ಮಂಗಳೂರಿನಲ್ಲಿ ಆಳವಾದ ಬಾವಿಗಿಳಿದು ಚಿರತೆ ರಕ್ಷಣೆ ಮಾಡಿದ ಪುತ್ತೂರಿನ ಸೊಸೆ ಡಾ.ಮೆಘನಾ !

0

ಪುತ್ತೂರು: ಮಂಗಳೂರು ಸಮೀಪ ಇಡ್ಡೋಡಿಯಲ್ಲಿ ಆಳವಾದ ಬಾವಿಗೆ ಬಿದ್ದ ಚಿರತೆಯನ್ನು ಪುತ್ತೂರಿನ ಸೊಸೆ ಪಶುವೈದ್ಯೆ ಡಾ. ಮೇಘನಾ ಎಂಬುವವರು ರಕ್ಷಣೆ ಮಾಡಿದ್ದಾರೆ. ಇವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ ಅವರ ಸೊಸೆಯಾಗಿದ್ದಾರೆ.

ಹಾರಾಡಿ ನಿವಾಸಿಯಾಗಿರುವ ಶೇಖರ್ ನಾರಾವಿ ಅವರ ಪುತ್ರ ಡಾ.ಯಶಸ್ವಿ ನಾರಾವಿ ಅವರ ಪತ್ನಿ ಪಶುವೈದ್ಯೆ ಡಾ.ಮೇಘನಾ ಅವರು ಯಾವುದೇ ಅಂಜಿಕೆಯಿಲ್ಲದೆ ಬೋನ್‌ ಒಳಗೆ ಡಾ. ಮೇಘನಾ ಬಾವಿಗೆ ಇಳಿದಿದ್ದಾರೆ. ನಂತರ ಅರಿವಳಿಕೆ ಇಂಜೆಕ್ಷನ್ ನೀಡಿ ಚಿರತೆಯನ್ನು ಪ್ರಜ್ಞೆ ತಪ್ಪಿಸಿ ಸೇಫಾಗಿ ಚಿರತೆ ಜೊತೆ ಮೇಲೆ ಬಂದಿದ್ದಾರೆ. ಇವರ ಸಾಧನೆಗೆ ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 1 ವರ್ಷದ ಪ್ರಾಯದ ಚಿರತೆ ಬಾವಿಯೊಳಗೆ ಬಿದ್ದಿದ್ದು, ಅರಣ್ಯ ಇಲಾಖೆ ಮೇಲೆತ್ತಲು ವಿಫಲವಾಗಿತ್ತು.

LEAVE A REPLY

Please enter your comment!
Please enter your name here