ಸಂಭ್ರಮದ ಅನಂತಾಡಿ ಮೆಚ್ಚಿ ಸಂಪನ್ನ:ಊರ ಪರವೂರ ಸಾವಿರಾರು ಭಕ್ತಾದಿಗಳು ಭಾಗಿ

0

ವಿಟ್ಲ: ಬಂಟ್ವಾಳ ತಾಲೂಕಿನ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ವರ್ಷಾವಧಿ |ಮೆಚ್ಚಿ ಜಾತ್ರೆಯು ಮಾ.6ರ೦ದು ರಾತ್ರಿ ಭಂಡಾರವೇರಿ ಮಾ.7ರಂದು ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗಿನಿಂದಲೇ ಕ್ಷೇತ್ರಕ್ಕೆ ಭಕ್ತರು ಆಗಮಿಸಿ ಹರಕೆ ಸ೦ದಾಯ ಮಾಡಿ ಪ್ರಸಾದ ಪಡೆದುಕೊಂಡರು. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಚಿವರಾದ ಬೆಳ್ಳಿಪ್ಪಾಡಿ ರಮಾನಾಥ ರೈ ಸೇರಿದಂತೆ ಊರ ಪರವೂರ ಸಾವಿರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿಟ್ಲ, ಪುತ್ತೂರು, ಉಪ್ಪಿನಂಗಡಿ, ಬಿಸಿರೋಡ್ ಕಡೆಗೆ ತೆರಳುವ ಭಕ್ತಾಧಿಗಳಿಗೆ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿತ್ತು.

LEAVE A REPLY

Please enter your comment!
Please enter your name here