ಕೆಐಸಿ ಆರ್ಟ್ಸ್ ಫೆಸ್ಟಿವಲ್ -2023 ಗೆ ಸಂಭ್ರಮದ ತೆರೆ

0

ಅಲ್ಲಾಹನ ಪ್ರೀತಿ ಇರುವವನಿಗೆ ಯಾರನ್ನೂ ದ್ವೇಷಿಸಲು ಸಾಧ್ಯವಿಲ್ಲ: ಕೀಚೇರಿ ಉಸ್ತಾದ್

ಪುತ್ತೂರು:ನಾವು ಭೂಮಿ ಮೇಲಿರುವ ಸಕಲ ಜೀವಿಗಳನ್ನು ಪ್ರೀತಿಸುವ ಮನಸ್ಸುಳ್ಳವರಾಗಬೇಕು, ಅಲ್ಲಾಹನ ಮೇಲೆ ಪ್ರೀತಿ ಇರುವ ಯಾವುದೇ ವ್ಯಕ್ತಿಗೆ ಯಾರನ್ನೂ ದ್ವೇಷಿಸಲು ಸಾಧ್ಯವೇ ಇಲ್ಲ ಎಂದು ಖ್ಯಾತ ಸುನ್ನಿ ವಿದ್ವಾಂಸ ಅಬ್ದುಲ್ ಗಫೂರ್ ಮೌಲವಿ ಕೀಚೇರಿ ಹೇಳಿದರು.

ಅವರು ಕುಂಬ್ರ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿಯಲ್ಲಿ ಫೆ.1 ಮತ್ತು 2 ರಂದು ಕೆಐಸಿ ವಿದ್ಯಾರ್ಥಿಗಳು ಆಯೋಜಿಸಿದ ಆರ್ಟ್ಸ್ ಫೆಸ್ಟಿವಲ್ 2023 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು. ಇಸ್ಲಾಂ ಎಲ್ಲರನ್ನೂ ಪ್ರೀತಿಸುವಂತೆ ಸೂಚಿಸಿದೆ, ಯಾರನ್ನು ದ್ವೇಷಿಸುವ ಮನೋಭಾವ ನಿಮ್ಮಲ್ಲಿದ್ದರೆ ನೀವು ಅಲ್ಲಾಹನಿಂದ ದೂರವಾಗಿದ್ದೀರಿ ಎಂದು ಭಾವಿಸಬೇಕು. ಜಾತಿ, ಮತ, ಧರ್ಮಗಳ ವಿಚಾರವನ್ನು ಬದಿಗಿಟ್ಟು ನಾವು ಪರಸ್ಪರ ಸಹೋದರರಂತೆ ಬಾಳಬೇಕು ಎಂಬುದು ಇಸ್ಲಾಮಿನ ಅಶಯವಾಗಿದ್ದು ಅದನ್ನು ಪಾಲಿಸುವುದು ಪ್ರತೀಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ ಎಂದು ಹೇಳಿದರು. ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸಬೇಕು, ಕ್ಷುಲ್ಲಕ ಕಾರಣಕ್ಕೆ ನಾವು ಪರಸ್ಪರ ದೂರವಾಗಬಾರದು. ಕುಟುಂಬ ಸಂಬಂಧವನ್ನು ಒಡೆದು ಹಾಕುವವನಿಗೆ ವಿನಾಶ ಕಾದಿದೆ ಎಂದು ಎಚ್ಚರಿಸಿದರು.

ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಐಐಎಸ್ ಅಧಿಕಾರಿ ಶಾಹಿದ್ ತಿರುವಳ್ಳೂರ್ ಸಹಿತ ವಿವಿಧ ಕ್ಷೇತ್ರಗಳ ಸಾಧಕರು ವಿಧ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಇಸ್ಮಾಯಿಲ್ ಯಮಾನಿ, ಅಬ್ಬಾಸ್ ದಾರಿಮಿ, ಇಸ್ಮಾಯಿಲ್ ಮದನಿ,ಅಝ್‌ಮತುಲ್ಲಾ ಹುದವಿ, ಯಾಕೂಬ್ ದಾರಿಮಿ, ಹಬೀಬ್ ತಂಙಳ್ ಮುಕ್ವೆ, ಜಂಶೀರ್ ವಾಫಿ, ರಾಝಿಕ್ ಹುದವಿ, ಅಬ್ದುಲ್ ನಾಸಿರ್ ಕೌಸರಿ, ಅನಸ್ ವಾಫಿ, ಅಬೂಬಕ್ಕರ್ ಹಾಜಿ ಮಂಗಳ, ಅಬ್ದುಲ್‌ಕಾದರ್ ಬಾಯಂಬಾಡಿ, ಅಬ್ದುಲ್ ಹಮೀದ್ ಹಾಜಿ ಸುಳ್ಯ, ನೂರ್ ಮುಹಮ್ಮದ್ ನೀರ್ಕಜೆ, ನಿಝಾಂ ಅರಾಂಡ, ಇಬ್ರಾಹಿಂ ಕೊಡಾಜೆ, ಮಮ್ಮಾಲಿ ಹಾಜಿ ಬೆಳ್ಳಾರೆ, ಅಬ್ದುಲ್ ರಹಿಮಾನ್ ಸಂಕೇಷ್, ಹಸೈನಾರ್ ಹಾಜಿ, ಅಹ್ಮದ್ ಹಾಜಿ ಸುಳ್ಯ, ಅಹ್ಮದ್ ಹಾಜಿ ಪಾರೆ, ಬಾತಿಷಾ ಪಾಟ್ರಕೋಡಿ, ಫಾರೂಕ್ ಎಲ್.ಟಿ,ಅಬ್ದುಲ್ ಕಾದರ್ ಕೂರ್ನಡ್ಕ, ಫಾರೂಕ್ ಸಂಟ್ಯಾರ್, ಎಸ್.ಪಿ.ಟಿ ಮುಹಮ್ಮದ್ ಹಾಜಿ ಕೂಟತಾನ, ಸಾಬು ಹಾಜಿ ಕುಂಬ್ರ, ಸಿದ್ದೀಕ್ ಕೂಡುರಸ್ತೆ, ಬಶೀರ್ ಬೆಳ್ಳಾರೆ, ಎಲ್.ಟಿ ಅಬ್ದುಲ್ ರಝಾಕ್ ಹಾಹಿ, ಅಬ್ದುಲ್ ರಹಿಮಾನ್ ಅಝಾದ್, ಫಾರೂಕ್ ಮಗಿರೆ, ಎಸ್.ಪಿ ಬಶೀರ್, ಬಶೀರ್ ಕೌಡಿಚ್ಚಾರ್‌ಮುಂತಾದವರು ಭಾಗವಹಿಸಿದರು. ಅನೀಸ್ ಕೌಸರಿ ಸ್ವಾಗತಿಸಿದರು. ವ್ವಸ್ಥಾಪಕರಾದ ಅಬ್ದುಲ್‌ಸತ್ತಾರ್ ಕೌಸರಿ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here