ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ ಚಾಂಪಿಯನ್ಸ್

0

ಪುತ್ತೂರು: 5 ವರ್ಷದಿಂದ 15 ವರ್ಷದವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಸ್ತರಗಳಲ್ಲಿ ನಡೆಸಲ್ಪಡುವ ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ವಿದ್ಯಾಮಾತಾ ಅಕಾಡೆಮಿಯ 10 ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆಯನ್ನು ಮಾಡುವ ಮುಖಾಂತರ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡು ಚಾಂಪಿಯನ್ಸ್ ಎನಿಸಿಕೊಂಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ 5 ವರ್ಷದಿಂದ 15 ವರ್ಷದ ವರೆಗಿನ ವಿದ್ಯಾರ್ಥಿಗಳಿಗೆ ಏಕಾಗ್ರತೆ, ವೇಗ ಮತ್ತು ನಿಖರತೆಯಿಂದ ಜ್ಞಾಪಕ ಶಕ್ತಿಯ ಮೂಲಕ ಲೆಕ್ಕ ಮಾಡುವ, ಒಂದೇ ಸಾಲಿನಲ್ಲಿ ಉತ್ತರಿಸುವ ಕಲೆಯನ್ನು ಕರಗತಗೊಳಿಸುವ ಅಬಾಕಸ್ ತರಗತಿಗಳನ್ನು ಶನಿವಾರ ಮತ್ತು ಭಾನುವಾರ ರಾತ್ರಿ 7.30 ಯಿಂದ 8:30 ವರೆಗೆ ಆನ್‌ಲೈನ್ ಮುಖಾಂತರ ನೀಡಲಾಗುತ್ತಿದೆ. ಅದರ ಜೊತೆಗೆ ವೇದಿಕ ಗಣಿತ, ಮಾನಸಿಕ ಸಾಮರ್ಥ್ಯ ತರಗತಿಗಳನ್ನು ನಡೆಸಲಾಗುತ್ತಿದೆ. ಇದರ ಪ್ರಯೋಜನವನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಅಲ್ಲದೇ ಮುಂಬೈ ಸೇರಿದಂತೆ ಬೇರೆ ಊರುಗಳಲ್ಲಿ ನೆಲೆಸಿರುವವರು ದುಬೈ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿ ನೆಲೆಸಿರುವರು ಪಡೆದುಕೊಳ್ಳುತ್ತಿದ್ದಾರೆ. ಈ ತರಗತಿಯು ಆನ್‌ಲೈನ್‌ನಲ್ಲೇ ನಡೆಸುತ್ತಿದ್ದರು. ನೇರವಾಗಿ ವಿದ್ಯಾರ್ಥಿಗಳ ಜೊತೆ ತರಬೇತುದಾರರು ಸಂವಹನ ನಡೆಸಿಕೊಂಡು ತರಗತಿಯನ್ನು ನಡೆಸುವುದರಿಂದ ನೇರ ತರಗತಿಗಳಷ್ಟೇ ಅಚ್ಚುಕಟ್ಟಾಗಿ ನಡೆಯುತ್ತಿದೆ.

ರಾಷ್ಟ್ರಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ, ಜನಾರ್ದನ ಗೌಡ ಹಾಗೂ ಮಲ್ಲಿಕಾ ಜೆ. ಗೌಡ. ಆಳಂತಡ್ಕ ಪೆರ್ಗೇರಿ ದಂಪತಿಯ ಪುತ್ರ ಪ್ರಖ್ಯಾತ್ ಎ.ಜೆ (5ನೇ ತರಗತಿ, ಪ್ರಿಯದರ್ಶಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಬೆಟ್ಟಂಪಾಡಿ), ಪ್ರಶಾಂತ್ ರೈ ಬೋಳಂತೂರು ಗುತ್ತು ಹಾಗೂ ವಾಣಿಶ್ರೀ ರೈ ದೇರ್ಲ ದಂಪತಿಯ ಪುತ್ರನಾದ ಅನಿಕೇತ್ ರೈ (4ನೇ ತರಗತಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ), ಸಂದೀಪ್ ಶೆಟ್ಟಿ ಹಾಗೂ ಶ್ವೇತಾ ಎಸ್ ಶೆಟ್ಟಿ ಲಂಡನ್ (ಯು.ಕೆ ) ದಂಪತಿ ಪುತ್ರ ಅಥರ್ವ್ ಶೆಟ್ಟಿ (3ನೇ ತರಗತಿ ಮಾರ್ಗರೇಟ್ ಪ್ರೈಮರಿ ಸ್ಕೂಲ್ ರಿಚ್ ಮಂಡ್ ಇಂಗ್ಲೆಂಡ್), ವಾದಿರಾಜ ಕೆ.ಎಸ್ ಹಾಗೂ ಶ್ರೀವಿದ್ಯಾ ಕೊಂಚಾಡಿ ದೇರೆಬೈಲ್ ದಂಪತಿ ಪುತ್ರಿ ಸಂಸ್ಕೃತಿ ವಿ (5ನೇ ತರಗತಿ ಲೂರ್ಧ್ ಸೆಂಟ್ರಲ್ ಸ್ಕೂಲ್ ಮಂಗಳೂರು), ರಾಜೇಶ್ ಬಂಗ ಹಾಗೂ ಸೌಮ್ಯ ಆರ್ ಬಂಗ ಬೀರೂರು ಬಂಟ್ವಾಳ ದಂಪತಿ ಪುತ್ರ ಮೋಕ್ಷಿತ್ (3ನೇ ತರಗತಿ ವಿಶ್ವಮಂಗಲ ಹೈಸ್ಕೂಲ್ ಕೊಣಾಜೆ), ಉದಯ್ ರೈ ಬೊಟ್ಯಾಡಿ ಗುತ್ತು ಹಾಗೂ ಸುಚೇತಾ ಯು ರೈ ಸರ್ವೆ ದಂಪತಿ ಪುತ್ರಿಧೃತಿ ಯು ರೈ (8ನೇ ತರಗತಿ ಸಾಂದೀಪನಿ ಸ್ಕೂಲ್ ನರಿಮೊಗರು), ನವೀನ್ ಕುಮಾರ್ ಶೆಟ್ಟಿ ಹಾಗೂ ಜಲಜಾಕ್ಷಿ ಶೆಟ್ಟಿ ಇಚ್ಲಂಗೋಡು ಕಾಸರಗೋಡು ದಂಪತಿ ಪುತ್ರಿ ಕೃತಿ ಶೆಟ್ಟಿ (3ನೇ ತರಗತಿ ಶ್ರೀರಾಮ ಸ್ಕೂಲ್ ಕುಬಣೂರು), ರಾಮಚಂದ್ರ ಶೆಟ್ಟಿ ಹಾಗೂ ರಾಧಿಕಾ ಆರ್ ಶೆಟ್ಟಿ ನಾರ್ಲಾ ತಲಪಾಡಿ ದಂಪತಿ ಪುತ್ರ ನಿಶಾನ್ ಶೆಟ್ಟಿ (3ನೇ ತರಗತಿ ಕಾರ್ಮೆಲ್ ಪ್ರೈಮರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕೋಟೆಕಾರ್), ಗುರುಸ್ಮರಣ್ ಕೆದಿಲಾಯ ಎಂ ಹಾಗೂ ದೀಪಾಶ್ರೀ ಹೊಸಪಾಳ್ಯ ಕುಂಬಳಗೋಡು ಬೆಂಗಳೂರು ದಂಪತಿ ಪುತ್ರಿ ಸನ್ನಿಧಿ ಜಿ (4ನೇ ತರಗತಿ ತಟ್ಟವಾ ಸ್ಕೂಲ್ ಬೆಂಗಳೂರು), ಸುದರ್ಶನ್ ಹಾಗೂ ಸುಚಿತ್ರಾ ಪುತ್ತೂರು ದಂಪತಿ ಪುತ್ರಿ ಅವಂತಿ ಶರ್ಮಾ (8ನೇ ತರಗತಿ ಸರಕಾರಿ ಪ್ರೌಢ ಶಾಲೆ ಕೊಂಬೆಟ್ಟು). ಸಾಧನೆ ಮಾಡಿದರು.

ವಿದ್ಯಾಮಾತಾ ಅಕಾಡೆಮಿಯ ಸಹ ನಿರ್ದೇಶಕಿ ರಮ್ಯಾ ಭಾಗ್ಯೇಶ್ ರೈರವರು ಅಬಾಕಸ್, ವೇದಿಕ ಗಣಿತ, ಮಾನಸಿಕ ಸಾಮರ್ಥ್ಯ ತರಗತಿಗಳನ್ನು ಆನ್ಲೈನ್ ಮುಖಾಂತರ ನಡೆಸುತ್ತಿದ್ದು, ವಿದ್ಯಾಮಾತಾ ಅಕಾಡೆಮಿಯು IASವರೆಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಕೂಡಾ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಭಾರತೀಯ ಸೇನೆ, ಪೊಲೀಸ್, ಅರಣ್ಯ ಇಲಾಖೆ ವಿವಿಧ ನೇಮಕಾತಿಗಳಲ್ಲಿ, ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿ ಅಧಿಕಾರಿಗಳಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಮುಂದಿನ ಬ್ಯಾಚ್ ಬರುವ ತಿಂಗಳಿನಿಂದ ಪ್ರಾರಂಭವಾಗಲಿದ್ದು, ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here