




ಬಡಗನ್ನೂರು: ಶ್ರೀ ಮೂಕಾಂಬಿ ಗುಳಿಗ ದೈವದ ದೈವಸ್ಥಾನ ನೂಚಿಲೋಡು ಪೆರಿಗೇರಿ ಬಡಗನ್ನೂರು ಇದರ ಪುನರ್ ಪ್ರತಿಷ್ಠಾ ಮಹೋತ್ಸವ ಮಾ.16 ರಂದು ಆರಂಭಗೊಂಡಿತು.




ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನು ವಾಸುದೇವ ಭಟ್ ಕೊಲ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ವೆಂಕಟರಾಜು ಹರಸಿನಕೆರೆ, ವಿನಯ ಭಟ್ ನೂಜಿಲೋಡು, ಅಂಗನವಾಡಿ ಕಾರ್ಯಕರ್ತೆ ಲಲಿತ ಬೆಳಿಯಪ್ಪ ಗೌಡ ಕನ್ನಯ ಹಾಗೂ ಅಂಗನವಾಡಿ ಪುಟಾಣಿಗಳು ಉಪಸ್ಥಿತರಿದ್ದರು.





ಬಳಿಕ ಕೋಡಿಯಡ್ಕ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪ್ರಸಾದ ಕನ್ನಯ ನಿರೂಪಿಸಿದರು.

ಸಂಜೆ ಗಂ 5 ರಿಂದ ತಂತ್ರಿಗಳ ಅಗಮನ, 7 ರಿಂದ ದೇವತಾ ಪ್ರಾರ್ಥನೆ, ಆಚಾರ್ಯ ವರ್ಣ, ಪುಣ್ಯಾಹವಾಚನ,ಸ್ಥಳಶುದ್ಧಿ, ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ಮತ್ತು ಅಘೋರ ಹವನ ನಡೆಯಿತು. ಕಾರ್ಯಕ್ರಮದಲ್ಲಿ ನೂಚಿಲೋಡು ಮನೆಯವರು ಮತ್ತು ಊರ ಭಕ್ತಾಧಿಗಳು ಭಾಗವಹಿಸಿದ್ದರು.
ಮಾ.17 ರಂದು ಬೆಳಗ್ಗೆ ಗಂ 7 ಕ್ಕೆ ಗಣಪತಿ ಹೋಮ, ಬಳಿಕ ಪೆರಿಗೇರಿ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ. ದಿವಾಗಂಟೆ 10.54 ರಿಂದ 11.40 ರ ಒಳಗಿನ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಮೂಕಾಂಬಿ ಗುಳಿಗ ದೈವದ ಪುನರ್ ಪ್ರತಿಷ್ಠೆ ನಡೆಯಿತು.
ಮಧ್ಯಾಹ್ನ ಗಂ 12 ರಿಂದ ಸಭಾ ಕಾರ್ಯಕ್ರಮ.ಮಧ್ಯಾಹ್ನ 1.30 ಕ್ಕೆ ಪ್ರಸಾದ ಭೋಜನ ನಡೆಯಲಿದೆ. ಸಂಜೆ ಗಂ 6 ರಿಂದ ಶ್ರೀ ಸತ್ಯನಾರಾಯಣ ಪೂಜೆ, 7 ರಿಂದ ಶೇಷನ್ ನೇತೃತ್ವದಲ್ಲಿ ಅಲಂತಡ್ಕ ವನಶಾಸ್ತಾರ ಭಜನಾ ತಂಡದ ಸದಸ್ಯರಿಂದ ಕುಣಿತ ಭಜನೆ ,ರಾತ್ರಿ 8 ಕ್ಕೆ ಭಂಡಾರ ತೆಗೆಯುವುದು, ಬಳಿಕ ಅನ್ನಸಂತರ್ಪಣೆ ರಾತ್ರಿ ಗಂ 8.30 ರಿಂದ ಯಕ್ಷಸಾರಥಿ ಯಕ್ಷಬಳಗ ಪುತ್ತೂರು ಇವರಿಂದ `ಧಕ್ಷಾಧ್ವರ’ ಯಕ್ಷಗಾನ ನಡೆಯಲಿದೆ. ರಾತ್ರಿ ಗಂ 11 ಕ್ಕೆ ಶ್ರೀ ಮುಕಾಂಬಿ ಗುಳಿಗ ದೈವದ ಕೋಲ, ಪಾತಃ ಕಾಲ 4.30 ಕ್ಕೆ ದೈವದ ಅರಸಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.









