ನೆಲ್ಯಾಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ-ಗೋಳಿತ್ತಟ್ಟು ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಕಲಿಕಾ ಹಬ್ಬದ ಪ್ರಯುಕ್ತ’ ಊರು ಸುತ್ತೋಣ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದರ ಅಂಗವಾಗಿ ಶಾಂತಿನಗರ ಶಾಲಾ ವ್ಯಾಪ್ತಿಯ ಇಂಟರ್‌ಲಾಕ್ ತಯಾರಿಕಾ ಕಾರ್ಖಾನೆ, ಸಿಮೆಂಟ್ ಇಟ್ಟಿಗೆ ತಯಾರಿಕಾ ಕೇಂದ್ರ, ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಳೆತಟ್ಟೆ ತಯಾರಿಕಾ ಘಟಕ, ಕೋಳಿ ಸಾಕಾಣಿಕೆ ಕೇಂದ್ರ, ಸ್ಥಳೀಯ ಕೃಷಿ ಪ್ರದೇಶಗಳಿಗೆ ಶಾಲೆಯ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕರೆದೊಯ್ಯಲಾಯಿತು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಯಶೋಧರ ಶಾಂತಿನಗರ, ರಜತ್‌ಕುಮಾರ್, ಗಿರಿಯಪ್ಪ, ತೇಜಸ್‌ರವರು ಮಾಹಿತಿ ನೀಡಿದರು. ಶಾಲಾ ಮುಖ್ಯಗುರು ಪ್ರದೀಪ್ ಬಾಕಿಲ, ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಗುರುಂಪು, ಸಹಶಿಕ್ಷಕರಾದ ಮಂಜುನಾಥ ಮಣಕವಾಡ, ಶ್ರೀಮತಿ ಚಿತ್ರಾವತಿ, ಶ್ರೀಮತಿ ತಾರಾ, ಕುಮಾರಿ ಪ್ರಮೀಳಾ, ಕುಮಾರಿ ವೀಕ್ಷಿತಾ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.