ನೆಲ್ಯಾಡಿ: ತಾಲೂಕು ಬಂಟರ ಸಂಘ ಪುತ್ತೂರು ಇದರ ಮಾರ್ಗದರ್ಶನದೊಂದಿಗೆ ವಲಯ ಬಂಟರ ಸಂಘ ನೆಲ್ಯಾಡಿ ಇದರ ನೇತೃತ್ವದಲ್ಲಿ ನೆಲ್ಯಾಡಿ ಪಟ್ಟೆ ನಿವಾಸಿ ಸುಗುಣ ಬಾಲಕೃಷ್ಣ ಶೆಟ್ಟಿಯವರ ಪುತ್ರಿ ಶ್ರುತಿಯವರ ವಿವಾಹಕ್ಕೆ ಆರ್ಥಿಕ ಸಹಾಯ ನೀಡಲಾಯಿತು.
ಬಂಟ ಬಂಧುಗಳಿಂದ ಸಂಗ್ರಹವಾದ 87,506 ರೂಪಾಯಿಯನ್ನು ಹಸ್ತಾಂತರಿಸಲಾಯಿತು.
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ, ಮಾತೃ ಸಂಘದ ಪುತ್ತೂರು ತಾಲೂಕು ಸಂಚಾಲಕರಾದ ದಯಾನಂದ ರೈ ಮನವಳಿಕೆಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ, ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ಮನವಳಿಕೆ, ತಾಲೂಕು ಮಹಿಳಾ ಬಂಟರ ಸಂಘದ ಕೋಶಾಧಿಕಾರಿ ಹಾಗೂ ನೆಲ್ಯಾಡಿ ವಲಯ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ವಾಣಿ ಸುಂದರ ಶೆಟ್ಟಿ, ವಲಯ ಕೋಶಾಧಿಕಾರಿ ರತ್ನಾಕರ್ ಶೆಟ್ಟಿ ಅಶ್ವಮೇಧ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.