ಸವಣೂರು : ನವಜೀವನ,ಒಕ್ಕೂಟ ಸದಸ್ಯರ ಕ್ರೀಡಾಕೂಟ,ಪ್ರೇರಣಾ ಶಿಬಿರದ ಆಮಂತ್ರಣ ಬಿಡುಗಡೆ

0

ಸವಣೂರು :ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ,ಶ್ರೀ.ಕ್ಷೇ.ಧ.ಗ್ರಾ.ಯೋ ಕಡಬ ತಾಲೂಕು,ನವಜೀವನ ಸಮಿತಿ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಸವಣೂರು ವಲಯ ಇದರ ಆಶ್ರಯದಲ್ಲಿ ಫೆ.5 ರಂದು ಸವಣೂರಿನ ಪ್ರಿಯಕಾರಿಣಿ ಸಭಾಭವನದಲ್ಲಿ ನಡೆಯಲಿರುವ ನವಜೀವನ, ಒಕ್ಕೂಟ ಸದಸ್ಯರ ಕ್ರೀಡಾಕೂಟ, ಪ್ರೇರಣಾ ಶಿಬಿರದ ಆಮಂತ್ರಣ ಬಿಡುಗಡೆ ಸವಣೂರು ಯುವ ಸಭಾಭವನದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯದ ಅಧ್ಯಕ್ಷ ಮಹೇಶ್ ಕೆ.ಸವಣೂರು, ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ,ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್‌ ರಝಾಕ್ ,ಭರತ್‌ರೈ ,ಬಾಬು ಎನ್.,ಅಭಿವೃದ್ದಿ ಅಧಿಕಾರಿ ಮನ್ಮಥ ಎ.,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಗ್ರಾ.ಯೋ.ಯ ಸವಣೂರು ವಲಯದ ಅಧ್ಯಕ್ಷ ರಾಮಚಂದ್ರ ಗೌಡ ಇಡ್ಯಡ್ಕ, ಜನಜಾಗೃತಿ ವೇದಿಕೆಯ ಸದಸ್ಯರಾದ ನಾರಾಯಣಗೌಡ ಪೂವ, ಲೋಕನಾಥ ವಜ್ರಗಿರಿ, ವೇಣುಗೋಪಾಲ ಕಳುವಾಜೆ,ಪ್ರಮೋದ್ ರೈ ನೂಜಾಜೆ,ಸವಣೂರು ವಲಯ ಮೇಲ್ವಿಚಾರಕಿ ಹರ್ಷಕುಮಾರಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here