ಮೋನಪ್ಪ ಕರ್ಕೇರರವರಿಗೆ ಕರ್ನಾಟಕ ಕೃಷಿಕ ರತ್ನ ಪ್ರಶಸ್ತಿ

0

ಪುತ್ತೂರು: ಪುನರೂರಿನಲ್ಲಿ ನಡೆದ 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಕ್ಷೇತ್ರದ ಸಾಧಕ ಮುಂಡೂರು ಅಡೀಲು ನಿವಾಸಿ ಕೆ. ಮೋನಪ್ಪ ಕರ್ಕೇರರವರಿಗೆ ‘ಕರ್ನಾಟಕ ಕೃಷಿಕ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಡಾ| ಯಂ. ವೀರಪ್ಪ ಮೊಯ್ಲಿ ಮತ್ತು ಹರಿಕೃಷ್ಣ ಪುನರೂರುರವರು ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿದ ಮೋನಪ್ಪ ಕರ್ಕೇರ ಮಾತನಾಡಿ ಕೃಷಿಕರ ಪರಿಸ್ಥಿತಿಯ ನೈಜ ಚಿತ್ರಣವನ್ನು ತಿಳಿಯಬೇಕಾಗಿದೆ. ಭರವಸೆ ಮತ್ತು ಭಾಷಣಗಳಿಂದ ರೈತರ ಬದುಕು ಹಸನಾಗುವುದಿಲ್ಲ ಎಂದು ಹೇಳಿದರು. ಸಮಿತಿಯ ರಾಜ್ಯಾಧ್ಯಕ್ಷ ಡಾ| ಶೇಖರ ಅಜೆಕಾರು, ಸಮ್ಮೇಳನಾಧ್ಯಕ್ಷ ಅರುವ ಕೊರಗಪ್ಪ ಶೆಟ್ಟಿ, ಕವಿಗೋಷ್ಠಿಯ ಅಧ್ಯಕ್ಷೆ ಅರುಷ ಶೆಟ್ಟಿ ಉಪಸ್ಥಿತರಿದ್ದರು. ಸುನಿಽ ಅಜೆಕಾರು ಸ್ವಾಗತಿಸಿ ದೀಪಕ್ ಎನ್. ದುರ್ಗ ವಂದಿಸಿದರು. ಶ್ರೇಯಾ ಎಂ.ಜಿ. ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here