ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಮೂಲ ಸ್ಥಾನ ಕಬಕ ಗ್ರಾಮದ ಕಾರ್ಜಾಲುವಿನಲ್ಲಿ ಮಾ.೧೧ರಂದು ಕಾರ್ಜಾಲು ಶ್ರೀ ಧೂಮಾವತಿ ದೈವದ ವಾರ್ಷಿಕ ದೊಂಪದ ಬಲಿ ಜಾತ್ರೋತ್ಸವ ವೈಭವದಿಂದ ನಡೆಯಿತು.
ಬೆಳಿಗ್ಗೆ ಗಣಪತಿ ಹೋಮ, ಸ್ಥಳಶುದ್ದಿ ಹೋಮ ಮತ್ತು ಕಲಶ ಪ್ರತಿಷ್ಠೆ ನಡೆಯಿತು. ತಂಬಿಲ ಸೇವೆಯ ಬಳಿಕ ಮಧ್ಯಾಹ್ನ ಕಾರ್ಜಾಲು ಧೂಮಾವತಿ, ಕಲ್ಕುಡ, ಕಲ್ಲುರ್ಟಿ ದೈವಗಳ ಸನ್ನಿಧಿಯಲ್ಲಿ ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಕಾರ್ಜಾಲು ಗುತ್ತಿನಿಂದ ಧೂಮಾವತಿ, ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳ ಭಂಡಾರವು ಬಂದ ಬಳಿಕ ಗೋಂದಳ ಪೂಜೆ ನಡೆಯಿತು. ರಾತ್ರಿ ಸುಮಾರು ೧೧.೪೫ಕ್ಕೆ ಗ್ರಾಮದೈವ ಧೂಮಾವತಿ, ಕಲ್ಕುಡ, ಕಲ್ಲುರ್ಟಿ ದೈವಗಳ ದೊಂಪದ ಬಲಿ ನೇಮೋತ್ಸವ ನಡೆಯಿತು. ದೈವದ ನರ್ತನದ ಮುಂದೆ ದೊಂಪದ ಬಲಿ ನೇಮೋತ್ಸವದ ಭಾರಿ ಉದ್ದದ ಮಡಿಲನ ಸೂಟೆಗೆ ಪರಿಚಾಕರು ಅಗ್ನಿಸ್ಪರ್ಶ ಮಾಡಿದರು. ರಾತ್ರಿ ಭಂಡಾರ ಬರುವ ಸಮದಯಲ್ಲಿ ಪುನೀತ್ ಆರ್ಕೆಸ್ಟ್ರಾ ಮತ್ತು ಸ್ವಾಮಿ ಮೆಲೋಡಿಸ್ ಅವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.