ಫೆ.26: ಪುತ್ತೂರಿನಲ್ಲಿ ವಿದ್ಯಾವಂತ ದಿವ್ಯಾಂಗ ಚೇತನರ ಉದ್ಯೋಗ ಮೇಳ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಅರ್ಹ ವಿದ್ಯಾವಂತ ದಿವ್ಯಾಂಗ ಚೇತನರ ಉದ್ಯೋಗ ಮೇಳ 2023 ಫೆ. 26ರಂದು ಬೆಳಿಗ್ಗೆ 9.30ರಿಂದ ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನಲ್ಲಿ ನಡೆಯಲಿದೆ.

ಜಿಲ್ಲೆಯ ಅರ್ಹ ವಿದ್ಯಾವಂತ ದಿವ್ಯಾಂಗ ಚೇತನ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಸ್ಥಳೀಯ ಸಂಸ್ಥೆಗಳು ಹಾಗೂ ಕಂಪೆನಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಲಾಗಿದೆ.

ಶಾಸಕ ಸಂಜೀವ ಮಠಂದೂರು ಶಿಬಿರ ಉದ್ಘಾಟಿಸುವರು. ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ರೋಟರಿ ಕ್ಲಬ್ ಅಧ್ಯಕ್ಷ ಉಮಾನಾಥ್ ಪಿ.ಬಿ., ಕಾರ್ಯದರ್ಶಿ ಡಾ. ಶ್ರೀಪ್ರಕಾಶ್, ಯುವಜನಸೇವಾ ನಿರ್ದೇಶಕ ಪ್ರೇಮಾನಂದ್, ರೋಟರಿ ಯುವ ಅಧ್ಯಕ್ಷೆ ರಾಜೇಶ್ವರಿ, ಕಾರ್ಯದರ್ಶಿ ಅಶ್ವಿನಿ ಮುಳಿಯ, ಸರ್ವಮಂಗಳ ಟ್ರಸ್ಟ್‌ನ ಮ್ಯಾನೇಜಿಂಗ್ ಕೋ-ಟ್ರಸ್ಟಿ ಮುತ್ತುರಾಜ್, ರುಡ್‌ಸೆಟ್ ನಿರ್ದೇಶಕ ಸುರೇಶ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಎಚ್ಚರಪ್ಪ ಬಡಿಗೇರ, ರೋಟರ‍್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ., ರೋಟರಿ ಗವರ್ನರ್ ಪ್ರಕಾಶ್ ಕಾರಂತ್, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅತಿಥಿಯಾಗಿರುವರು.

ಪುತ್ತೂರು ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ ಅಧ್ಯಕ್ಷತೆ ವಹಿಸುವರು. ಡಿಆರ್‌ಆರ್ ನಿಖಿಲ್, ರೋಟರ‍್ಯಾಕ್ಟ್ ಕಾರ್ಯದರ್ಶಿ ಮಹೇಶ್‌ಚಂದ್ರ, ಪುತ್ತೂರು ದಿವ್ಯಾಂಗಜನ್ಸ್ ಫೌಂಡೇಶನ್‌ನ ಸ್ಥಾಪಕ, ರೋಟರ‍್ಯಾಕ್ಟ್ ಜಿಲ್ಲಾ ದಿವ್ಯಾಂಗ ಚೇತನರ ಕಲ್ಯಾಣ ನಿರ್ದೇಶಕ ಪಿ.ವಿ. ಸುಬ್ರಮಣಿ ಉಪಸ್ಥಿತರಿರುವರು.

ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ನೇತೃತ್ವದಲ್ಲಿ ಪುತ್ತೂರು ರೋಟರಿ ಕ್ಲಬ್, ರೋಟರಿ ಕ್ಲಬ್ ಯುವ, ರೋಟರ‍್ಯಾಕ್ಟ್ ಜಿಲ್ಲೆ 3181, ಪುತ್ತೂರು ದಿವ್ಯಾಂಗಜನ್ಸ್ ಫೌಂಡೇಶನ್, ಮಂಗಳೂರು ಸರ್ವಮಂಗಳ ಟ್ರಸ್ಟ್, ಉಜಿರೆ ರುಡ್ ಸೆಟ್ ಸಂಸ್ಥೆ, ಮಂಗಳೂರು ಉದ್ಯೋಗ ವಿನಿಮಯ ಕೇಂದ್ರ, ವಿವಿಧ ಇಲಾಖೆ, ಸ್ಥಳೀಯ ಸಂಘ- ಸಂಸ್ಥೆಗಳ ಸಹಕಾರದಲ್ಲಿ ಉದ್ಯೋಗ ಮೇಳ ಆಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here