಾಗಬೇಕಾದರೆ ಪ್ರಕೋಷ್ಠದ ಸಮಿತಿಗಳು ಗಟ್ಟಿಯಾಗಬೇಕು. ಫಲಾನುಭವಿಗಳನ್ನು ಗುರುತಿಸಿ ಆತನಿಗೆ ಸರಕಾರಿ ಯೋಜನೆ ಮಾಹಿತಿ ನೀಡಬೇಕು. ತಳಮಟ್ಟಕ್ಕೆ ಎಲ್ಲಾ ಮಾಹಿತಿ ಸಿಗುವಂತೆ ಮಾಡಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಪಕ್ಷದ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿಕೊಂಡು ಸರಕಾರದ ಯೋಜನೆಗಳ ಮಾಹಿತಿಯನ್ನು ತಿಳಿಸುವ ಕೆಲಸಕ್ಕೆ ಎಲ್ಲರು ಕಾರ್ಯಪ್ರವೃತರಾಗಬೇಕೆಂದರು. ಬಿಜೆಪಿ ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹರಿಪ್ರಸಾದ್ ಯಾದವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಹಾಶಕ್ತಿ ಕೇಂದ್ರದ ಮುಕುಂದ ಬಜತ್ತೂರು, ಸುನಿಲ್ ದಡ್ಡು, ರಮೇಶ್ ಭಟ್, ರವೀಂದ್ರ ಭಂಡಾರಿ, ಅರುಣ್ ವಿಟ್ಲ, ಹರೀಶ್ ಬಿಜತ್ರೆ, ತಿಲಕ್ ರೈ ಕುತ್ಯಾಡಿ ಅತಿಥಿಗಳನ್ನು ಗೌರವಿಸಿದರು. ಯಶ್ವಿನಿ ಶಾಸ್ತ್ರಿ ಪ್ರಾರ್ಥಿಸಿದರು. ಮಾದ್ಯಮ ಪ್ರಮುಖ್ ತಿಲಕ್ ರೈ ಕುತ್ಯಾಡಿ ವಂದಿಸಿದರು. ಅಭಿಷೇಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here